ಇದು ಸುಜಾತಾ ಭಟ್​ ಅಸಲಿ ವಿಡಿಯೋವಲ್ಲ, AI ವಿಡಿಯೋ! ರಿವೀಲ್​ ಆಯ್ತು ಆ ದಿನಗಳ ಗುಟ್ಟು...

Published : Aug 27, 2025, 06:58 PM IST
Sujatha Bhat AI Video

ಸಾರಾಂಶ

ಧರ್ಮಸ್ಥಳ ಕೇಸ್​ನಲ್ಲಿ ನ್ಯಾಷನಲ್​ ಚಾನೆಲ್​ಗಳಲ್ಲಿಯೂ ಫೇಮಸ್​ ಆಗಿರೋ ಸುಜಾತಾ ಭಟ್​ ಅವರ AI ವಿಡಿಯೋ ಒಂದು ವೈರಲ್​ ಆಗಿದೆ. ಏನಿದು ನೋಡಿ! 

ಸುಜಾತಾ ಭಟ್​... ಇದು ಕಳೆದ ಹಲವು ದಿನಗಳಿಂದ ರಾಜ್ಯದ ಬಹುತೇಕ ಜನರ ಅದರಲ್ಲಿಯೂ ಪೊಲೀಸ್​ ಇಲಾಖೆಯ ನಿದ್ದೆಗೆಡಿಸಿರುವ ಹೆಸರು. ಧರ್ಮಸ್ಥಳದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಹೆಸರಿನಲ್ಲಿ (justice for Soujanya)ನಡೆದ ಪ್ರತಿಭಟನೆ ಏನೇನೋ ರೂಪ ಪಡೆದು, ರಾಜಕೀಯ ತಿರುವು ಪಡೆದು ಕೊನೆಗೆ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪ್ರಕರಣ ಸದ್ಯ ತನಿಖೆಯ ಹಂತದಲ್ಲಿದ್ದು, ಸತ್ಯ ಏನೆಂದು, ಇದರ ಹಿಂದೆ ಇರುವ ಶಕ್ತಿ ಯಾರದ್ದು ಎಂಬೆಲ್ಲಾ ಅಸಲಿಯತ್ತು ಒಂದೊಂದೇ ಬಯಲಾಗಬೇಕಿದೆ.

ಈ ಪ್ರಕರಣದಲ್ಲಿ (Dharmasthala case) ಪ್ರಮುಖವಾಗಿ ಗಮನ ಸೆಳೆದವರ ಪೈಕಿ ಸುಜಾತಾ ಭಟ್​ ಒಬ್ಬರು. ತಮ್ಮ ಮಗಳು ಅನನ್ಯಾ ಭಟ್​ಗೆ ನ್ಯಾಯ ಕೊಡಿಸಿ ಎಂದು ಬಂದು ಹಲ್​ಚಲ್​ ಸೃಷ್ಟಿಸಿದ ಅಜ್ಜಿ ಈಕೆ. ಇವರ ಹಿಂದೆ ವ್ಯವಸ್ಥಿತ ಗ್ಯಾಂಗ್​ ಇದೆ ಎನ್ನುವುದು ಸದ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಕರಣ ಇಷ್ಟು ಗಂಭೀರವಾಗಿ ಸಾಗುತ್ತದೆ ಎಂದು ಅಜ್ಜಿಯಂತೂ ಅಂದುಕೊಂಡಿರಲೇ ಇಲ್ಲ. Justice for Ananya ಎಂಬ ಹ್ಯಾಷ್​ಟ್ಯಾಗ್​ ಜೊತೆ ಆಗಲೇ ಈ ಗ್ಯಾಂಗ್​ ಪ್ರಚಾರ ಶುರುವಿಟ್ಟುಕೊಂಡು ಆಗಿತ್ತು. ಅನನ್ಯಾ ಅಂತೂ ಸಿಗಲ್ಲ, ಏಕೆಂದ್ರೆ ಆಕೆ ಹುಟ್ಟೇ ಇಲ್ಲ, ಹಾಗಾದ ಮೇಲೆ ಆಕೆಯ ಶವವೂ ಸಿಗಲ್ಲ ಜೊತೆಗೆ ಧರ್ಮಸ್ಥಳಕ್ಕೆ ಮತ್ತೊಂದು ಕಳಂಕ ಅಂಟಿಸಬಹುದು ಎನ್ನುವ ಹುನ್ನಾರವಿದೆ ಎನ್ನುವ ಸಂಶಯದ ಆಧಾರದ ಮೇಲೆ ಈಗ ತನಿಖೆ ಮುಂದುವರೆದಿದೆ.

