ಕೇಂದ್ರದ ಕಡೇ ಎಚ್ಚರಿಕೆಗೆ ಸೈಲೆಂಟ್‌ ಆದ ಟ್ವಿಟರ್, ಅಧಿಕಾರಿ ನೇಮಿಸಿದ ಫೇಸ್‌ಬುಕ್!

By Suvarna NewsFirst Published Jun 8, 2021, 12:33 PM IST
Highlights

* ಕೇಂದ್ರದ ಕೊನೆಯ ವಾರ್ನಿಂಗ್, ನಿಯಮ ಒಪ್ಪಿಕೊಂಡ ಟ್ವಿಟರ್

* ಐಟಿ ಕಾನೂನಿನಂತೆ ಅಧಿಕಾರಿ ನೇಮಿಸುವುದಾಗಿ ಟ್ವಟರ್ ಸ್ಪಷ್ಟನೆ

* ಅಧಿಕಾರಿ ನೇಮಿಸಿ ನಂಬರ್ ಪಬ್ಲಿಷ್ ಮಾಡಿದ ಫೇಸ್‌ಬುಕ್

ನವದೆಹಲಿ(ಜೂ.08): ಸೋಶಿಯಲ್ ಮೀಡಿಯಾ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದ ಟ್ವಿಟರ್‌ ಸರ್ಕಾರದ ಕಡೇ ಎಚ್ಚರಿಕೆ ಬೆನ್ನಲ್ಲೇ ಯೂಟರ್ನ್ ಹೊಡೆದಿದೆ. ಈ ಸಂಬಂಧ ಉತ್ತರಿಸಿರುವ ಟ್ವಿಟರ್ ತಾನು ಭಾರತದ ಪರ ಸಂಪೂರ್ಣ ಬದ್ಧನಾಗಿದ್ದು, ಮುಂದೆಯೂ ಹೀಗೇ ಇರುವುದಾಗಿ ತಿಳಿಸಿದೆ. ಇನ್ನು ಐಟಿ ಕಾನೂನು ಪಾಲಿಸಲು ಸಹಮತಿ ಸೂಚಿಸದ ಟ್ವಿಟರ್‌ಗೆ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಕಳೆದೆರಡು ದಿನಗಳ ಹಿಂದೆ ಅಂತಿಮ ವಾರ್ನಿಂಗ್ ನೀಡಿತ್ತು. ಅಲ್ಲದೇ ಭಾರತ ಸರ್ಕಾರದ ಜೊತೆ ತಾನು ರಚನಾತ್ಮಕ ಮಾತುಕತೆ ನಡೆಸುತ್ತೇನೆ ಹಾಗೂ ಮಾರ್ಗಸೂಚಿಗಳನ್‌ನು ಸಂಪೂರ್ಣವಾಗಿ ಪಾಲಿಸಲು ಯತ್ನಿಸುವುದಾಗಿಯೂ ಟ್ವಿಟರ್ ತಿಳಿಸಿದೆ. ಅತ್ತ ಫೇಸ್‌ಬುಕ್ ಐಟಿ ಕಾನೂನು ಪಾಲಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಸರ್ಕಾರದ ಆದೇಶದಂತೆ ದೂರು ನೀಡಲು ಅಧಿಕಾರಿಯನ್ನು ನೇಮಿಸಿದ್ದು, ಅವರ ನಂಬರ್ ಕೂಡಾ ಪ್ರಕಟಿಸಿದೆ.

ವಿವಾದದಲ್ಲಿ ಟ್ವಿಟರ್

ಸೋಶಿಯಲ್ ಮಿಡಿಯಾ ಮಾರ್ಗಸೂಚಿ ಪಾಲಿಸಲು ಹಿಂದೇಟು ಹಾಕುತ್ತಿದ್ದ ಟ್ವಿಟರ್‌ಗೆ ಜೂನ್ 5ರಂದು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಫೈನಲ್ ನೋಟಿಸ್ ನೀಡಿತ್ತು. ಈ ನೋಟಿಸ್‌ನಲ್ಲಿ ಒಂದೋ ಈ ಕೂಡಲೇ ಐಟಿ ನಿಯಮಗಳನ್ನು ಪಾಲಿಸಿ ಇಲ್ಲವೇ ಕಾನೂನು ತನಿಖೆ ಎದುರಿಸಲು ಸಜ್ಜಾಗಿ ಎನ್ನಲಾಗಿತ್ತು. ಅಲ್ಲದೇ ಕೇಂದ್ರ ಸಚಿವ ಹರ್ದೀಪ್ ಪುರಿ ಕೂಡಾ ಎಲ್ಲರೂ ಇಲ್ಲಿನ ಕಾನೂನು ಪಾಲಿಸಲೇಬೇಕು ಎಂದಿದ್ದರು.

ಟ್ವಿಟರ್ ಕಾರ್ಯವೈಖರಿಗೆ ಕೇಂದ್ರ ಬೇಸರ

ದೀರ್ಘ ಕಾಲದಿಂದ ಕೇಂದ್ರ ಸರ್ಕಾರ ಟ್ವಿಟರ್‌ನ ಕಾರ್ಯ ವೈಖರಿಯಿಂದ ಅಸಮಾಧಾನಗೊಂಡಿದೆ. ಇನ್ನು ಟ್ವಿಟರ್ ಫಫೈನಲ್ ನೋಟಿಸ್ ಕೊಟ್ಟ ಬಳಿಕವೂ ಹಠಕ್ಕೆ ಬಿದ್ದು ಐಟಿ ಕಾನೂನು ಪಾಲಿಸಲು ಒಪ್ಪಿಗೆ ಸೂಚಿಸದಿದ್ದರೆ ಭಾರತದಲ್ಲಿ ಉಳಿದುಕೊಳ್ಳುವುದೇ ಅನುಮಾನವಾಗಿತ್ತು. ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಚಷ್ಟ್ರವಾಗಿದೆ  ಎಂದು ನೋಟಿಸ್‌ನಲ್ಲಿ ಹೇಳಿದ್ದ ಸರ್ಕಾರ ತಾನು ಟ್ವಿಟರ್‌ನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದೆವು. ಆದರೆ ಕಳೆದ ಹತ್ತು ವರ್ಷದಲ್ಲಿ ಟ್ವಿಟರ್ ದೂರುಗಳನ್ನು ಬಗೆಹರಿಸಬಹುದಾದ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಬೆಸರ ವ್ಯಕ್ತಪಡಿಸಿತ್ತು. ಅಲ್ಲದೇ ಟ್ವಿಟರ್ನಲ್ಲಿ ಹೆಚ್ಚುತ್ತಿರುವ ಅಶ್ಲೀಲ ಪದ ಬಳಕೆಯ ಬಗ್ಗೆಯೂ ಉಲ್ಲೇಖಿಸಲಾಗಿತ್ತು. 

click me!