ಪರಾಗ್ ಅಗರವಾಲ್ ಟ್ವಿಟ್ಸ್‌ಗೆ ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್: ನೆಟ್ಟಿಗರ ರಿಯಾಕ್ಷನ್‌ ಹೇಗಿದೆ ನೋಡಿ!

By Suvarna News  |  First Published May 17, 2022, 4:44 PM IST

ಟ್ವಿಟರ್ ಸಿಇಒ ಪರಾಗ್ ಅಗರವಾಲ್, ಸೋಮವಾರ, ಕಂಪನಿಯು ಫೋನಿ ಖಾತೆಗಳನ್ನು (ಫೇಕ್‌ ಖಾತೆ) ನಿರ್ವಹಿಸುವ ಕುರಿತು ಸುದೀರ್ಘವಾದ ಥ್ರೆಡ್  ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.


Elon Musk Latest Tweet: ಟ್ವಿಟರ್ ಸಿಇಒ ಪರಾಗ್ ಅಗರವಾಲ್, ಸೋಮವಾರ, ಕಂಪನಿಯು ಫೋನಿ ಖಾತೆಗಳನ್ನು (ಫೇಕ್‌ ಖಾತೆಗಳನ್ನು ನಿರ್ವಹಿಸುವ ಕುರಿತು ಸುದೀರ್ಘವಾದ ಥ್ರೆಡ್  ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸ್ಪ್ಯಾಮ್ ಖಾತೆಗಳು ಅಂದಾಜು "5% ಕ್ಕಿಂತ ಕಡಿಮೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಕಂಪನಿಯ ಕಾರ್ಯವಿಧಾನವನ್ನು ಸಮರ್ಥಿಸಿಕೊಂಡಿರುವ ಪರಾಗ್‌ ಅಗರ್‌ವಾಲ್‌ ಟ್ವೀಟ್‌ಗೆ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್  ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. 

ಪೈಲ್ ಆಫ್ ಪೂ, ಪೂಮೋಜಿ, ಪೂಪ್ ಎಮೋಜಿ ಅಥವಾ ಪೂ ಎಮೋಜಿ ಎಂದೂ ಕರೆಯುವ ಎಮೋಜಿಯಲ್ಲಿ ಸಾಮಾನ್ಯವಾಗಿ ಕಾರ್ಟೂನ್ ಕಣ್ಣುಗಳು ಮತ್ತು ದೊಡ್ಡ ಸ್ಮೈಲಿಯಿದ್ದು, ಸುರುಳಿಯಾಕಾರದ ಮಲದ ರಾಶಿಯನ್ನು ಹೋಲುತ್ತದೆ.

Tap to resize

Latest Videos

ಪರಾಗ್ ಅಗರ್ವಾಲ್ ತಮ್ಮ ಥ್ರೆಟ್ಡ್‌ನಲ್ಲಿ  "ಸ್ಪ್ಯಾಮ್ ಬಗ್ಗೆ ಮಾತನಾಡೋಣ." ಎಂದು ಬರೆಯುವ ಮೂಲಕ ಪ್ರಾರಂಭಿಸಿದ್ದಾರೆ. ನಂತರ ಅವರು ತಮ್ಮ ನಂತರದ ಟ್ವೀಟ್‌ಗಳಲ್ಲಿ ಲಕ್ಷಾಂತರ ಸ್ಪ್ಯಾಮ್ ಖಾತೆಗಳನ್ನು ಪ್ರತಿದಿನ ಹೇಗೆ ನಿರ್ವಹಿಸಲಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ತಂಡವು ಹೇಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಆದರೆ ಸ್ಪ್ಯಾಮ್‌ ಖಾತೆಗಳ ನಿರ್ದಿಷ್ಟ ಅಂದಾಜನ್ನು ಬಾಹ್ಯವಾಗಿ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

 

Let’s talk about spam. And let’s do so with the benefit of data, facts, and context…

