
ಇತ್ತೀಚಿನ ದಿನಗಳಲ್ಲಿ ಒಂಟಿಯಾಗಿ ವಾಸಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಕೆಲ್ಸ, ಓದು, ವಯಸ್ಸು ಸೇರಿದಂತೆ ನಾನಾ ಕಾರಣಕ್ಕೆ ಜನರು ಒಂಟಿಯಾಗಿ ಜೀವನ ನಡೆಸ್ತಿದ್ದಾರೆ. ಅಂಥವರ ಆರೋಗ್ಯ ವಿಚಾರಿಸೋದಿರಲಿ, ಅವರ ಜೊತೆ ಮಾತನಾಡೋಕೂ ಜನ ಇಲ್ಲ. ಅದೆಷ್ಟೋ ಮಂದಿ ಅಪಾರ್ಟ್ ಮೆಂಟ್ ಗಳಲ್ಲಿ ಬಂಧಿಯಾಗಿದ್ದು, ಹೊರಗೆ ಬರೋದೇ ಅಪರೂಪ. ಅವರಿದ್ದಾರೆ ಎಂಬುದನ್ನು ಪತ್ತೆ ಮಾಡೋದೇ ಕಷ್ಟ. ಹಾಗಿರುವಾಗ ಅವರ ಇರುವಿಕೆ ಪತ್ತೆ ಮಾಡಲು ಬಂದಿರುವ ಚೀನಾ ಹೊಸ ಅಪ್ಲಿಕೇಷನ್ ಪ್ರಸಿದ್ಧಿ ಪಡೆಯುತ್ತಿದೆ.
ಚೀನಾದಲ್ಲಿ Are You Dead ಹೆಸರಿನ ಅಪ್ಲಿಕೇಷನ್ ಹೆಚ್ಚು ಸದ್ದು ಮಾಡ್ತಿದೆ. ಈ ಅಪ್ಲಿಕೇಷನ್ ವಿಶೇಷ ಏನೆಂದ್ರೆ, ಇದನ್ನು ಡೌನ್ಲೋಡ್ ಮಾಡಿದ ಪ್ರತಿಯೊಬ್ಬರು ಎರಡು ದಿನದಲ್ಲಿ ಒಮ್ಮೆ ಆದ್ರೂ ಅಪ್ಲಿಕೇಷನ್ ಬಟನ್ ಒತ್ತಿ, ನಾವು ಬದುಕಿದ್ದೇವೆ ಎಂಬುದನ್ನು ದೃಢಪಡಿಸಬೇಕು. ಈ ಅಪ್ಲಿಕೇಶನ್ ಅನ್ನು ಚೀನಾದಲ್ಲಿ ಮೇ 2025 ರಲ್ಲಿ ಪ್ರಾರಂಭಿಸಲಾಯಿತು. ಇದು ಪೇಯ್ಡ್ ಅಪ್ಲಿಕೇಶನ್. ಇದನ್ನು ಡೌನ್ಲೋಡ್ ಮಾಡಲು ಜನರು ಹಣ ನೀಡಬೇಕು. ಇದ್ರ ಬೆಲೆ 8 ಯುವಾನ್ ಅಂದ್ರೆ ಸರಿಸುಮಾರು 75 ರೂಪಾಯಿ. ಇದು ಚೀನಾದಲ್ಲಿ ಹೆಚ್ಚು ಡೌನ್ಲೋಡ್ ಮಾಡಲಾದ ಪಾವತಿಸಿದ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಒಂಟಿಯಾಗಿ ವಾಸಿಸುವವರಲ್ಲಿ ಒಂಟಿತನ ಮತ್ತು ಆಕಸ್ಮಿಕ ಸಾವಿನ ಭಯವನ್ನು ಹೋಗಲಾಡಿಸ್ತಿದೆ.
