Mobile history ಕ್ಲಿಯರ್​ ಮಾಡಿದ್ರೂ ನೋಡಿದ್ದೆಲ್ಲಾ ಸೇವ್​ ಆಗಿರತ್ತೆ: ಪರ್ಮನೆಂಟ್​ ಡಿಲೀಟ್​ ಮಾಡೋದು ಹೇಗೆ?

Published : Jan 15, 2026, 07:17 PM IST
Smartphone

ಸಾರಾಂಶ

ಮೊಬೈಲ್​ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡಿದರೂ, ಅದು ನಿಮ್ಮ ಗೂಗಲ್ ಅಕೌಂಟ್‌ನಲ್ಲಿ 'ಮೈ ಆಕ್ಟಿವಿಟಿ'ಯಲ್ಲಿ ಸೇವ್ ಆಗಿರುತ್ತದೆ. ಈ ಲೇಖನದಲ್ಲಿ, ನಿಮ್ಮ ಗೂಗಲ್ ಖಾತೆಯಿಂದ ಸರ್ಚ್ ಹಿಸ್ಟರಿಯನ್ನು ಶಾಶ್ವತವಾಗಿ ಅಳಿಸುವ ಹಂತ-ಹಂತದ ವಿಧಾನವನ್ನು ವಿವರಿಸಲಾಗಿದೆ.

ಮೊಬೈಲ್​ನಲ್ಲಿ ಏನೇನೋ ಸರ್ಚ್​ ಮಾಡುವ ದೊಡ್ಡ ವರ್ಗವೇ ಇದೆ. ಇದನ್ನು ಸರ್ಚ್​ ಮಾಡಬೇಡಿ ಎಂದು ಹೇಳಿದರೂ, ಇನ್ನಷ್ಟು ಕುತೂಹಲದಿಂದ ಅದನ್ನೇ ಸರ್ಚ್​ ಮಾಡುವವರು ಇದ್ದೇ ಇರುತ್ತಾರೆ. ಹೀಗೆ ಸರ್ಚ್​ ಮಾಡಿದ ಬಳಿಕ ಗೂಗಲ್​ ಕ್ರೋಮ್​ನ ಹಿಸ್ಟರಿಗೆ ಹೋಗಿ ನೋಡಿದ್ದೆಲ್ಲಾ ಡಿಲೀಟ್​ ಮಾಡ್ತೀರಾ. ಅಬ್ಬಾ ಅಂತೂ ಎಲ್ಲಾ ಡಿಲೀಟ್​ ಆಯ್ತು ಎಂದು ಖುಷಿ ಪಟ್ಟುಕೊಂಡಿರ್ತೀರಾ. ಆದರೆ ನೀವು ನೋಡಿದ್ದೆಲ್ಲವೂ ಸರ್ವರ್​ನಲ್ಲಿ ಸೇವ್​ ಆಗಿಯಂತೂ ಇದ್ದೇ ಇರುತ್ತದೆ. ಆದರೆ ನಿಮ್ಮ ಫೋನ್​ ಬೇರೆ ಯಾರಾದರೂ ತೆಗೆದುಕೊಂಡು ನೀವು ಡಿಲೀಟ್​ ಮಾಡಿದ್ದನ್ನೂ ನೋಡಬಹುದು ಎನ್ನೋದು ನಿಮಗೆ ಗೊತ್ತಾ?

ಡಿಲೀಟ್​ ಮಾಡಿದ್ರೂ ಆಗಲ್ಲ

ಹೌದು. ನೀವು Mobile history clear ಮಾಡಿದ ಖುಷಿಯಲ್ಲಿ ಇದ್ದರೂ, ನಿಮ್ಮ ಮೊಬೈಲ್​ ನಿಮ್ಮ ಮನೆಯವರ, ಸ್ನೇಹಿತರ ಅಥವಾ ಇನ್ನಾರದ್ದೋ ಕೈಗೆ ಸಿಕ್ಕರೆ, ಯಾವಾಗ ಏನು ನೋಡಿದ್ದೀರಿ ಎಲ್ಲವನ್ನೂ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹಾಗಿದ್ದರೆ, ನಿಮ್ಮ ಮೊಬೈಲ್​ನಲ್ಲಿ ನೀವು ನೋಡಿದ್ದೆಲ್ಲವನ್ನೂ ಪರ್ಮನೆಂಟ್​ ಆಗಿ ಡಿಲೀಟ್​ ಮಾಡೋದು ಹೇಗಪ್ಪಾ ಎಂದು ಚಿಂತೆ ಮಾಡ್ತಿದ್ರೆ ಇಲ್ಲಿದೆ ಸ್ಟೆಪ್​ ಬೈ ಸ್ಟೆಪ್​ ಮೆಥಡ್​.

ಹಂತ ಹಂತದ ಮಾಹಿತಿ ಇಲ್ಲಿದೆ:

* ಮೊದಲಿಗೆ ಪ್ಲೇಸ್ಟೋರ್​ಗೆ ಹೋಗಿ.

* ಬಲ ತುದಿಯಲ್ಲಿ ಇರುವ ಪ್ರೊಫೈಲ್​ ಮೇಲೆ ಕ್ಲಿಕ್​ ಮಾಡಿ.

* ಮ್ಯಾನೇಜ್​ ಯುವರ್​ ಅಕೌಂಟ್​ (Manage your account) ಮೇಲೆ ಕ್ಲಿಕ್​ ಮಾಡಿ.

* ಡಾಟಾ ಆ್ಯಂಡ್​ ಪ್ರೈವಸಿ ಮೇಲೆ ಕ್ಲಿಕ್​ ಮಾಡಿ.

* ಮೈ ಆ್ಯಕ್ಟಿವಿಟಿಗೆ ಹೋದಾಗ ನೀವು ಯಾವಾಗ ಏನು ಸರ್ಚ್​ ಮಾಡಿದ್ರಿ ಎಲ್ಲವೂ ಕಾಣಿಸುತ್ತದೆ.

* ಕೆಳಗೆ ಬಲತುದಿಯಲ್ಲಿ ಡಿಲೀಟ್​ ಎಂದು ಇದೆ. ಅದರ ಮೇಲೆ ಕ್ಲಿಕ್​ ಮಾಡಿ.

* ಅಲ್ಲಿ ನಿಮಗೆ ಕೊನೆಯ ಒಂದು ಗಂಟೆ, ಒಂದು ದಿನ, Always, custom range ಎಂದೆಲ್ಲಾ ಸಿಗುತ್ತದೆ.

* Always ಮೇಲೆ ಕ್ಲಿಕ್​ ಮಾಡಿದ್ರೆ ಎಲ್ಲವೂ ಡಿಲೀಟ್​ ಆಗುತ್ತದೆ. Custom Range ನಲ್ಲಿ ಯಾವ ದಿನದ್ದು ಬೇಕು ಎನ್ನುವ ಡೇಟ್​ ಕೊಟ್ಟರೆ ಡಿಲೀಟ್​ ಮಾಡಬಹುದು.

* ಬಳಿಕ Next ಮೇಲೆ ಕ್ಲಿಕ್​ ಮಾಡಿ.

* Delete ಮೇಲೆ ಒತ್ತಿ.

 

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು