ರದ್ದಾಯ್ತು ಮಹತ್ವಾಕಾಂಕ್ಷಿ ಇಸ್ರೋ ಚಂದ್ರಯಾನ - 2

Published : Jul 15, 2019, 07:50 AM ISTUpdated : Jul 15, 2019, 05:41 PM IST
ರದ್ದಾಯ್ತು ಮಹತ್ವಾಕಾಂಕ್ಷಿ ಇಸ್ರೋ ಚಂದ್ರಯಾನ - 2

ಸಾರಾಂಶ

ಮಹತ್ವಾಕಾಂಕ್ಷಿ ಚಂದ್ರಯಾನ 2 ಉಡಾವಣೆ ಮುಂದೂಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ರದ್ದು ಮಾಡಲಾಗಿದೆ.

ಶ್ರೀಹರಿಕೋಟಾ [ಜು.15]:  ಶತಶತಮಾನಗಳಿಂದಲೂ ಅಗಣಿತ ರಹಸ್ಯದ ಗಣಿಯಾಗಿರುವ ಚಂದ್ರನಲ್ಲಿ ಶೋಧ ನಡೆಸುವ ಇಸ್ರೋದ ಚಂದ್ರಯಾನ 2 ಪ್ರಯಾಣ  ಮುಂದೂಡಲಾಗಿದೆ. 

"

ಅಂದುಕೊಂಡಂತೆ ನಡೆದಿದ್ದರೆ ಜುಲೈ 15ರ ಮುಂಜಾವು 2.51ಕ್ಕೆ ಆರ್ಬಿಟರ್‌, ಲ್ಯಾಂಡರ್‌ ಹಾಗೂ ರೋವರ್‌ ಹೊತ್ತ ಜಿಎಸ್‌ಎಲ್‌ವಿ ಎಂಕೆ 3 ರಾಕೆಟ್‌ ಬಾಹ್ಯಾಕಾಶಕ್ಕೆ ಚಿಮ್ಮಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ರದ್ದಾಗಿದೆ. 

ಚಂದ್ರಯಾನ ನೌಕೆ ಉಡಾವಣೆಯಾದ ಕೆಲ ದಿನಗಳಲ್ಲಿ ನಿಗದಿತ ಕಕ್ಷೆಯಲ್ಲೇ ಭೂಮಿಯನ್ನು ಸುತ್ತು ಹೊಡೆದು ಬಳಿಕ ಹಂತಹಂತವಾಗಿ ಚಂದ್ರನ ಕಕ್ಷೆ ಪ್ರವೇಶಿಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯು ಇದಕ್ಕೆ ಅಡ್ಡಿಯಾಗಿದೆ. 

ಉದ್ದೇಶ ಏನು?:

ಚಂದ್ರ ಸೃಷ್ಟಿಯಾಗಿದ್ದು ಹೇಗೆ? ಬೆಳವಣಿಗೆ ಹೊಂದಿದ್ದು ಹೇಗೆ? ಅಲ್ಲಿ ನೀರಿದೆಯಾ? ಯಾವೆಲ್ಲ ಖನಿಜಗಳು ಇವೆ? ಭೂಮಿಗೂ ಚಂದ್ರನಿಗೂ ಏನು ಸಂಬಂಧ ಎಂಬೆಲ್ಲಾ ಕೌತುಕ ಭೇದಿಸುವ ನಿಟ್ಟಿನಲ್ಲಿ ಇಸ್ರೋ ಈ ಅಧ್ಯಯನ ಕೈಗೊಂಡಿದೆ. ಜೊತೆಗೆ ಇದುವರೆಗೂ ಯಾರ ಕಣ್ಣಿಗೂ ಕಾಣಿಸಿದ ದಕ್ಷಿಣ ಧ್ರುವದ ಕುರಿತು ಬೆಳಕು ಚೆಲ್ಲವು ಉದ್ದೇಶ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