2019ಕ್ಕೆ ಭಾರತದ ಗ್ರಾಹಕರಿಗೆ ಸಿಗಲಿದೆ ನಿಸಾನ್ ಕಿಕ್ಸ್ ಕಾರು

Published : Jun 09, 2018, 02:47 PM IST
2019ಕ್ಕೆ ಭಾರತದ ಗ್ರಾಹಕರಿಗೆ ಸಿಗಲಿದೆ ನಿಸಾನ್ ಕಿಕ್ಸ್ ಕಾರು

ಸಾರಾಂಶ

ನಿಸಾನ್ ಕಿಕ್ಸ್ ಎಸ್‌ಯುವಿ ಕಾರು ಬಿಡುಗಡೆ ತಡವಾಗಿದೆ. 2018ರಲ್ಲಿ ಬಿಡುಗಡೆಯಾಗಬೇಕಿದ್ದ ನಿಸಾನ್ ಕಿಕ್ಸ್ ಇದೀಗ 2019ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ನಿಸಾನ್ ಸಂಸ್ಥೆ ಹೇಳಿದೆ. ನಿಸಾನ್ ಬಿಡುಗಡೆಗೆ ತಡವಾಗಲು ಕೆಲ ಕಾರಣಗಳಿವೆ.

ಬೆಂಗಳೂರು(ಜೂನ್.9): ನಿಸಾನ್ ಕಾರು ಸಂಸ್ಥೆಯ ಬಹು ನಿರೀಕ್ಷಿತ ನಿಸಾನ್ ಕಿಕ್ಸ್ ಕಾರು 2019ರ ವೇಳೆಗೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನಿಸಾನ್ ಸಂಸ್ಥೆ ಪ್ರಕಾರ 2018ರ ಮಧ್ಯಭಾಗದಲ್ಲಿ ನಿಸಾನ್ ಕಿಕ್ಸ್ ಭಾರತದ ಮಾರುಕಟ್ಟೆ ಪ್ರವೇಶಿಸಬೇಕಿತ್ತು. ಆದರೆ 2019ರ ಆರಂಭದಲ್ಲಿ ಕಿಕ್ಸ್ ಕಾರನ್ನ ಭಾರತಕ್ಕೆ ಪರಿಚಯಿಸಲು ನಿಸಾನ್ ಸಜ್ಜಾಗಿದೆ.

ನಿಸಾನ್ ಕಿಕ್ಸ್ ಎಸ್‌ಯುವಿ ಇಂಜಿನ್ ಕಾರು, ಹುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ರೆನಾಲ್ಟ್ ಕ್ಯಾಪ್ಟರ್, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಎಸ್‌ಯುವಿ ಕಾರುಗಳಿಗೆ ಸ್ಪರ್ಧೆ ನೀಡಲು ಸಜ್ಜಾಗಿದೆ. ಕಡಿಮೆ ಬೆಲೆಯಲ್ಲಿ ಭಾರತೀಯ ಗ್ರಾಹಕರಿಗೆ ನೀಡಲು ನಿಸಾನ್ ಸಜ್ಜಾಗಿದೆ. ಹೀಗಾಗಿ ನಿಸಾನ್ ಕಿಕ್ಸ್ ಬಿಡುಗಡೆ ತಡವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ನಿಸಾನ್ ಕಿಕ್ಸ್ 1.6 ಪೆಟ್ರೋಲ್ ಇಂಜಿನ್ ಹೊಂದಿದೆ. ವಿನ್ಯಾಸದಲ್ಲೂ ಹೆಚ್ಚು ಆಕರ್ಷಕವಾಗಿ ಕಾಣಲಿದೆ. ಎಸ್‌ಯುವಿ ಇಂಜಿನ್ ಕಾರುಗಳಿಗೆ ಬಾರಿ ಕಾಂಪೀಟೀಶನ್ ನೀಡಲು ಇದೀಗ ಕಿಕ್ಸ್ ರೆಡಿಯಾಗಿದೆ. ಆದರೆ ಇದರ ಬೆಲೆ ಇನ್ನು ಬಹಿರಂಗವಾಗಿಲ್ಲ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?