ಬೆಂಗಳೂರಿನಲ್ಲಿ ಏಕಕಾಲಕ್ಕೆ 50 ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಆರಂಭ

By Suvarna News  |  First Published May 6, 2022, 1:52 PM IST

ವೈಟ್‌ಫೀಲ್ಡ್ನ  ಫೋರಂ ನೈಬರ್‌ಹುಡ್ ಮಾಲ್  ನಲ್ಲಿ ನೂತನ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಆರಂಭವಾಗಿದೆ.


ಮಹದೇವಪುರ (ಮೇ.6) : ತೈಲೋತ್ಪನಗಳು ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವುದರಿಂದ ಇವುಗಳಿಗೆ ಅವಲಂಬಿತರಾಗಿರುವ ವಾಹನ ಸವಾರರು ಹೈರಾಣರಾಗಿದ್ದಾರೆ, ಇವುಗಳಿಗೆ  ಪರ್ಯಾಯಾವಾಗಿ ಭಾರತದಲ್ಲಿ ಎಲೆಕ್ಟ್ರಿಕ್  ವಾಹನಗಳ ಬಳಕೆಯನ್ನ ಉತ್ತೇಜಿಸುವ ಸಲುವಾಗಿ ಸರ್ಕಾರಗಳು ಹಲವು ರೀತಿಯ ಕ್ರಮಗಳಿಗೆ ಮುಂದಾಗಿವೆ, ಇವೊಂದು ನಿಟ್ಟಿನಲ್ಲಿ ಬೆಂಗಳೂರಿನ ಮಹದೇವಪುರದಲ್ಲಿ ಎಲ್ಲಾ ಬಗೆಯ ವಾಹನಗಳ ರೀಚಾರ್ಜ್ ಹಬ್ ಆರಂಭವಾಗಿದೆ ಈ ಸೆಂಟರ್ ಗೆ ಶಾಸಕ.ಅರವಿಂದ ಲಿಂಬಾವಳಿ (Aravind Limabavali) ಚಾಲನೆ ನೀಡಿದರು

ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್‌ಫೀಲ್ಡ್ (Whitefield) ನ ಫೋರಂ ನೈಬರ್‌ಹುಡ್ ಮಾಲ್ (Neighbourhood Mall) ನಲ್ಲಿ ನೂತನ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ (electric vehicle charging infrastructure firm) ಉದ್ಘಾಟಿಸಲಾಯಿತು.

Tap to resize

Latest Videos

 

ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್‌ಫೀಲ್ಡ್ ನ ಫೋರಂ ನೈಬರ್‌ಹುಡ್ ಮಾಲ್ ನಲ್ಲಿ ನೂತನ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಲಾಯಿತು.
(1/3) pic.twitter.com/uGMsnGL2nK

— Aravind Limbavali (@ArvindLBJP)

ಇಲ್ಲಿ ಒಂದೇ ಬಾರಿಗೆ 50 ವಿದ್ಯುತ್ ಚಾಲಿತ ಕಾರುಗಳನ್ನು ಚಾರ್ಚ್ ಮಾಡುವ ವ್ಯವಸ್ಥೆ ಇದ್ದು, ಇದು ದಕ್ಷಿಣ ಭಾರತದ ಅತಿದೊಡ್ಡ ವಿದ್ಯುತ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರಿಸರ ರಕ್ಷಣೆಯ ಆಶಯಕ್ಕೆ ಪೂರಕವಾಗಿರಲಿದೆಯೆಂದ ಶಾಸಕ ಅರವಿಂದ ಲಿಂಬಾವಳಿ.  ಇದೇ ಸಂದರ್ಭದಲ್ಲಿ ಈ ಚಾರ್ಜಿಂಗ್ ಘಟಕವನ್ನು ಪ್ರಾರಂಭಿಸಿದ ಫಿನ್ಲ್ಯಾಂಡ್ ಮೂಲದ ಫಾರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಕಂಪನಿಯ ಪದಾಧಿಕಾರಿಗಳಿಗೆ ಧನ್ಯವಾದವನ್ನು ತಿಳಿಸುತ್ತಾ ಬೆಂಗಳೂರಿನ ಜನತೆ ಇವೊಂದು ಸೌಲಭ್ಯ ಬಳಸಿಕೊಳ್ಳಲಿಯೆಂದರು.

