ಚಂದ್ರಯಾನ-2 ಆಯುಷ್ಯ ಹೆಚ್ಚಳ ಸಾಧ್ಯತೆ: ಇಸ್ರೋ!

By Web Desk  |  First Published Jul 28, 2019, 9:08 PM IST

ಚಂದ್ರಯಾನ-2 ಆಯುಷ್ಯ ವೃದ್ಧಿಸಲಿದೆಯಾ ಇಸ್ರೋ?| ಒಂದು ವರ್ಷದ ಬದಲಾಗಿ ಎರಡು ವರ್ಷ ಚಂದ್ರನ ಸುತ್ತುವ ಚಂದ್ರಯಾನ-2? ಕಾರ್ಯನಿರ್ವಹಣೆ ಮತ್ತು ಕ್ಷಮತೆ ಗಮನಿಸಿ ಆಯುಷ್ಯ ಹೆಚ್ಚಳ ಸಂಭವ| ಉಳಿತಾಯದ ಇಂಧನದಿಂದಾಗಿ ಚಂದ್ರಯಾನ-2 ಆಯುಷ್ಯ ಹೆಚ್ಚಳ ಸಂಭವ| 


ಬೆಂಗಳೂರು(ಜು.28): ಚಂದ್ರಯಾನ-2 ಯಶಸ್ವಿ ಉಡಾವಣೆಯ ಬೆನ್ನಲ್ಲೇ, ಯೋಜನೆಯ ಕಾಲವನ್ನು ವಿಸ್ತರಿಸಲು ಇಸ್ರೋ ನಿರ್ಧರಿಸಿದೆ. ಚಂದ್ರಯಾನ-2 ಈ ಮೊದಲು ಒಂದು ವರ್ಷಗಳ ಕಾಲ ಚಂದ್ರನ ಕಕ್ಷೆಯನ್ನು ಸುತ್ತಲಿತ್ತು. ಇದೀಗ ಎರಡು ವರ್ಷಗಳ ಕಾಲ ಸುತ್ತುವಂತೆ ಇಸ್ರೋ ಯೋಜನೆ ಸಿದ್ಧಪಡಿಸಿದೆ.

ಚಂದ್ರಯಾನ-2 ಸದ್ಯದ ಕಾರ್ಯನಿರ್ವಹಣೆ ಮತ್ತು ಕ್ಷಮತೆ ಗಮನಿಸಿ ಎರಡು ವರ್ಷಗಳ ಕಾಲ ಚಂದ್ರನ ಅಧ್ಯಯನ ನಡೆಸುವಂತೆ ಮಾಡಲು ಇಸ್ರೋ ಮುಂದಾಗಿದೆ ಎನ್ನಲಾಗಿದೆ. 

Latest Videos

undefined

ಕಕ್ಷೆ ಬದಲಾವಣೆಯ ಎಲ್ಲ ಕಾರ್ಯಗಳ ಬಳಿಕವೂ ಚಂದ್ರಯಾನ-2 ರಲ್ಲಿ ಹೆಚ್ಚಿನ ಇಂಧನ ಉಳಿಯಲಿದ್ದು, ಇದು 2 ವರ್ಷಗಳ ಕಾಲ ಕಾರ್ಯನಿರ್ವಹಣೆಗೆ ಸಹಾಯಕಾರಿ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.  

ಉಡ್ಡಯನದ ವೇಳೆ 1,697 ಕೆ.ಜಿ ತೂಕದ ಇಂಧನವನ್ನು ಕಕ್ಷೆಗಾಮಿಯಲ್ಲಿ ತುಂಬಲಾಗಿತ್ತು. ಜೂನ್ 24 ಮತ್ತು 26ರಂದು ಇಸ್ರೋ ಕೈಗೊಂಡ 2 ಪಥ ಬದಲಾವಣೆ ಕಾರ್ಯಾಚರಣೆಯಲ್ಲಿ 130 ಕೆ.ಜಿ ಇಂಧನ ಬಳಕೆಯಾಗಿದೆ. ಜುಲೈ 27ರಂದು ಆರ್ಬಿಟರ್‌ನಲ್ಲಿ 1,500 ಕೆ.ಜಿ ಇಂಧನ ಉಳಿದಿತ್ತು. 

ಉಡ್ಡಯನ ಕಾರ್ಯಾಚರಣೆ ಅತ್ಯಂತ ನಿಖರವಾಗಿ ನಡೆದಿರುವುದರಿಂದ, ಅಂದಾಜು 40 ಕೆ.ಜಿಯಷ್ಟು ಇಂಧನ ಉಳಿತಾಯವಾಗಿದೆ ಇದು ನೌಕೆಯ ಆಯುಷ್ಯ ವೃದ್ಧಿಸಲು ಸಹಾಯಕಾರಿ ಎಂದು ವಿಜ್ಞಾನಿಗಳ ಸ್ಪಷ್ಟಪಡಿಸಿದ್ದಾರೆ.

click me!