ಇನ್ಸ್ಟಾಗ್ರಾಮ್‌ನಲ್ಲಿತ್ತು ಡೇಂಜರಸ್ ಬಗ್; ಪತ್ತೆಹಚ್ಚಿದ ಚೆನ್ನೈ ಟೆಕ್ಕಿಗೆ ಹೊಡೀತು 21 ಲಕ್ಷದ ಜಾಕ್‌ಪಾಟ್ !

Published : Jul 19, 2019, 06:40 PM ISTUpdated : Jul 19, 2019, 06:54 PM IST
ಇನ್ಸ್ಟಾಗ್ರಾಮ್‌ನಲ್ಲಿತ್ತು ಡೇಂಜರಸ್ ಬಗ್; ಪತ್ತೆಹಚ್ಚಿದ ಚೆನ್ನೈ ಟೆಕ್ಕಿಗೆ ಹೊಡೀತು 21 ಲಕ್ಷದ ಜಾಕ್‌ಪಾಟ್ !

ಸಾರಾಂಶ

ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್‌ನಲ್ಲಿ, ಬಳಕೆದಾರರ ಖಾತೆ ಸುಲಭವಾಗಿ ಹ್ಯಾಕ್ ಆಗುವಂತಹ ಬಗ್ ಇತ್ತು. ಚೆನ್ನೈ ಸಾಫ್ಟ್‌ವೇರ್ ಇಂಜಿನಿಯರ್ ಇದನ್ನು ಪತ್ತೆ ಹಚ್ಚಿ 21 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರು (ಜು.19): ತಂತ್ರಜ್ಞಾನದ ಎಲ್ಲಾ ಪ್ರಾಡಕ್ಟ್‌ಗಳು ಪರ್ಫೆಕ್ಟ್ ಆಗಿವೆ ಎಂದು ಹೇಳಲಾಗದು. ಏನೋ ಒಂದು ದೋಷ, ಎಲ್ಲೋ ಅವಿತುಕೊಂಡಿರುತ್ತದೆ. ಸಾಮಾನ್ಯ ಬಳಕೆದಾರರನಿಗೆ ಅದು ಕಾಣಿಸಲ್ಲ. 

ಹಾಗಾಗಿ ಕಂಪನಿಗಳು ಬ್ಯಾಕ್‌ಎಂಡ್‌ನಲ್ಲಿ ಅಂಥ ಬಗ್‌ಗಳನ್ನು ಪತ್ತೆಹಚ್ಚಿ ಸರಿಮಾಡುತ್ತವೆ. (ಕಂಪ್ಯೂಟರ್ ಭಾಷೆಯಲ್ಲಿ ಬಗ್ ಅಂದ್ರೆ, ಪ್ರೋಗ್ರಾಂನಲ್ಲಿರುವ ದೋಷ) ಅದಕ್ಕಾಗಿ ನುರಿತ ಉದ್ಯೋಗಿಗಳನ್ನೂ ಕಂಪನಿಗಳು ನೇಮಿಸಿಕೊಂಡಿರುತ್ತವೆ. 

ಬಗ್‌ಗಳನ್ನು ಪತ್ತೆಹಚ್ಚಲು ಜನಪ್ರಿಯ ಫೋಟೋ ಶೇರಿಂಗ್ ಸೋಶಿಯಲ್ ಮೀಡಿಯಾ ಆ್ಯಪ್ ಇನ್ಸ್ಟಾಗ್ರಾಮ್ ಒಂದು ಐಡಿಯಾ ಮಾಡಿತ್ತು. ಅದೇನಂದ್ರೆ, ‘ಬಗ್ ಬೌಂಟಿ’ ಎಂಬ ಯೋಜನೆಯನ್ನು ಹಾಕಿಕೊಂಡಿದೆ. ಕೋಡಿಂಗ್ ಗೊತ್ತಿರುವವರು ಬಗ್ ಪತ್ತೆ ಹಚ್ಚಿದರೆ ಸಾಕು. ಅದೃಷ್ಟ  ಖುಲಾಯಿಸುತ್ತೆ!

ಇದನ್ನೂ ಓದಿ | ಟಿಕ್‌ಟಾಕ್‌, ಹೆಲೋ ಆ್ಯಪ್‌ಗೆ ಮತ್ತೆ ನಿಷೇಧ ಭೀತಿ!

ಲಕ್ಷ್ಮಣ್ ಮುತ್ತ್ಯಾ ಎಂಬ ಚೆನ್ನೈನ ಸೆಕ್ಯೂರಿಟಿ ರಿಸರ್ಚರ್, ಅಪಾಯಕಾರಿ ಬಗ್ ಒಂದನ್ನು ಪತ್ತೆ ಹಚ್ಚಿ 30000 ಡಾಲರ್, ಅಂದ್ರೆ ಭಾರತದ ಸುಮಾರು 21 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ.

ಪಾಸ್‌ವರ್ಡ್ ರಿಸೆಟ್ ಮಾಡೋ ಮೂಲಕ, ರಿಕವರಿ ಕೋಡ್ ಪಡೆಯುವ ಮೂಲಕ ಬೇರೋಬ್ಬರ ಅಕೌಂಟನ್ನು ಹ್ಯಾಕ್ ಮಾಡಬಹುದು ಎಂದು ಲಕ್ಷ್ಮಣ್ ಪತ್ತೆ ಹಚ್ಚಿದ್ದಾರೆ.

ಲಕ್ಷ್ಮಣ್ ತಮ್ಮ ವರದಿಯನ್ನು ಫೇಸ್ಬುಕ್ ಓಡೆತನದ ಇನ್ಸ್ಟಾಗ್ರಾಮ್ ನ ಸೆಕ್ಯೂರಿಟಿ ತಂಡಕ್ಕೆ ಕಳುಹಿದ್ದರು. ಆದರೆ ಮೊದಲು ಆ ದೋಷವನ್ನು ಸೆಕ್ಯೂರಿಟಿ ತಂಡವು ಒಪ್ಪಿಕೊಂಡಿರಲಿಲ್ಲ. ಬಳಿಕ ಮೇಲ್ ಮೂಲಕ ಇನಷ್ಟು ಮಾಹಿತಿ ಒದಗಿಸಿದ ಬಳಿಕ  ಬಗ್ ಇರೋದಾಗಿ ಇನ್ಸ್ಟಾಗ್ರಾಮ್ ಒಪ್ಪಿಕೊಂಡಿದೆ.

ಬಳಿಕ ಆ ದೋಷವನ್ನು ಸರಿಪಡಿಸಿ, ಲಕ್ಷ್ಮಣ್ ಗೆ 30000 ಡಾಲರ್ ಬಹುಮಾನವನ್ನು ಪ್ರಕಟಿಸಿದೆ. ಈ ಹಿಂದೆಯೂ ಲಕ್ಷ್ಮಣ್ ಫೇಸ್ಬುಕ್‌ನಲ್ಲಿರುವ ಬಗ್ಗನ್ನು ಪತ್ತೆ ಹಚ್ಚಿದ್ದರು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು