ಸೋಶಿಯಲ್ ಮೀಡಿಯಾ ಅಕೌಂಟ್ ನೋಡಿ ಸರ್ಕಾರದಿಂದ ಪಿಂಚಣಿ ಸೌಲಭ್ಯ?

Published : Mar 20, 2019, 09:19 PM IST
ಸೋಶಿಯಲ್ ಮೀಡಿಯಾ  ಅಕೌಂಟ್ ನೋಡಿ ಸರ್ಕಾರದಿಂದ ಪಿಂಚಣಿ ಸೌಲಭ್ಯ?

ಸಾರಾಂಶ

ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವುದು ಸರ್ಕಾರದ ಮುಂದಿರುವ ಸವಾಲು; ಅದಕ್ಕೆ ತಂತ್ರಜ್ಞಾನದ ಮೊರೆ ಹೋಗುವುದು ಸಹಜ; ಆದರೆ, ಅಧಿಕಾರಿಗಳು ಈ ರೀತಿನೂ ಯೋಚಿಸ್ತಾರಾ?  ಏನಿದು ಪಿಂಚಣಿ ಕಥೆ? ಈ ಸ್ಟೋರಿ ಓದಿ...   

ಅಲ್ಬುಕರ್ಕ್: ಸೌಲಭ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಹಾಗೂ ಅರ್ಹರು ಅಗತ್ಯ ಸೇವೆಗಳನ್ನು ಪಡೆಯುವಂತಾಗಲು ಸರ್ಕಾರಗಳು ತಂತ್ರಜ್ಞಾನವನ್ನು ಬಳಸುತ್ತಾ ಬಂದಿವೆ.   

ಇದೀಗ ಪಿಂಚಣಿ ಸೌಲಭ್ಯಗಳನ್ನು ಅರ್ಹರಿಗೆ ಮುಟ್ಟಿಸಲು ಸಾಮಾಜಿಕ ಭದ್ರತಾ ಇಲಾಖೆಯು, ದಿವ್ಯಚೇತನರ ‘ಡಿಸೇಬಿಲಿಟಿ ಕ್ಲೇಮ್’ ಗಳನ್ನು ಖಚಿತ ಪಡಿಸಲು, ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಪರಿಶೀಲಿಸುವ ಪ್ರಸ್ತಾಪ ಮುಂದಿಟ್ಟಿದೆ.

ಇದನ್ನೂ ಓದಿ: Job ಗಾಗಿ ಬೇರೆ ಊರಿನಲ್ಲಿದ್ದೀರಾ? ಅಲ್ಲಿದ್ದುಕೊಂಡೇ ಮತ ಚಲಾಯಿಸಬಹುದು!

ಪಿಂಚಣಿ ಸೌಲಭ್ಯ ವಿತರಣೆಯಲ್ಲಿ ನಡೆಯುವ ಅವ್ಯವಹಾರಗಳನ್ನು ನಿಯಂತ್ರಿಸಲು ದಿವ್ಯಾಂಗರ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳ ಪೋಸ್ಟ್‌ಗಳನ್ನು ಪರೀಕ್ಷಿಸಿ ಅರ್ಜಿಯನ್ನು ಪರಿಶೀಲಿಸುವ ಯೋಚನೆ ಸಾಮಾಜಿಕ ಭದ್ರತೆ ಇಲಾಖೆಯದ್ದು!

ಅಂದ ಹಾಗೇ, ಇದು ಭಾರತದಲ್ಲಿ ಎಂದು ಯೋಚಿಸಿ ಟೆನ್ಶನ್ ತಕೋಬೇಡಿ. ಇಂತಹ ಕ್ರಮಕ್ಕೆ ಮುಂದಾಗಿರುವುದು ಮೆಕ್ಸಿಕೋನ ಅಲ್ಬುಕರ್ಕ್ ನಗರದ ಸಾಮಾಜಿಕ ಭದ್ರತಾ ಇಲಾಖೆ.

ಇದನ್ನು ಹೇಗೆ ಜಾರಿಗೊಳಿಸುವುದು ಎಂಬ ಬಗ್ಗೆ ಇಲಾಖೆಯು ಯಾವುದೇ ಸ್ಪಷ್ಟ ಚಿತ್ರಣ ಬಹಿರಂಗಪಡಿಸಿಲ್ಲ. ಆದರೆ,  ಈ ಕ್ರಮದಿಂದಾಗಿ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