ವಾಟ್ಸಪ್‌ ಹೊಸ ಮೈಲಿಗಲ್ಲು; ಆ್ಯಪ್‌ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರಗಳು

By Suvarna NewsFirst Published Jan 21, 2020, 8:22 PM IST
Highlights

ಹೊಸ ಮೈಲಿಗಲ್ಲು ದಾಟಿದ ವಾಟ್ಸಪ್‌;  ಹತ್ತು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ವಾಟ್ಸಪ್; ವಾಟ್ಸಪ್‌ ಬಗ್ಗೆ ಇಲ್ಲಿದೆ ಕೆಲವು ಕುತೂಹಲಕಾರಿ ವಿಚಾರಗಳು
 

ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಪ್ ಈಗ ಹೊಸ ಮೈಲಿಗಲ್ಲನ್ನು ದಾಟಿದೆ. ಗೂಗಲ್‌ ಪ್ಲೇಸ್ಟೋರ್‌ನಿಂದ ಜಾಗತಿಕವಾಗಿ 5 ಬಿಲಿಯನ್‌ ಮಂದಿ ವಾಟ್ಸಪ್‌ನ್ನು ಡೌನ್‌ಲೋಡ್‌ ಮಾಡಿದ್ದಾರೆ.

ಗೂಗಲ್‌ ಹಾಗೂ ಅದರಡಿಯಲ್ಲಿ ಬರುವ ಆ್ಯಪ್‌ಗಳನ್ನು ಹೊರತುಪಡಿಸಿ, 5 ಬಿಲಿಯನ್ ಮೈಲಿಗಲ್ಲು ದಾಟಿದ ಎರಡನೇ ಆ್ಯಪ್‌ ಎಂಬ ಹೆಗ್ಗಳಿಕೆಗೆ ವಾಟ್ಸಪ್ ಪಾತ್ರವಾಗಿದೆ.  ವಾಟ್ಸಪ್ ಮಾತೃಕಂಪನಿ ಫೇಸ್ಬುಕ್ ಮೊದಲನೆಯದ್ದು.

ಕಳೆದ ಫೆಬ್ರವರಿಯಲ್ಲಿ ವಾಟ್ಸಪ್‌ಗೆ 10 ವಸಂತಗಳು ತುಂಬಿವೆ. 2009ರಲ್ಲಿ ಯಾಹೂ ಕಂಪನಿಯ ಇಬ್ಬರು ಮಾಜಿ ಉದ್ಯೋಗಿಗಳಾದ  ಬ್ರೈನ್ ಆಕ್ಟಾನ್ ಮತ್ತು ಜಾನ್ ಕೌನ್ ಸೇರಿ ವಾಟ್ಸಪನ್ನು ಆರಂಭಿಸಿದ್ದರು. 2014ರಲ್ಲಿ ಫೇಸ್ಬುಕ್‌ ವಾಟ್ಸಪ್‌ನ್ನು ಖರೀದಿಸಿತ್ತು.

ಇದನ್ನೂ ಓದಿ | ವಾಟ್ಸಪ್‌ನಲ್ಲಿ ಹೊಸ ಫೀಚರ್; ಈಗ ನೀವೇ ಬಾಸ್, ನೀವೇ ಸ್ಪೆಶಲ್!...

ಒಂದು ಅಂದಾಜಿನ ಪ್ರಕಾರ ಪ್ರತಿನಿತ್ಯ 1 ಮಿಲಿಯನ್ ಮಂದಿ ವಾಟ್ಸಪ್‌ನಲ್ಲಿ ರಿಜಿಸ್ಟರ್ ಆಗ್ತಾರೆ. 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ವಾಟ್ಸಪ್ ಹೊಂದಿದ್ದು, ಬ್ರೆಝಿಲ್‌ನಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಅಂದ ಹಾಗೆ, ಸುಮಾರು 180 ದೇಶದಲ್ಲಿ ಬಳಸಲ್ಪಡುತ್ತಿರುವ ವಾಟ್ಸಪ್‌ಗೆ 12 ದೇಶಗಳಲ್ಲಿ ನಿಷೇಧ ಹೇರಲಾಗಿದೆ. 3 ಮಿಲಿಯನ್ ಕಂಪನಿಗಳು ವಾಟ್ಸಪ್‌ ಬಿಸ್ನೆಸ್‌ ಬಳಸುತ್ತಿವೆ.

ಬಳಕೆದಾರನೊಬ್ಬ  ದಿನಕ್ಕೆ ಸರಾಸರಿ 23 ಬಾರಿ ವಾಟ್ಸಪ್‌ನ್ನು ಚೆಕ್ ಮಾಡ್ತಾನಂತೆ. ದಿನಕ್ಕೆ 2 ಬಿಲಿಯನ್ ನಿಮಿಷದ ಆಡಿಯೋ ಮತ್ತು ವಿಡಿಯೋ ಸಂದೇಶಗಳನ್ನು ಕಳುಹಿಸಲಾಗುತ್ತದೆ.

ಇದನ್ನೂ ಓದಿ | ವಾಟ್ಸಪ್‌ನಿಂದ 4 ಹೊಸ ಫೀಚರ್; ಬಳಕೆದಾರರಿಗೆ ಯಾವುದಕ್ಕೂ ಇನ್ನಿಲ್ಲ ಬೇಜಾರ್!...

ವಾಟ್ಸಪ್‌ ಇಷ್ಟು ಬೆಳೆಯಬೇಕಾದರೆ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಭಾವಿಸಿದರೆ ಅದು ತಪ್ಪು.  ವಾಟ್ಸಪನ್ನು ಕಟ್ಟಿ ಬೆಳೆಸಿದ್ದು ಬರೇ 50 ಇಂಜಿನಿಯರ್‌ಗಳು ಮತ್ತು 55 ಇನ್ನಿತರ ಉದ್ಯೋಗಿಗಳು! ಕಂಪನಿಯು ಮಾರ್ಕೆಟಿಂಗ್‌ ಸಿಬ್ಬಂದಿಯನ್ನು ನೇಮಕಮಾಡಿಕೊಳ್ಳಲ್ಲ.

click me!