ಬುಧವಾರ ಬೆಳಗ್ಗೆ ಚಂದ್ರನ ಕಡೆಗೆ ಚಂದ್ರಯಾನ 2 ನೌಕೆ ಪ್ರಯಾಣ

By Web DeskFirst Published Aug 13, 2019, 1:33 PM IST
Highlights

ಬುಧವಾರ ಬೆಳಗ್ಗೆ ಚಂದ್ರನ ಕಡೆಗೆ| ಚಂದ್ರಯಾನ 2 ನೌಕೆ ಪ್ರಯಾಣ| ಚಂದ್ರನ ಕಕ್ಷೆಯ ಕಡೆಗೆ ಪ್ರಯಾಣಕ್ಕೆ ಇಸ್ರೋ ನೌಕೆ ಸಜ್ಜು|  ಆ.20ರಂದು ಚಂದ್ರನ ಕಕ್ಷೆ ಪ್ರವೇಶ, ಸೆ.7ಕ್ಕೆ ಲ್ಯಾಂಡಿಂಗ್‌

ಅಹಮದಾಬಾದ್‌[ಆ.13]: ಜುಲೈ 22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಯಶಸ್ವಿಯಾಗಿ ಉಡ್ಡಯನ ಮಾಡಲ್ಪಟ್ಟಇಸ್ರೋದ ಚಂದ್ರಯಾನ 2 ನೌಕೆಯು, ಇನ್ನು 2 ದಿನಗಳಲ್ಲಿ ಚಂದ್ರನ ಕಡೆಗೆ ತನ್ನ ಪ್ರಯಾಣ ಆರಂಭಿಸಲಿದೆ. ಉಡ್ಡಯನದ ಬಳಿಕ 5 ಬಾರಿ ವಿವಿಧ ಕಕ್ಷೆಗಳಲ್ಲಿ ಭೂಮಿಯ ಸುತ್ತಲೂ ಸುತ್ತುತ್ತಿರುವ ನೌಕೆ, ಇನ್ನು 2 ದಿನಗಳಲ್ಲಿ ಚಂದ್ರನ ಕಡೆಗೆ ಮುಖ ಮಾಡಿ ತನ್ನ ಸಂಚಾರ ಆರಂಭಿಸಲಿದೆ.

ಈ ಕುರಿತು ಹೇಳಿಕೆ ನೀಡಿರುವ ಇಸ್ರೋದ ಅಧ್ಯಕ್ಷ ಕೆ.ಶಿವನ್‌, ಉಡ್ಡಯನದ ಬಳಿಕ ಇದುವರೆಗೆ 5 ಬಾರಿ ಚಂದ್ರಯಾನ 2 ನೌಕೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲವೂ ಪೂರ್ವನಿಗದಿಯಂತೆ ಸುಸೂತ್ರವಾಗಿ ನಡೆದಿದೆ. ಅತ್ಯಂತ ಮಹತ್ವವಾದ ಮುಂದಿನ ಕಕ್ಷೆ ಏರಿಕೆಯ ಪ್ರಕ್ರಿಯೆ ಬುಧವಾರ ಬೆಳಗಿನ ಜಾವ 3.30ಕ್ಕೆ ನಡೆಯಲಿದೆ. ಈ ಪ್ರಕ್ರಿಯೆಯೊಂದಿಗೆ ನೌಕೆಯು ಚಂದ್ರನ ಕಕ್ಷೆ ಕಡೆಗೆ ಪ್ರಯಾಣ ಆರಂಭಿಸಲಿದ್ದು, ಆ.20ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಚಂದ್ರನ ಕಕ್ಷೆ ಸೇರಿದ ಬಳಿಕ ಅಲ್ಲಿ ಮತ್ತೆ ಹಲವು ಸುತ್ತಿನಲ್ಲಿ ಕಕ್ಷೆ ಬದಲಾವಣೆಯ ಪ್ರಕ್ರಿಯೆ ನಡೆಯಲಿದೆ. ಅಂತಿಮವಾಗಿ ಸೆ.7ರಂದು ನೌಕೆಯಲ್ಲಿರುವ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನ ದಕ್ಷಿಣ ಧ್ರುವದ ನಿಗದಿತ ಪ್ರದೇಶದಲ್ಲಿ ಇಳಿಯಲಿದೆ ಎಂದು ಹೇಳಿದ್ದಾರೆ.

click me!