ಕೊರೋನಾವೈರಸ್‌ ಸೋಂಕು ಪತ್ತೆಗೆ ಗೂಗಲ್‌ನಿಂದ ಹೊಸ ವೆಬ್‌ಸೈಟ್‌ ಶುರು

By Suvarna News  |  First Published Mar 16, 2020, 5:21 PM IST
  • ತನ್ನ ಕದಂಬ ಬಾಹುಗಳನ್ನು ವಿಸ್ತರಿಸುತ್ತಿರುವ ಕೊರೋನಾವೈರಸ್
  • COVID-19ಗೆ ಜಗತ್ತಿನಾದ್ಯಂತ 6000ಕ್ಕಿಂತಲೂ ಹೆಚ್ಚು ಮಂದಿ ಬಲಿ
  • ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರ, ಸಂಸ್ಥೆಗಳು
  • ಅಮೆರಿಕಾ ಸರ್ಕಾರದೊಂದಿಗೆ ಕೈಜೋಡಿಸಿರುವ ಟೆಕ್‌ ದೈತ್ಯ ಗೂಗಲ್‌

ಬೆಂಗಳೂರು (ಮಾ.16): ಅಮೆರಿಕಾದ ಲಾಸಂಜಲೀಸ್‌ನಿಂದ ಹಿಡಿದು ಇತ್ತ ನ್ಯೂಜಿಲ್ಯಾಂಡ್‌ವರೆಗೂ  ಕೊರೋನಾವೈರಸಿನದ್ದೇ  ಕೋಲಾಹಾಲ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ, ವಿಜ್ಞಾನಿಗಳಿಂದ ಹಿಡಿದು ರಾಜಕೀಯ ನಾಯಕರವೆರೆಗೂ ಬರೇ ಇದೇ ಚಿಂತೆ.   

ಚೀನಾದಲ್ಲಿ ಹುಟ್ಟಿಕೊಂಡ ಕೊರೋನಾವೈರಸ್ ಸೋಂಕು (ಕೋವಿಡ್-19) ಈಗ ಜಾಗತಿಕ ಪಿಡುಗಾಗಿ ಮಾರ್ಪಟ್ಟಿದೆ. 

Tap to resize

Latest Videos

undefined

ಒಂದು ಕಡೆ ವಿಜ್ಞಾನಿಗಳು ಈ ಸೋಂಕಿಗೆ ಮದ್ದು ಕಂಡು ಹುಡುಕಲು ಅಹರ್ನಿಶಿ ದುಡಿಯುತ್ತಿದ್ದರೆ, ಇನ್ನೊಂದು ಕಡೆ ಕಾಯಿಲೆ ಹರಡುವಿಕೆಯನ್ನು ತಡೆಯಲು ಸರ್ಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ.

ಇದನ್ನೂ ಓದಿ | ಏ.1ರಿಂದ ಮೊಬೈಲ್‌ ಫೋನ್‌ ಬಲು ದುಬಾ​ರಿ!...

ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೊಡಿಸಿರುವ ಟೆಕ್‌ ದೈತ್ಯ ಗೂಗಲ್, ಕೊರೋನಾವೈರಸ್ ಹೆಲ್ತ್‌ ಚೆಕಪ್‌ಗಾಗಿ ಹೊಸ ವೆಬ್‌ಸೈಟೊಂದಕ್ಕೆ ಚಾಲನೆ ನೀಡಿದೆ. ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲದಿನಗಳ ಹಿಂದೆಯೇ ಸುಳಿವು ಕೊಟ್ಟಿದ್ದರು ಕೂಡಾ. 

ಸದ್ಯ ಕ್ಯಾಲಿಫೋರ್ನಿಯಾ ನಿವಾಸಿಗಳು ಮಾತ್ರ ಈ ವೆಬ್‌ಸೈಟ್‌ನಿಂದ ಮಾತ್ರ ಪ್ರಯೋಜನ ಪಡೆಯಬಹುದಾಗಿದ್ದು, COVID-19 ಬಗ್ಗೆ ಆನ್‌ಲೈನ್ ಸ್ಕ್ರೀನರ್ ಪ್ರಶ್ನಾವಳಿಗಳಿಗೆ ಉತ್ತರಿಸಬೇಕು.

