ಬಾಲಕಿ ಕಂಡುಹಿಡಿದ ಈ ಮಾಸ್ಕ್ ಧರಿಸಿದರೆ ಕೊರೋನಾ ಚಾನ್ಸೇ ಇಲ್ಲ!

By Suvarna News  |  First Published May 11, 2021, 10:24 PM IST

* ಕೊರೋನಾ ವಿರುದ್ಧ ಇಡೀ ಜಗತ್ತು ಹೋರಾಡುತ್ತಿದೆ
* ಈ ಬಾಲಕಿ ಕೊರೋನಾ ಕೊಲ್ಲುವ ಮಾಸ್ಕ್ ಕಂಡುಹಿಡಿದಿದ್ದಾಳೆ
* ಈ ಮಾಸ್ಕ್ ಧರಿಸಿದರೆ ಕೊರೋನಾ ಒಳಪ್ರವೇಶ ಅಸಾಧ್ಯ
* ಸೋಂಕಿತರಿಗೆ ಈ ಮಾಸ್ಕ್ ಹಾಕಿಸಿದರೆ ವೈರಸ್ ಹೊರಗೆ ಬರುವ ಸಾಧ್ಯತೆಯೇ ಇಲ್ಲ


ಕೋಲ್ಕತ್ತಾ(ಮೇ. 11)   ಈ ಬಾಲಕಿಯ ಸಾಧನೆಯನ್ನು ಮೆಚ್ಚಲೇಬೇಕು. ಕ್ಲಾಸ್  12  ವಿದ್ಯಾರ್ಥಿನಿ ದಿಗಂತಿಕಾ ಬೋಸ್  ಕೊರೋನಾ ಕೊಲ್ಲುವ ಮಾಸ್ಕ್  ಕಂಡುಹಿಡಿದಿದ್ದಾರೆ. 

ಪಶ್ಚಿಮ ಬಂಗಾಳದ ಪೂರ್ಬಾ ಬ್ರಂದಾವನ ಜಿಲ್ಲೆಯ ಬಾಲಕಿ ಹೊಸ ಮಾಸ್ಕ್ ಸಂಶೋಧಿಸಿದ್ದಾರೆ.  ಮುಂಬೈನ ಮ್ಯೂಸಿಯಂನಲ್ಲಿ ಈಕೆಯ ಮಾಸ್ಕ್ ನ್ನು ಪ್ರದರ್ಶನಕ್ಕೆ ಇಡಲಾಗಿದೆ.

Latest Videos

undefined

ಮೂರನೇ ಅಲೆಗೂ ಮುನ್ನ ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ? 

ಮಾಸ್ಕ್ ನಲ್ಲಿ ಮೂರು ಛೆಂಬರ್ ಇವೆ. ನೆಗೆಟಿವ್ ಐಯಾನ್ ಜೆನರೇಟರ್ ಧೂಳು ಮತ್ತು ಇತರೆ ಕಣಗಳನ್ನು ತಡೆಯುತ್ತದೆ. ಅಲ್ಲಿಂದ ನಾವು ತೆಗೆದುಕೊಳ್ಳುವ ಗಾಳಿ ಎರಡನೇ ಛೆಂಬರ್ ಗೆ ಬರುತ್ತದೆ ಮೂರನೇ ಛೆಂಬರ್ ನ್ನು ಕೆಮಿಕಲ್ ಛೇಂಬರ್ ಎಂದು ಕರೆಯಲಾಗಿದ್ದು ಸೋಪು ಮತ್ತು ನೀರಿನ ಮಿಶ್ರಣ ಅಲ್ಲಿ ಕೆಲಸ ಮಾಡುತ್ತದೆ.  ಇಲ್ಲಿಯೇ ಕೊರೋನಾ ವೈರಸ್ ಹತವಾಗುತ್ತದೆ.

ಒಂದು ವೇಳೆ ಕೊರೋನಾ ಸೋಂಕಿತ ವ್ಯಕ್ತಿ ಈ ಮಾಸ್ಕ್ ಧರಿಸಿದರೆ  ಅವನು ಉಸಿರಾಡುವಾಗ ಕೊರೋನಾ ಹೊರಕ್ಕೆ  ಜಾರಿಕೊಳ್ಳಲು ಅವಕಾಶ ಇಲ್ಲ.

ಕೊರೋನಾ ಮೊದಲನೇ ಅಲೆ ವೇಳೆಯೇ ಬಾಲಕಿ ಮಾಸ್ಕ್ ಸಿದ್ಧಮಾಡಿದ್ದರು. ಆದರೆ ಜಗತ್ತಿಗೆ ಪರಿಚಯವಾಗಿರಲಿಲ್ಲ.   ಈ ಹಿಂದೆ ಗ್ಲಾಸ್ ಒಂದನ್ನು ಸಿದ್ಧಮಾಡಿದ್ದ ಬಾಲಕಿ ಹಿಂದೆ ತಿರುಗದೇ ನಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ನೋಡುವ ಸಾಧ್ಯತೆಯನ್ನು ಬಿಚ್ಚಿಟ್ಟದರು. ಬಾಲಕಿಯ ಸಂಶೋಧನೆಗೆ ಪೂರಕ ವಾತಾವರಣ ಸಿಗಬೇಕಿದೆ. ಅಗತ್ಯವಾದರೆ ಯಾಕೆ ಬಳಸಿಕೊಳ್ಳಬಾರದು? 

 

click me!