Christmas Sale: Redmi ಫೋನ್‌, ಲ್ಯಾಪ್‌ಟಾಪ್‌ , ಇಯರ್‌ಬಡ್‌ ದರ ಭಾರೀ ಇಳಿಕೆ: ಇಲ್ಲಿದೆ ಮಾಹಿತಿ!

By Suvarna News  |  First Published Dec 18, 2021, 3:21 PM IST

*ಕ್ರಿಸ್‌ಮಸ್‌ ಹಬ್ಬಕ್ಕೆ ಇನ್ನು ಕೇವಲ ಒಂದು ವಾರ ಬಾಕಿ
*Redmi ಇಯರ್‌ಬಡ್‌, ಲ್ಯಾಪ್‌ಟಾಪ್‌ಗಳ ದರ ಇಳಿಕೆ
*ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತಿವೆ ಮೊಬೈಲ್‌ ಫೋನ್ಸ್!


Tech Desk: ಕ್ರಿಸ್‌ಮಸ್‌ ಹಬ್ಬಕ್ಕೆ (Christmas) ಇನ್ನು ಕೇವಲ ಒಂದು ವಾರ ಬಾಕಿ ಇದೆ. ಹಬ್ಬದ ಈ ಸೀಸನ್‌ನಲ್ಲಿ ಉತ್ತಮ ಬೆಲೆಯಲ್ಲಿ ಶಾಪಿಂಗ್ ಮಾಡಲು ಅಲಂಕೃತ ಮಾರುಕಟ್ಟೆಗಳು ಮತ್ತು ಆನ್‌ಲೈನ್ ಡೀಲ್‌ಗಳ ಅಬ್ಬರ ಈಗಾಗಲೇ ಪ್ರಾರಂಭವಾಗಿದೆ. ಈ ಫೇಸ್ಟಿವ್‌ ಸೀಸನ್‌ನಲ್ಲಿನಿಮ್ಮ (Festive Season) ಕುಟುಂಬ ಅಥವಾ ಸ್ನೇಹಿತರಿಗೆ ಏನು ಉಡುಗೊರೆ ನೀಡಬೇಕೆಂದು ನೀವು ಗೊಂದಲಕ್ಕೊಳಗಾಗಿದ್ದರೆ, ರೆಡ್ ಮಿ ಈ ಕ್ರಿಸ್ಮಸ್ ಸೇಲ್‌ನತ್ತ ಒಮ್ಮೆ ಗಮನಹರಿಸಿ. ಕ್ರಿಸ್‌ಮಸ್ ಬೆನ್ನಲ್ಲೇ ಸ್ಮಾರ್ಟ್‌ಫೋನ್‌ಗಳಿಂದ ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಬಡ್‌ಗಳವರೆಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ರೆಡ್‌ ಮಿ ಭಾರೀ ಬೆಲೆ ಇಳಿಕೆಯನ್ನು ಘೋಷಿಸಿದೆ.

ಕ್ರಿಸ್‌ಮಸ್‌ನಲ್ಲಿ ರೆಡ್‌ ಮಿಯಿಂದ ನಿಮಗಾಗಿ ನೀಡಲಾಗಿರುವ‌ ಕೆಲವು ಉತ್ತಮ ಡೀಲ್‌ಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ರೆಡ್‌ ಮಿ ಅಧಿಕೃತ ವೆಬ್ಸೈಟ್‌ನಲ್ಲಿ ನೀವು ಹೆಚ್ಚಿನ ಆಫರ್ಸ್‌ ಮಾಹಿತಿ ಪಡೆಯಬಹದು. ಇವುಗಳನ್ನು ನೀವೂ ಖರೀದಿಸಬಹುದು ಅಥಹಾ ನಿಮ್ಮ ಪ್ರೀತಿಪಾತ್ರರಿಗೆ ಉಡುಗರೆಯಾಗಿ ಕೂಡ ನೀಡಬಹುದು. 

Tap to resize

Latest Videos

Redmi Note 11T 5G

ಬಜೆಟ್ 5G ಸ್ಮಾರ್ಟ್‌ಫೋನ್ 6nm MediaTek Dimensity 810 810 ಪ್ರೊಸೆಸರ್‌ನಿಂದ ಡ್ಯುಯಲ್ 5G ಸ್ಟ್ಯಾಂಡ್‌ಬೈ ಬೆಂಬಲ, ಹೈಬ್ರಿಡ್ ಸಿಮ್ ಸ್ಲಾಟ್ ಒಳಗೊಂಡಿದೆ. Redmi Note 11T 5G 5000mAh ಬ್ಯಾಟರಿ ಮತ್ತು 33W ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ. ಅದರ ಕ್ಯಾಮೆರಾದ ಕಡೆ ಗಮನಿಹರಿಸಿದರೆ, ಇದು 50MP ಪ್ರಾಥಮಿಕ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್‌ನ  ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜತೆಗೆ 16MP ಸೆಲ್ಫಿ ಕ್ಯಾಮ್‌ನೊಂದಿಗೆ ಒಳಗೊಂಡಿದೆ. 

