ಕತ್ತಲಾದ್ರೆ ಏನಾಯಿತು? ವಾಟ್ಸಪ್ ಕೊಡ್ತಾ ಇದೆ ಹೊಸ ಫೀಚರ್!

By Web Desk  |  First Published Jan 22, 2019, 9:07 PM IST

ಭಾರತದಲ್ಲಿ 22 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಒಡೆತನದ ವಾಟ್ಸಪ್; ಬಳಕೆದಾರರ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ನೀಡಲಿದೆ ಹೊಸ ಫೀಚರ್ 


ಫೇಸ್ಬುಕ್ ಒಡೆತನದ ಜನಪ್ರಿಯ ಮೆಸೇಜಿಂಗ್ ಸೇವೆ WhatsApp, 2018ರಲ್ಲಿ ಬಳಕೆದಾರರಿಗೆ ಹಲವಾರು ನೂತನ ಫೀಚರ್‌ಗಳನ್ನು ನೀಡಿದೆ. ಆ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುತ್ತಾ ಬಂದಿದೆ.

WhatsAppಗೆ ಭಾರತ ಪ್ರಮುಖ ಮಾರುಕಟ್ಟೆಗಳಲ್ಲೊಂದು. ಚಾಟಿಂಗ್ ಸೇವೆಗಳ ಪೈಕಿ WhatsApp ಮುಂಚೂಣಿಯಲ್ಲಿದೆ. ಈ ಸ್ಥಾನವನ್ನು ಕಾಪಾಡಲು WhatsApp ಹೊಸ ಹೊಸ ಸೌಲಭ್ಯಗಳನ್ನು ಒದಗಿಸುವ ಮೂಲಕ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. 

Tap to resize

Latest Videos

WhatsApp Gold ಮೆಸೇಜ್ ನಿಮಗೂ ಬಂದಿದೆಯಾ? ಹಾಗಾದ್ರೆ ಈ ಸ್ಟೋರಿ ಓದಿ!

ಗ್ರೂಪ್ ವಿಡಿಯೋ, ವಾಯ್ಸ್ ಕಾಲಿಂಗ್,  ಪಿಕ್ಚರ್ ಇನ್ ಪಿಕ್ಚರ್ (PiP), ಸ್ಟಿಕ್ಕರ್ಸ್, ಫಾರ್ವರ್ಡ್‌ಗಳ ಮೇಲೆ ಮಿತಿ, ಫಾರ್ವರ್ಡ್ ಲೇಬಲ್ ಮುಂತಾದ ಫೀಚರ್‌ಗಳನ್ನು ಕಳೆದ ವರ್ಷ WhatsApp ಪರಿಚಯಿಸಿದೆ.2019ರಲ್ಲೂ ಹೊಸ ಫೀಚರ್‌ಗಳ ಸರಣಿ ಮುಂದುವರಿಯುವ ನಿರೀಕ್ಷೆಯಿದೆ. ಹೊಸ ಫೀಚರ್‌ಗಳ ಪೈಕಿ ಡಾರ್ಕ್ ಮೋಡ್ ಪ್ರಮುಖವಾಗಿದೆ.

‘ನಾವಾಡಿದ್ದೇ ಆಟ’ದ ಕಾಲ ಮುಗೀತು; ಹೊಸ ವಾಹನಗಳಿಗೆ ಬಂತು ಹೊಸ ಸಿಸ್ಟಮ್!

ಆ್ಯಂಡ್ರಾಯಿಡ್ ಬಳಕೆದಾರರಿಗೆ ಡಾರ್ಕ್ ಮೋಡ್ ಫೀಚರ್ ವರ್ಷದಾರಂಭದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.  ಕತ್ತಲಲ್ಲಿ/ ರಾತ್ರಿ ಹೊತ್ತಿನಲ್ಲಿ ಸಾಮಾನ್ಯ ಪರದೆಯಲ್ಲಿ WhatsApp ಬಳಸುವವರಿಗೆ ಕಣ್ಣಿನ ಮೇಲೆ ಒತ್ತಡ ಬೀಳುವುದನ್ನು ಕಡಿಮೆ ಮಾಡಲು ಬಳಸುವ ಫೀಚರ್ ಡಾರ್ಕ್ ಮೋಡ್.  ಬ್ರೈಟ್‌ನೆಸ್ ಕಡಿಮೆಯಾಗಿಸುವ ಮೂಲಕ ಕಣ್ಣಿನ ಮೇಲೆ ಬೀಳುವ ಒತ್ತಡವನ್ನು ನಿಯಂತ್ರಿಸಬಹುದು. ಜತೆಗೆ, ಈ ಫೀಚರ್‌ನಿಂದಾಗಿ OLED ತಂತ್ರಜ್ಞಾನಾಧಾರಿತ ಪರದೆಯಿರುವ ಮೊಬೈಲ್‌ಗಳ ಬ್ಯಾಟರಿಯ ಚಾರ್ಜನ್ನು ಕೂಡಾ ಉಳಿಸಬಹುದಾಗಿದೆ.

ಸಾಮಾಜಿಕ ಜಾಲತಾಣಗಳ ಪೈಕಿ, ಟ್ವಿಟರ್‌ನಲ್ಲಿ ಈಗಾಗಲೇ ನೈಟ್ ಮೋಡ್ ಎಂಬ ಆಯ್ಕೆ ಇದೆ.   

click me!