ಬೆಂಗಳೂರು ಸೇರಿ ಪ್ರಮುಖ ನಗರದಲ್ಲಿ ಡೆಲ್ ಟೆಕ್ ಆನ್ ವೀಲ್ಸ್ ಆರಂಭ, ಮನೆಬಾಗಿಲಲ್ಲೆ ಪರಿಹಾರ
ಜಪಾನ್ ನಂತೆ ಚೀನಾದಲ್ಲಿ ಕೂಡ ವೃದ್ಧ ಹಾಗೂ ಒಂಟಿ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗ್ತಿದೆ. 2030 ರ ವೇಳೆಗೆ ಚೀನಾದಲ್ಲಿ 200 ಮಿಲಿಯನ್ ನಷ್ಟು ಜನರು ಒಂಟಿಯಾಗಿ ವಾಸಿಸುವ ಅಂದಾಜಿದೆ. ಈ ಆಪ್ ಅನ್ನು ಕಚೇರಿಗಳಲ್ಲಿ ಒಂಟಿಯಾಗಿ ಕೆಲಸ ಮಾಡುವವರನ್ನು, ಮನೆಯಿಂದ ದೂರ ವಾಸಿಸುವ ವಿದ್ಯಾರ್ಥಿಗಳನ್ನು ಅಥವಾ ಒಂಟಿಯಾಗಿ ವಾಸಿಸುವವರನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಲಾಗಿದೆ. ಮನೆಯಲ್ಲಿ ಒಂಟಿಯಾಗಿರುವ ಪಾಲಕರ ಸುರಕ್ಷತೆಗೆ ಅನೇಕ ಯುವಕರು ಈ ಅಪ್ಲಿಕೇಷನ್ ಬಳಕೆ ಮಾಡ್ತಿದ್ದಾರೆ. ಪಾಲಕರಿಗೆ ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಡ್ತಿದ್ದಾರೆ. ಪ್ರತಿ ದಿನ ತಮ್ಮ ಇರುವಿಕೆಯನ್ನು ಅಪ್ಡೇಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಒಂದ್ವೇಳೆ ಎರಡು ದಿನಗಳ ನಂತ್ರವೂ ಬಳಕೆದಾರನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದಾಗ ಅಲ್ಲಿರುವ ಆಪ್ತರ ಕಾಂಟೆಕ್ಟ್ ಗೆ ಅಪ್ಲಿಕೇಷನ್ ಸೂಚನೆ ರವಾನೆ ಮಾಡುತ್ತದೆ.
ಹೊಸ ವರ್ಷದ ಆಫರ್ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
1995 ರ ನಂತ್ರ ಜನಿಸಿದ ಮೂವರು ಯುವ ಡೆವಲಪರ್ಗಳು ಈ ಅಪ್ಲಿಕೇಶನ್ ರಚಿಸಿದ್ದಾರೆ. ಇದನ್ನು ಸುಮಾರು 10,000 ರೂಪಾಯಿಗಳಿಗೆ ರಚಿಸಿದ್ದಾರೆ. ಈಗ, ಅಪ್ಲಿಕೇಶನ್ ನ ಶೇಕಡಾ 10ರಷ್ಟು ಪಾಲನ್ನು 1 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ವೃದ್ಧರಿಗಾಗಿ ಹೊಸ ಆಪ್ ರಚಿಸುವ ಆಲೋಚನೆ ಮಾಡ್ತಿದ್ದಾರೆ. ಫುಡ್ ಆಪ್ ಗಳು ನೀವು ಹಸಿದಿದ್ದೀರಾ ಎಂದು ಕೇಳಿದಂತೆ ಈ ಅಪ್ಲಿಕೇಷನ್ ನಲ್ಲಿ ನೀವು ಸತ್ತಿದ್ದೀರಾ ಅಂತ ಕೇಳಲಾಗುತ್ತದೆ. ಇದನ್ನು ಆರ್ ಯು ಓಕೆ ಅಂತ ಬದಲಿಸುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥ ಅಪ್ಲಿಕೇಷನ್ ಗೆ ಡೆಮುಮು ಎಂದು ಕರೆಯಲಾಗುತ್ತದೆ. ಯುಎಸ್, ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ಸ್ಪೇನ್ನಂತಹ ದೇಶಗಳಲ್ಲಿಈ ಆಪ್ ಅಗ್ರಸ್ಥಾನದಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಆಪ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಬದುಕಿದ್ದಾಗ ನಮಗೆ ಈ ಅಪ್ಲಿಕೇಷನ್ ಅಗತ್ಯವಿಲ್ಲ. ಸತ್ತ ಮೇಲೆ ನಾವು ಬ್ಯುಸಿ ಆಗ್ತೇವೆ ಅಂತ ಕೆಲವರು ತಮಾಷೆ ಮಾಡಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.