1 ವರ್ಷ ಬದಲು 2 ವರ್ಷ ಚಂದ್ರನ ಸುತ್ತ ಸುತ್ತಲಿದೆ ಚಂದ್ರಯಾನ-2 ಆರ್ಬಿಟರ್‌

By Web Desk  |  First Published Jul 29, 2019, 7:51 AM IST

1 ವರ್ಷ ಬದಲು 2 ವರ್ಷ ಚಂದ್ರನ ಸುತ್ತ ಸುತ್ತಲಿದೆ ಚಂದ್ರಯಾನ-2 ಆರ್ಬಿಟರ್‌| ಆರ್ಬಿಟರ್‌ನಲ್ಲಿದೆ ಹೆಚ್ಚುವರಿ ಇಂಧನ


ಬೆಂಗಳೂರು[ಜು.29]: ಚಂದ್ರಯಾನ-2 ನೌಕೆಯಲ್ಲಿರುವ ಆರ್ಬಿಟರ್‌ ಚಂದ್ರನ ಸುತ್ತ ಒಂದು ವರ್ಷದ ಬದಲಾಗಿ 2 ವರ್ಷಗಳ ಕಾಲ ಸುತ್ತುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ಅಂದಾಜಿಸಿದೆ. ಉಡಾವಣೆಯ ಸಂದರ್ಭದಲ್ಲಿ ಆರ್ಬಿಟರ್‌ಗೆ 1,697 ಕೆ.ಜಿ. ಇಂಧನವನ್ನು ತುಂಬಲಾಗಿತ್ತು.

ಜು.24 ಮತ್ತು ಜು.26ರಂದು ಕಕ್ಷೆಯನ್ನು ಎತ್ತರಿಸುವ ವೇಳೆ ಕೇವಲ 130 ಕೆ.ಜಿ.ಯಷ್ಟುಇಂಧನ ಮಾತ್ರ ಖರ್ಚಾಗಿದೆ. ಭೂಮಿಯ ಕಕ್ಷೆಯಿಂದ ಇನ್ನಷ್ಟುಎತ್ತರಿಸಲು 657 ಕೆ.ಜಿ.ಯಷ್ಟುಇಂಧನದ ಅಗತ್ಯವಿದೆ. ಚಂದ್ರನ ಕಕ್ಷೆಗೆ ಎತ್ತರಿಸಲು 749 ಕೆ.ಜಿ. ಇಂಧನದ ಅಗತ್ಯವಿದೆ.

Tap to resize

Latest Videos

ಹೀಗಾಗಿ ಆರ್ಬಿಟರ್‌ನಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಇಂಧನ ಉಳಿದುಕೊಳ್ಳಲಿದೆ. ಆರ್ಬಿಟರ್‌ ಚಂದ್ರನ ಕಕ್ಷೆಯನ್ನು ತಲುಪಿದಾಗ ಅದರಲ್ಲಿ 290 ಕೆ.ಜಿಯಷ್ಟುಇಂಧನ ಉಳಿದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಇಸ್ರೋ ಅಂದಾಜಿಸಿದಂತೆ ಎಲ್ಲವೂ ಆದರೆ, ಆರ್ಬಿಟರ್‌ ಒಂದು ವರ್ಷದ ಬದಲು ಎರಡು ವರ್ಷ ಚಂದ್ರನ ಮೇಲ್ಮೈ ಅನ್ನು ಸುತ್ತಲಿದೆ ಎಂದು ಇಸ್ರೋ ವಿಜ್ಞಾನಿಗಳ ತಂಡ ಅಂದಾಜಿಸಿದೆ.

click me!