ನೀವು ಡಿಸೆಂಬರ್ 21 ರಂದು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ₹15,999 ರ ರಿಯಾಯಿತಿ ಬೆಲೆಯಲ್ಲಿ ಡೀಲ್ ಅನ್ನು ಪಡೆದುಕೊಳ್ಳಬಹುದು. ಈ ಮೊಬೈಲ್ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ₹22,899 ಬೆಲೆಯಲ್ಲಿ ಲಭ್ಯವಿದೆ.

Redmi 9i and Redmi 9A

MediaTek Helio G25 ಜೊತೆಗೆ, Redmi 9i HD+ IPS ಡಿಸ್ಪ್ಲೇಯಲ್ಲಿ ಸ್ಪಷ್ಟ ವಿವರಗಳು ಮತ್ತು ಎದ್ದುಕಾಣುವ ಬಣ್ಣಗಳನ್ನು ಬೆಂಬಲಿಸುತ್ತದೆ.  ಇದು 5000-mAh ನ ಬೃಹತ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಕ್ರಿಸ್ಮಸ್  ಸೇಲ್‌ನಲ್ಲಿ ₹8499 ಬೆಲೆಗೆ ಲಭ್ಯವಿದೆ.  Redmi 9A, ಡಾಟ್-ನೋಚ್ ಜತೆಗೆ HD+ LCD IPS ಡಿಸ್ಪ್ಲೇ ಹೊಂದಿದ್ದು ಇದರ ಆರಂಭಿಕ ಬೆಲೆ ₹6,999 ಆಗಿದೆ. ಈ ಆಫರ್ ಡಿಸೆಂಬರ್ 21 ರವರೆಗೆ ಲಭ್ಯವಿರಲಿದೆ.

RedmiBook 15 Series

ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲ, ಮೊದಲೇ ಹೇಳಿದಂತೆ ರೆಡ್‌ಮಿ ಲ್ಯಾಪ್‌ಟಾಪ್‌ಗಳ ಮೇಲೂ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. 10 ಗಂಟೆಗಳ ವಿಸ್ತೃತ ಬ್ಯಾಟರಿ ಅವಧಿಯೊಂದಿಗೆ, RedmiBook 15 Pro ಇತ್ತೀಚಿನ 11th Gen Intel TigerLake Core i5-11300H ಮತ್ತು 11 ನೇ ಜನ್ ಇಂಟೆಲ್ ಟೈಗರ್‌ಲೇಕ್ ಕೋರ್ i3-1115G4 ಜೊತೆಗೆ RedmiBook 15 e-learning  ಆವೃತ್ತಿಯಿಂದ ಚಾಲಿತವಾಗಿದೆ. RedmiBook ಇ-ಲರ್ನಿಂಗ್ ಆವೃತ್ತಿಗೆ ₹37,999 ಮತ್ತು RedmiBook 15 Pro ₹47,999 ರ ಆರಂಭಿಕ ಆಫರ್‌ನಲ್ಲಿ ನೀವು ಡೀಲ್ ಅನ್ನು ಪಡೆದುಕೊಳ್ಳಬಹುದು. ಆಫರ್ ಡಿಸೆಂಬರ್ 22 ರವರೆಗೆ ಮಾತ್ರ ಲಭ್ಯವಿದೆ.

Redmi Earbuds 3 Pro

ನಿಮ್ಮ ಸಂಗೀತದ ಅನುಭವವನ್ನು ಹೆಚ್ಚಿಸಲು ಅಥವಾ ಯಾರಿಗಾದರೂ ಉಡುಗೊರೆ ನೀಡಲು, Redmi Earbuds 3 Pro ಅನ್ನು ಉತ್ತಮ ಆಯ್ಕೆಯಾಗಿದೆ. ಬ್ಲೂಟೂತ್ 5.2 ತಂತ್ರಜ್ಞಾನದೊಂದಿಗೆ, Redmi Earbuds 3 Pro ರಿಯಾಯಿತಿಯ ದರದಲ್ಲಿ ಕೇವಲ ₹2,499 ಬೆಲೆಯನ್ನು ಹೊಂದಿದೆ ಮತ್ತು ಡಿಸೆಂಬರ್ 21 ರವರೆಗೆ ಮಾತ್ರ ಈ ಬೆಲೆಯಲ್ಲಿ ಲಭ್ಯವಿದೆ. ನೀವು ಪಿಂಕ್, ಬಿಳಿ ಮತ್ತು ನೀಲಿ ಬಣ್ಣಗಳ‌ ಮೂರು ವೇರಿಯಂಟ್ ಇಯರ್‌ಬಡ್‌ಗಳನ್ನು ಖರೀದಿಸಬಹುದು.

ರೆಡ್‌ ಮಿ ಉತ್ಪನ್ನಗಳ ಮೇಲಿನ ಇನ್ನಷ್ಟು ಬರ್ಜರಿ ಆಫರ್‌ಗಳನ್ನು ಇಲ್ಲಿ ನೋಡಿ:  MI Website

ಇದನ್ನೂ ಓದಿ:

1) Most Spammed Countries: ಅತಿ ಹೆಚ್ಚು ಸ್ಪ್ಯಾಮ್ ಕರೆಗಳು ಸ್ವೀಕರಿಸಿದ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ!

2) 2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್?

3) Flipkart Big Saving Days ಸೇಲ್‌ನಲ್ಲಿದೆ Realme ಮೊಬೈಲ್‌ಗಳ ಮೇಲೆ ಸೂಪರ್ ಆಫರ್!

click me!