“We are fully aligned and continue to work with the US Government to contain the spread of COVID-19, inform citizens, and protect the health of our communities. (1/6) https://t.co/eI1uXra6AB

— Google Communications (@Google_Comms)

ಉತ್ತರಗಳ ಆಧಾರದಲ್ಲಿ, ಆ ವ್ಯಕ್ತಿ ಮುಂದಿನ ಪರೀಕ್ಷೆಗೊಳಪಡಬೇಕೋ ಇಲ್ಲವೋ ಗೊತ್ತಾಗುತ್ತದೆ. ಅಷ್ಟೇ ಅಲ್ಲ,  ಆ ವ್ಯಕ್ತಿಗೆ ಹತ್ತಿರವಿರುವ ಮೊಬೈಲ್ ಲ್ಯಾಬ್‌ಗಳ ಕುರಿತು ಮಾಹಿತಿಯನ್ನೂ ಒದಗಿಸುತ್ತದೆ. 

ಅಲ್ಲಿ ಹೋಗಿ, ಆ ವ್ಯಕ್ತಿ ಇನ್ನಿತರ ವೈದ್ಯಕೀಯ ಪರೀಕ್ಷೆಗೊಳಪಡಬೇಕು. ಕೆಲದಿನಗಳಲ್ಲಿ  COVID-19 ಇದೆಯೋ ಇಲ್ಲವೋ ಎಂದು ಖಚಿತವಾಗುತ್ತದೆ. ಈ ಎಲ್ಲಾ ಸೇವೆಗಳು ಉಚಿತವಾಗಿವೆ.

ಇದನ್ನೂ ಓದಿ | ಬಂದಿದೆ ವಿನೂತನ ಆ್ಯಪ್‌; ಸ್ಮಾರ್ಟ್‌ಫೋನಲ್ಲೇ ಬ್ಯಾಂಕ್, ಇನ್ಶೂರೆನ್ಸ್, ಸಾಲ!...

ಈ ವೆಬ್‌ಸೈಟ್‌ ಹೇಗೆ ಕೆಲಸ ಮಾಡುತ್ತದೆ?

ವೆಬ್‌ಸೈಟ್‌ಗೆ ಭೇಟಿ ಕೊಡಿ (https://www.projectbaseline.com/study/covid-19/). ಬಳಿಕ Get Started ಬಟನ್‌ ಪ್ರೆಸ್ ಮಾಡಿ.  ಈ ಆನ್‌ಲೈನ್‌ ಕೊರೋನಾವೈರಸ್‌ ಪರೀಕ್ಷೆಗೊಳಪಡಬೇಕಾದರೆ,

1. ವಯಸ್ಸು 18 ಆಗಿರಬೇಕು
2. ಅಮೆರಿಕಾ ನಿವಾಸಿಯಾಗಿರಬೇಕು
3. ಟೆಸ್ಟಿಂಗ್ ಸೌಲಭ್ಯ ಇರುವ ದೇಶದಲ್ಲಿ ವಾಸವಾಗಿರಬೇಕು
4. COVID-19 ಪಬ್ಲಿಕ್ ಹೆಲ್ತ್ ಆರ್ಗನೈಝೇಶನ್ ಅರ್ಜಿಗೆ ಸಹಿ ಹಾಕಬೇಕು
5. ಇಂಗ್ಲಿಷ್  ಓದಲು, ಮಾತನಾಡಲು ಬಲ್ಲವನಾಗಿರಬೇಕು

ಸದ್ಯಕ್ಕೇ ಈ ಸೌಲಭ್ಯ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಅಗತ್ಯಾನುಸಾರ ಈ ಸೇವೆಯನ್ನು ಇತರೆಡೆಗೂ ವಿಸ್ತರಿಸಲಾಗುವುದು ಎಂದು ಕಂಪನಿಯು ಹೇಳಿದೆ.

click me!