ಚಂದ್ರನ ಮಡಿಲಿಗೆ ಚಂದ್ರಯಾನ: ಶಶಿಯ ಕಕ್ಷೆಯಲ್ಲಿ ಭಾರತದ ಮಾನ!

Published : Aug 20, 2019, 12:28 PM ISTUpdated : Aug 20, 2019, 12:33 PM IST
ಚಂದ್ರನ ಮಡಿಲಿಗೆ ಚಂದ್ರಯಾನ: ಶಶಿಯ ಕಕ್ಷೆಯಲ್ಲಿ ಭಾರತದ ಮಾನ!

ಸಾರಾಂಶ

ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನ-2| ಚಂದ್ರಯಾನ-2 ನೌಕೆಯ ಮಹತ್ವದ ಸಾಧನೆ ಪ್ರಕಟಿಸಿದ ಇಸ್ರೋ ಸಂಸ್ಥೆ|  ಒಟ್ಟು 30 ದಿನಗಳ ಕಾಲ ಬಾಹ್ಯಾಕಾಶ ಪ್ರಯಾಣ ಕೈಗೊಂಡ ಚಂದ್ರಯಾನ-2| ಚಂದ್ರನ ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರೆಸಲಿರುವ ಚಂದ್ರಯಾನ-2 ನೌಕೆ|  ಸೆ.02ರಂದು ವಿಕ್ರಮ್ ಉಡಾಯಣಾ ವಾಹಕ ಕಕ್ಷೆಗಾಮಿಯಿಂದ ಪ್ರತ್ಯೇಕ| ಸೆ.07 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಲಿರುವ ನೌಕೆ|

ಬೆಂಗಳೂರು(ಆ.20): ಚಂದ್ರನ ಅಧ್ಯಯನಕ್ಕೆ ಭಾರತ ಕಳುಹಿಸಿರುವ ಚಂದ್ರಯಾನ-2 ನೌಕೆ, ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ಪ್ರಕಟಿಸಿದೆ.

ಒಟ್ಟು 30 ದಿನಗಳ ಕಾಲ ಬಾಹ್ಯಾಕಾಶ ಪ್ರಯಾಣ ಕೈಗೊಂಡ ಚಂದ್ರಯಾನ-2, ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವಾನ್ ಸ್ಪಷ್ಟಪಡಿಸಿದ್ದಾರೆ.

ಚಂದ್ರಯಾನ-2 ನೌಕೆಯ ಚಂದ್ರನ ಕಕ್ಷೆಯ ಅಳವಡಿಕೆ(LOI) ಚಲನೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇನ್ನು ಮುಂದೆ ಚಂದ್ರನ ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರೆಸಲಿದೆ.

ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಚಂದ್ರನ ಧ್ರುವದ ಮೇಲೆ ಇನ್ನು ನಾಲ್ಕು ದಿನಗಳ ಬಳಿಕ ನೌಕೆ ಪ್ರವೇಶಿಸಲಿದೆ.

ಇನ್ನು ಸೆ.02ರಂದು ವಿಕ್ರಮ್ ಉಡಾಯಣಾ ವಾಹಕ ಕಕ್ಷೆಗಾಮಿಯಿಂದ ಪ್ರತ್ಯೇಕವಾಗಲಿದ್ದು, ಸೆ.7 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂಬ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