
ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆ ಗ್ರಾಹಕರ ಮನಸೆಳೆದಿದ್ದ ಸ್ಯಾಮ್'ಸಂಗ್ ಗ್ಯಾಲಾಕ್ಸಿ ಸರಣಿಯ ನೋಟ್ 7 ಸ್ಮಾರ್ಟ್ ಪೋನ್, ಸದ್ಯ ವಿಶ್ವದ ಅಪಾಯಕಾರಿ ಸ್ಮಾರ್ಟ್ ಪೋನ್ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿರುವುದು ಸ್ಯಾಮ್'ಸಂಗ್ ಕಂಪನಿಗೆ ದೊಡ್ಡ ಹೊಡೆತ ನೀಡಿದೆ. ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್'ಸಂಗ್ ಕಂಪನಿ ವಿಶ್ವದಾದ್ಯಂತ ಬಿಕರಿಯಾಗಿರುವ ನೋಟ್ 7 ಸ್ಮಾರ್ಟ್ ಪೋನ್ ಗಳನ್ನು ಹಿಂದಕ್ಕೆ ಪಡೆದು ಹೊಸ ಪೋನ್'ಗಳನ್ನು ನೀಡಲು ಮುಂದಾಗಿದೆ.
ಇದೇ ಸೆಪ್ಟೆಂಬರ್ 1 ರಂದು ಚಾರ್ಜ್ ಮಾಡುತ್ತಿದ್ದ ವೇಳೆಯಲ್ಲಿ ಸುಮಾರು 35ಕ್ಕೂ ಹೆಚ್ಚು ನೋಟ್ 7 ಸ್ಮಾರ್ಟ್ ಪೋನುಗಳು ವಿಶ್ವದ ವಿವಿಧ ಭಾಗಗಳಲ್ಲಿ ಸ್ಪೋಟಗೊಂಡಿದೆ. ಇದರಿಂದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು, ಹಾಗಾಗಿ ಸ್ಯಾಮ್'ಸಂಗ್ ಕಂಪನಿ ನೋಟ್ 7 ಸ್ಮಾರ್ಟ್ ಪೋನ್ ಗಳನ್ನು ಗ್ರಾಹಕರಿಂದ ಹಿಂಪಡೆದು ಹೊಸ ಪೋನ್ ಗಳನ್ನು ಕೊಡಲು ತಯಾರಿ ನಡೆಸಿದೆ.
ಆದರೆ ಇದುವರೆಗೆ ವಿಶ್ವದಾದ್ಯಂತ ಸುಮಾರು 2.5 ಮಿಲಿಯನ್ ನೋಟ್ 7 ಪೋನ್ ಗಳು ಮಾರಾಟವಾಗಿದ್ದು, ಅಷ್ಟೂ ಪೋನ್ ಬದಲಾಯಿಸಲು ನೂತನ ಪೋನ್ ಉತ್ಪಾದನೆಯಾಗಿಲ್ಲ ಹಾಗಾಗಿ ಕಂಪನಿ ಬೇರೆ ಮಾರ್ಗವೊಂದನ್ನು ಸೂಚಿಸಿದೆ. ಸದ್ಯ ತನ್ನ ಎಲ್ಲ ಗ್ರಾಹಕರಿಗೂ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್ ಪೋನ್ ಅನ್ನು ಬಳಸದಂತೆ ಹಾಗೂ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದೆ.
ಸೆ.20ರಂದು ಪೋನ್ ರಕ್ಷಣೆಗಾಗಿ ತಾತ್ಕಾಲಿಕವಾಗಿ ಆಪ್ ಡೇಟ್ ಒಂದನ್ನು ಬಿಡುಗಡೆ ಮಾಡಲಿದ್ದು, ಮೊಬೈಲ್ ಆಪ್ಡೇಟ್ ಆದ ನಂತರ ಹೊಸ ಪೋನ್ ದೊರೆಯುವವರೆಗೂ ತಮ್ಮ ಈಗಿನ ಪೋನ್ ಅನ್ನೇ ಬಳಸುವಂತೆ ತಿಳಿಸಿದೆ. ಆದರೆ ಈ ಆಪ್ಡೇಟ್ ಸೆ.20ರಂದು ದಕ್ಷಿಣ ಕೋರಿಯಾದಲ್ಲಿ ದೊರೆಯಲಿದೆ ಎಂದು ತಿಳಿಸಿದ್ದು, ಬೇರೆ ಬೇರೆ ದೇಶಗಳಲ್ಲಿ ಇದರ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇದಲ್ಲದೇ ಅಮೇರಿಕಾದ ನೋಟ್ 7 ಗ್ರಾಹಕರು ಹೊಸ ಪೋನ್ ಲಭ್ಯವಾಗುವವರೆಗೂ ಸ್ಯಾಮ್'ಸಂಗ್ ನ ಬೇರೆ ಮಾಡಲ್'ಗೆ ಬದಲಾಯಿಸಿಕೊಳ್ಳುವ ಅವಕಾಶ ನೀಡಿದೆ. ಇದು ತಾತ್ಕಾಲಿಕವಾಗಿದ್ದು, ಹೊಸ ಪೋನ್ ಮಾರುಕಟ್ಟೆಗೆ ಬರುತ್ತಿದ್ದಂತೆ ಮತ್ತೆ ನೋಟ್ 7 ಪಡೆದುಕೊಳ್ಳುವ ಅವಕಾಶ ನೀಡಿದೆ.
ಈಗಾಗಲೇ ಹಲವು ದೇಶಗಳ ಏರ್ ಲೈನ್ಸ್'ಗಳಲ್ಲಿ ನೋಟ್ 7 ಬಳಸುವುದನ್ನು ನಿಷೇಧಿಸಿದರೆ ಇನ್ನು ಹಲವು ಏರ್ ಲೈನ್ ಗಳು ನೋಟ್ 7 ಪೋನ್ ಕೊಂಡೊಯ್ಯುವುದಕ್ಕೂ ನಿರ್ಭಂದ ವಿಧಿಸಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.