— Parag Agrawal (@paraga)

 

“ಈ ಉನ್ನತ ಮಟ್ಟದ ವಿವರಣೆಯಯಲ್ಲಿ ಬಹಳ ಮುಖ್ಯವಾದ ಬಹಳಷ್ಟು ವಿವರಗಳಿವೆ. ನಾವು ಒಂದು ವಾರದ ಹಿಂದೆ ಎಲಾನ್ ಅವರೊಂದಿಗೆ ಅಂದಾಜು ಪ್ರಕ್ರಿಯೆಯ ಅವಲೋಕನವನ್ನು ಹಂಚಿಕೊಂಡಿದ್ದೇವೆ ಮತ್ತು ಅವರೊಂದಿಗೆ ಮತ್ತು ನಿಮ್ಮೆಲ್ಲರೊಂದಿಗೆ ಸಂಭಾಷಣೆಯನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ, ”‌ ಎಂದು ಪರಾಗ್ ಬರೆದಿದ್ದಾರೆ. 

 

There are LOTS of details that are very important underneath this high-level description. We shared an overview of the estimation process with Elon a week ago and look forward to continuing the conversation with him, and all of you.

— Parag Agrawal (@paraga)

 

ಟ್ವಿಟ್ಟರನ್ನು ಖರೀದಿಸಲು ಸ್ಪ್ಯಾಮ್ ಖಾತೆಗಳ ಮೇಲಿನ ಮಾಹಿತಿಯ ಬಾಕಿ ಇರುವುದರಿಂದ, $44 ಶತಕೋಟಿ ಡಾಲರ್ ಒಪ್ಪಂದವನ್ನು    "ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ" ಎಂದು ಎಲಾನ್‌ ಮಸ್ಕ್ ಶುಕ್ರವಾರ ಹೇಳಿದ್ದರು.  ಕಂಪನಿಯ ಕಾರ್ಯವಿಧಾನವನ್ನು  ಸಮರ್ಥಿಸಿಕೊಂಡಿರುವ ಪರಾಗ್‌ ಅಗರ್‌ವಾಲ್‌ ಟ್ವೀಟ್‌ಗೆ ಟೆಸ್ಲಾ ಮಸ್ಕ್ ಈಗ  ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. 

 

Unfortunately, we don’t believe that this specific estimation can be performed externally, given the critical need to use both public and private information (which we can’t share). Externally, it’s not even possible to know which accounts are counted as mDAUs on any given day.

— Parag Agrawal (@paraga)

 

ಟ್ವಿಟರ್ ಸಿಇಒ ಪರಾಗ್ ಅವರ ದೀರ್ಘ ಥ್ರೆಡ್‌ಗೆ ಎಲೋನ್ ಮಸ್ಕ್ ಅವರ ಪ್ರತಿಕ್ರಿಯೆಗೆ ನೆಟ್ಟಿಗರು ಪ್ರತಿಕ್ರಿಯೆ ಹಾಗೂ ಮೀಮ್‌ಗಳ ಸುರಿಮಳೆಯನ್ನೇ ಸುರಿದಿದ್ದಾರೆ. ಕೆಲವರು ಟ್ವೀಟ್‌ಗಳಿಗೆ ವ್ಯಂಗ್ಯಭರಿತ ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರು ನೀಡಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ 

ಈ ಮಧ್ಯೆ ಏಪ್ರಿಲ್ ಆರಂಭದಲ್ಲಿ ಕಂಪನಿಯಲ್ಲಿ 9.2% ಪಾಲನ್ನು ಎಲೋನ್ ಮಸ್ಕ್ ಬಹಿರಂಗಪಡಿಸುವ ಮೊದಲಿನ ಮಟ್ಟಕ್ಕಿಂತ ಟ್ವಿಟರ್ ಷೇರುಗಳು ಸೋಮವಾರ ಕೆಳಗಿಳಿದಿವೆ.  

click me!