ಭಾನುವಾರ ಸಂಜೆ 4ರ ಸುಮಾರಿಗೆ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌ನಲ್ಲಿ ಫೋಟೋ, ವಿಡಿಯೋ, ಸ್ಟಿಕರ್ ಹಾಗೂ ಜಿಫ್ ಫೈಲ್‌ಗಳು ಡೌನ್ ಲೋಡ್ ಆಗುತ್ತಿರಲಿಲ್ಲ. ಅಪ್ ಲೋಡ್ ಮಾಡಲೂ ಕಷ್ಟವಾಗು ತ್ತಿತ್ತು. ಇದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು.
ನವದೆಹಲಿ (ಜ.20): ವಿಶ್ವಾದ್ಯಂತ ನೂರಾರು ಕೋಟಿ ಜನರು ಬಳಸುವ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್ ಭಾನುವಾರ ಸಂಜೆ 2-3 ತಾಸು ಸ್ತಬ್ಧಗೊಂಡ ಘಟನೆ ನಡೆದಿದೆ. ಇದರಿಂದಾಗಿ ವಾಟ್ಸ್‌ಆ್ಯಪ್ ಬಳಕೆದಾರರು ಚಡಪಡಿಸಿದ್ದಾರೆ. ಅನ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ಸಂಜೆ 4ರ ಸುಮಾರಿಗೆ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌ನಲ್ಲಿ ಫೋಟೋ, ವಿಡಿಯೋ, ಸ್ಟಿಕರ್ ಹಾಗೂ ಜಿಫ್ ಫೈಲ್‌ಗಳು ಡೌನ್ ಲೋಡ್ ಆಗುತ್ತಿರಲಿಲ್ಲ. ಅಪ್ ಲೋಡ್ ಮಾಡಲೂ ಕಷ್ಟವಾಗು ತ್ತಿತ್ತು. ಇದರ ಜತೆಗೆ ಸ್ಟೇಟಸ್ ಫೋಟೋ, ವಿಡಿಯೋ ವೀಕ್ಷಣೆ ಅಸಾಧ್ಯವಾಗಿತ್ತು. ಆದರೆ ಟೆಕ್ಸ್ಟ್ ಸಂದೇಶ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿತ್ತು. ತುರ್ತಾಗಿ ಫೋಟೋ, ವಿಡಿಯೋ ಕಳುಹಿಸಬೇಕಾ ದವರು, ಸ್ವೀಕರಿಸ ಬೇಕಾದವರು ಸಮಸ್ಯೆಗೆ ತುತ್ತಾದರು. ಸಂಜೆ 5 ರ ವೇಳೆಗೆ ಕೆಲವು ಬಳಕೆದಾರರಿಗೆ ಸಮಸ್ಯೆ ಸರಿಹೋದ ಅನುಭವವಾಯಿತು.
ನೆಟ್ ಸುರಕ್ಷತೆ: ಈ ಐದು ಅಂಶಗಳನ್ನು ಮರೆಯದಿರಿ...
ಇನ್ನೂ ಕೆಲವರು ಸಂಜೆ 6 ಕಳೆದರೂ ಪರದಾಡುತ್ತಿದ್ದರು. ಸಂಜೆ 6.45ರ ವೇಳೆಗೆ ವಾಟ್ಸ್‌ಆ್ಯಪ್ ಸಹಜಸ್ಥಿತಿಗೆ ಮರಳಿತು ಎಂದು ಮೂಲಗಳು ತಿಳಿಸಿವೆ. ಭಾರತ ಮಾತ್ರವೇ ಅಲ್ಲದೇ ಯುರೋಪ್, ಮಲೇಷ್ಯಾ, ಇಂಡೋನೇಷ್ಯಾ, ಬ್ರೆಜಿಲ್ ಸೇರಿ ಹಲವು ದೇಶಗಳಲ್ಲಿ ವಾಟ್ಸ್‌ಆ್ಯಪ್ ಬಳಕೆದಾರರು ಸಮಸ್ಯೆ ಅನುಭವಿಸಿದ್ದಾರೆ. ಏಕಾಏಕಿ ವ್ಯಾಟ್ಸ್‌ಆ್ಯಪ್ ಸ್ಥಗಿತಗೊಂಡಿದ್ದಕ್ಕೆ ಟ್ವಿಟರ್ ಮೂಲಕ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದರೆ, ಇನ್ನೂ ಕೆಲವರು ಟ್ರೋಲ್ ಮಾಡುವ ಮೂಲಕ ವ್ಯಾಟ್ಸ್‌ಆ್ಯಪ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು.
ಬಳಕೆದಾರರಿಂದ ದೂರುಗಳು ಬರುತ್ತಿದ್ದಂತೆಯೇ ಪ್ರತಿಕ್ರಿಯಸಿದ ವ್ಯಾಟ್ಸ್‌ಆ್ಯಪ್ ತೊಂದರೆ ಸರಿ ಪಡಿಸುವುದಾಗಿ ಹೇಳಿತ್ತು. ಬಳಿಕ ಸ್ಪಷ್ಟೀಕರಣ ನೀಡಿದ ಫೇಸ್ಬುಕ್ ವಕ್ತಾರ ಇದು ವಾಡಿಕೆಯ ನಿರ್ವಹಣೆ ಕಾರ್ಯದ ವೇಳೆ ತೊಂದರೆ ಎಂದು ಹೇಳಿದ್ದಾರೆ.