
ವಾಷಿಂಗ್ಟನ್(ಆ.12): ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು ಗ್ರಹಕ್ಕೆ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದಿದ್ದು, ಗ್ರಹದ ಮೇಲ್ಮೈಗೆ ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ.
ಖಗೋಳ ವಿಜ್ಞಾನಿ ಎಥಾನ್ ಚಾಪೆಲ್ ತಮ್ ಟೆಲಿಸ್ಕೋಪ್’ನಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದು, ಗುರು ಗ್ರಹದ ವಾತಾವರಣ ಪ್ರವೇಶಿಸಿದ ಕ್ಷುದ್ರಗ್ರಹ ಉರಿದು ಭಸ್ಮವಾಗುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಗುರುವಿನ ವೀಕ್ಷಣೆಯಲ್ಲಿ ನಿರತರಾಗಿದ್ದ ಎಥಾನ್ ಚಾಪೆಲ್ ಅವರಿಗೆ, ದೊಡ್ಡ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಗೋಚರವಾಗಿದೆ. ಟೆಲಿಸ್ಕೋಪ್’ನಲ್ಲಿ ಸ್ಪಷ್ಟವಾಗಿ ಸೆರೆಯಾದ ಈ ದೃಶ್ಯವನ್ನು ಆಧರಿಸಿ, ಗುರುವಿಗೆ ಡಿಕ್ಕಿ ಹೊಡೆದ ಕ್ಷುದ್ರಗ್ರಹ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿರಬಹುದು ಎಂದು ಊಹಿಸಲಾಗಿದೆ.
ಆದರೆ ಎಥಾನ್ ಚಾಪೆಲ್ ಸೆರೆ ಹಿಡಿದಿರುವುದು ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ದೃಶ್ಯವೋ ಅಥವಾ ಗುರುಗ್ರಹದ ಆಂತರಿಕ ಬದಲಾವಣೆಗಳ ದೃಶ್ಯವೋ ಎಂಬುದು ಸ್ಪಷ್ಟವಾಗಬೇಕಿದೆ.
ಕಳೆದ 2009ರಲ್ಲಿ ಪೆಸಿಫಿಕ್ ಮಹಾಸಾಗರದಷ್ಟು ಅಗಾಧ ಗಾತ್ರದ ಬೃಹತ್ ಕ್ಷುದ್ರಗ್ರಹವೊಂದು ಗುರು ಗ್ರಹಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಗುರಿವಿನ ಮೇಲ್ಮೈ ಮೇಲಿರುವ ’ದಿ ಗ್ರೇಟ್ ರೆಡ್ ಸ್ಪಾಟ್’ ಗಾತ್ರದ ಮತ್ತೊಂದು ಕುಳಿ ನಿರ್ಮಾಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.