undefined

PSI recruitment scam ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

 

 

ಇದೇ ಸಂದರ್ಭದಲ್ಲಿ ಈ ಚಾರ್ಜಿಂಗ್ ಘಟಕವನ್ನು ಪ್ರಾರಂಭಿಸಿದ ಫಿನ್ಲ್ಯಾಂಡ್ ಮೂಲದ ಫಾರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಕಂಪನಿಯ ಪದಾಧಿಕಾರಿಗಳಿಗೆ ಧನ್ಯವಾದವನ್ನು ತಿಳಿಸಿದೆ.

ಈ ಸಂದರ್ಭದಲ್ಲಿ ಕಂಪನಿಯ ಮುಖ್ಯಸ್ಥರಾದ ಅವದೇಶ್ ಜಾ, ಫೋರಂ ವ್ಯಾಲ್ಯೂ ಮಾಲ್ ವ್ಯವಸ್ಥಾಪಕರಾದ ಶ್ರೀ ಅನಂತ್, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
3/3

— Aravind Limbavali (@ArvindLBJP)

ಈ ಸಂದರ್ಭದಲ್ಲಿ ಫಾರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಕಂಪನಿಯ ಮುಖ್ಯಸ್ಥರಾದ ಅವದೇಶ್ ಜಾ, ಫೋರಂ ವ್ಯಾಲ್ಯೂ ಮಾಲ್ ವ್ಯವಸ್ಥಾಪಕರಾದ ಶ್ರೀ ಅನಂತ್, ಡಬ್ಲುಟಿಎಪ್ ಮಾಲೀಕ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

ಕೊಲ್ಲೂರು ಮಠದ ಸ್ವಾಮೀಜಿ ಹೆಸರಿನಲ್ಲಿ ವಂಚನೆ, ಲಕ್ಷಗಟ್ಟಲೆ ಕಿತ್ತ ಕಿರಾತಕರು!

ಚಾರ್ಜಿಂಗ್ ಹಬ್ ಎಲ್ಲಾ ರೀತಿಯ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಜೊತೆಗೆ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಕೂಡ ಚಾರ್ಚ್ ಮಾಡುವ ವ್ಯವಸ್ಥೆ ಇದೆ. ಇಲ್ಲಿ   60KW CCS ಚಾರ್ಜಿಂಗ್ ಪಾಯಿಂಟ್‌ಗಳು 10 ,  15 KW DC001 ಚಾರ್ಜಿಂಗ್ ಪಾಯಿಂಟ್‌ಗಳು 4 , ಮತ್ತು    7.4KW ಟೈಪ್-2 AC ಚಾರ್ಜಿಂಗ್ 36 ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಹೀಗೆ ಏಕಕಾಲಕ್ಕೆ  50 ಕಾರುಗಳನ್ನು ಚಾರ್ಜ್ ಮಾಡುವ ವ್ಯವಸ್ಥೆ ಇದೆ. 

ಬೆಂಗಳೂರಿನಲ್ಲಿ 45,000 ಎಲೆಕ್ಟ್ರಿಕ್ ವಾಹನ ಬಳಕೆದಾರರಿದ್ದಾರೆ, ಇದು ಇವಿಗಳ ಬೇಡಿಕೆ ಹೆಚ್ಚುತ್ತಿದೆ ಎಂದು ಸೂಚಿಸುತ್ತದೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳಿಂದ ಗ್ರಾಹಕರ ನಡವಳಿಕೆಯು ICE ಆಟೋಮೊಬೈಲ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಚಾರ್ಮಾಡಿ ಘಾಟ್ ನಲ್ಲಿ ಕಾರು ಅಪಘಾತ, ಹಣ ಚಿನ್ನ ದೋಚಿದ ದರೋಡೆಕೋರರು!

click me!