ಆದರೆ, ಅದೇನೇ ಇದ್ದರೂ ಪ್ರತಿ ನ್ಯೂಸ್​​ ಚಾನೆಲ್​ಗಳಲ್ಲಿಯೂ ನಿರರ್ಗಳವಾಗಿ ಒಂದು ಗಂಟೆ, ಒಂದೂವರೆ ಗಂಟೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳನ್ನು ಪಟಪಟ ಉದುರಿಸುತ್ತಾ, ಮಧ್ಯೆ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಾಗದ ಸಂದರ್ಭದಲ್ಲಿ ಗಳಗಳನೆ ಕ್ಯಾಮೆರಾ ಎದುರು ಅಳುತ್ತಾ, ಕರುಳಿನ ಕೂಗು, ಕರುಳಿನ ಸಂಕಟ ಎಂದೆಲ್ಲಾ ಹೇಳಿ ಆ ಪ್ರಶ್ನೆಗೆ ಅಲ್ಲಿಯೇ ಕಡಿವಾಣ ಹಾಕಿದ ಸುಜಾತಾ ಅವರ ಮಾತು ಎಂಥ ನೋಡುಗರ ಕರುಳನ್ನೂ ಚುರುಕ್​ ಎನ್ನಿಸುವಂತಿತ್ತು. ಮಗಳನ್ನು ಕಳೆದುಕೊಂಡ ತಾಯಿಯ ನೋವು ಯಾರಿಗೂ ಬೇಡ ಎಂದು ಕಮೆಂಟ್​ ಮಾಡಿದವರೇ ಹೆಚ್ಚುಮಂದಿ. ಪ್ರತಿಬಾರಿಯ ನನ್ನ ಮಗಳ ಶವ ಕೊಟ್ಟುಬಿಡಿ, ಹಿಂದೂ ಧರ್ಮದಂತೆ, ಸನಾತನ ಧರ್ಮದಂತೆ ಅಂತ್ಯಕ್ರಿಯೆ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾಗಲೇ ಇದರ ಹಿಂದೆ ಬೇರೆಯವರದ್ದೇ ಏನೋ ಇದೆ ಎನ್ನುವ ಶಂಕೆ ಶುರುವಾಗಿ ತನಿಖೆ ನಡೆಸಿದ್ದಾಗಲೇ ಗೊತ್ತಾದದ್ದು ಈಕೆಯ ಭಯಾನಕ ಇತಿಹಾಸ!

ಇದೀಗ ಅದನ್ನೇ ಇಟ್ಟುಕೊಂಡು ಈ ಅಜ್ಜಿ ಯೌವನದಲ್ಲಿ ಹೇಗಿರಬಹುದು ಎನ್ನುವ ಕೃತಕ ಬುದ್ಧಿಮತ್ತೆಯ (AI) ವಿಡಿಯೋ ಒಂದನ್ನು ಸೃಷ್ಟಿ ಮಾಡಲಾಗಿದೆ. ಈಗಲೇ ಅಜ್ಜಿ ಹೀಗಿದ್ದರೆ ಯೌವನದಲ್ಲಿ ಇನ್ನು ಯಾವ ಪರಿ ಇದ್ದಿರಬಹುದು ಎಂದು ಹಲವರು ಕಮೆಂಟ್​ ಮಾಡುತ್ತಿದ್ದುದರಿಂದಲೇ ಅದನ್ನೇ ಆಧಾರವಾಗಿಟ್ಟುಕೊಂಡು ಈ ವಿಡಿಯೋ ಮಾಡಲಾಗಿದೆ. ಸೀಕ್ರೆಟ್​ಔಟ್​ ನೌ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಅದನ್ನು ಶೇರ್​ ಮಾಡಲಾಗಿದೆ. ಯೌವನದಲ್ಲಿ ಸುಜಾತಾ ಭಟ್​ ಹೀಗಿದ್ದಿರಬಹುದಾ ಎಂದು ಅದರಲ್ಲಿ ಪ್ರಶ್ನಿಸಲಾಗಿದೆ. ನೀವೂ ಒಮ್ಮೆ ಈ ನಕಲಿ ವಿಡಿಯೋ ನೋಡಿಬಿಡಿ. ಅಷ್ಟಕ್ಕೂ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹಿನ್ನೆಲೆಯಲ್ಲಿ ಯುಟ್ಯೂಬ್​ನಲ್ಲಿ AI ವಿಡಿಯೋ ಹರಿಬಿಟ್ಟ ಗ್ಯಾಂಗ್​ನಲ್ಲಿ ಸುಜಾತಾ ಭಟ್​ ಹೆಸರೂ ಸೇರಿಕೊಂಡಿರೋ ಕಾರಣ, ಈಗ AI ನಲ್ಲಿಯೇ ಇದನ್ನು ಮಾಡಲಾಗಿದೆ.

 

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!
ರಾತ್ರಿ ಮಲಗುವ ಮುನ್ನ ಟಿವಿ ಅನ್‌ಪ್ಲಗ್‌ ಮಾಡೋದಿಲ್ವಾ? ಶೇ. 99ರಷ್ಟು ಜನರಿಗೆ ಈ ವಿಚಾರವೇ ಗೊತ್ತಿಲ್ಲ..