
ಬೆಂಗಳೂರು(ಜೂನ್.10): 25ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಡ್ಯುಕಾಟಿ ಮೋರಾಟ್ ಬೈಕ್ ಸಂಸ್ಥೆ ಇದೀಗ ನೂತನ ಡ್ಯೂಕಾಟಿ ಮೋನ್‌ಸ್ಟರ್ 797 ಪ್ಲಸ್ ಬೈಕ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ವಿಶೇಷವಾಗಿ ಭಾರತದಲ್ಲಿ ಬಿಡುಗಡೆಯಾಗಿರುವ ನೂತನ ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಪ್ಲಸ್ ಬೈಕ್ ಎಕ್ಸ್ ಶೋ ರೂಮ್ ಬೆಲೆ 8.03 ಲಕ್ಷ ರೂಪಾಯಿ. ನೂತನ ಬೈಕ್‌ನಲ್ಲಿ ಫ್ಲೈ ಸ್ಕ್ರೀನ್ ಹಾಗೂ ಹಿಂಬದಿ ಸವಾರರ ಸೀಟಿನ ಕಲರ್ ಬದಲಿಸಿ ಶೈಲಿಯಲ್ಲಿ ಬದಲಾವಣೆ ಮಾಡಲಾಗಿದೆ.
ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಗಿಂತ, ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಪ್ಲಸ್ ಬೈಕ್‌ನಲ್ಲಿ ಕೆಲ ವಿಶೇಷತೆಗಳಿವೆ. ನೂತನ ಬೈಕ್‌ನಲ್ಲಿ ಅತೀ ವೇಗವಾಗಿ ಚಲಿಸಿದರೂ, ನಿಮಗೆ ಗಾಳಿಯಿಂದ ಯಾವುದೇ ಸಮಸ್ಯೆಯಾಗಲ್ಲ.
ಪ್ರಮುಖವಾಗಿ ಇದರ ಸಾಮರ್ಥ್ಯ 72 ಬಿಹೆಚ್‌ಪಿ ಹಾಗೂ 67 ಎನ್ಎಮ್. 803 ಸಿಸಿ ಟ್ವಿನ್ ಇಂಜಿನ್ ಹೊಂದಿರುವು ನೂತನ ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಪ್ಲಸ್ ಮೋಸ್ಟ್ ಪವರ್‌ಫುಲ್ ಬೈಕ್‌ಗಳಲ್ಲಿ ಒಂದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.