ಬಿಎಸ್ಎನ್ಎಲ್ ಹೊಸ ಪ್ಲಾನ್‌ಗೆ ಎದುರಾಳಿಗಳು ಧೂಳಿಪಟ; 200Mbps ಸ್ಪೀಡ್ ಜೊತೆ 5000GB ಡೇಟಾ

By Mahmad Rafik  |  First Published Sep 24, 2024, 10:21 AM IST

ಭಾರತ ಸಂಚಾರ ನಿಗಮ ಲಿಮಿಟೆಡ್ ಒಂದಾದ ನಂತರ ಒಂದರಂತೆ ಖಾಸಗಿ ಕಂಪನಿಗಳಿಗೆ ಶಾಕ್ ಕೊಡುತ್ತಿದೆ. ಇದೀಗ ಬರೋಬ್ಬರಿ 5000 GB ಡೇಟಾದ ಪ್ಲಾನ್ ಘೋಷಣೆ ಮಾಡಿದೆ.


ನವದೆಹಲಿ: ಬಿಎಸ್‌ಎನ್‌ಎಲ್ ತನ್ನ ವಿಶೇಷ ಆಫರ್‌ಗಳ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಯನ್ನು ಕೊಳ್ಳೆ ಹೊಡೆದಿರದಂತೂ ನೂರಕ್ಕೆ ನೂರರಷ್ಟು ಸತ್ಯ. ಎಲ್ಲಾ ಟೆಲಿಕಾ ಕಂಪನಿಗಳು ಮೊಬೈಲ್ ಡೇಟಾ ಜೊತೆ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಸಹ ನೀಡುತ್ತಿವೆ. ಇದೀಗ ಸರ್ಕಾರಿ ಕಂಪನಿಯಾಗಿರುವ ಬಿಎಸ್‌ಎನ್‌ಲ್ ಎದುರಾಳಿಗಳು ಶೇಖ್ ಆಗುವಂತಹ ಹೊಸ ಪ್ಲಾನ್ ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಬಳಕೆದಾರರಿಗೆ ಕಡಿಮೆ ಬೆಲೆಯ ಪ್ಲಾನ್ ತಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ ಸಿಗುತ್ತದೆ ಭಾರತ ಸಂಚಾರ ನಿಗಮ ಲಿಮಿಟೆಡ್ ನೀಡುತ್ತಿರುವ 5000GB ಡೇಟಾ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ. 

BSNL Bharat Fibre Plan
5000GB ಡೇಟಾ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಲು ಗ್ರಾಹಕರು ತಿಂಗಳಿಗೆ 999 ರೂಪಾಯಿ ರೀಚಾರ್ಜ್ ಮಾಡಬೇಕು. ಈ ಯೋಜನೆಯಡಿ ಗ್ರಾಹಕರಿಗೆ 200Mbps ಸ್ಪೀಡ್‌ನಲ್ಲಿ ಇಂಟರ್‌ನೆಟ್ ಲಭ್ಯವಾಗುತ್ತದೆ. ಡೇಟಾ ಪ್ಯಾಕ್ ಖಾಲಿಯಾದ ನಂತರ  10Mbps ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಇಂಟರ್‌ನೆಟ್ ಲಭ್ಯವಾಗುತ್ತದೆ. ಈ ಪ್ಲಾನ್‌ ಮತ್ತೊಂದು ವಿಶೇಷತೆ ಏನೆಂದ್ರೆ ಬಿಎಸ್ಎನ್‌ಎಲ್ ಯಾವುದೇ ಇನ್‌ಸ್ಟಾಲೇಷನ್ ಶುಲ್ಕ ಪಡೆಯದೇ ಉಚಿತ ಸೇವೆಯನ್ನು ನೀಡುತ್ತದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಮನೆಗೆ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಇಂಟರ್‌ನೆಟ್ ಸೌಲಭ್ಯ ಸಿಗುತ್ತದೆ.

Latest Videos

undefined

ಒಂದು ಬಟನ್ ಒತ್ತಿದ್ರೆ Jio-Airtelನಿಂದ ಸಿಗುತ್ತೆ ಮುಕ್ತಿ; ಕೆಲವೇ ನಿಮಿಷದಲ್ಲಿ ಮನೆಗೆ ಬರುತ್ತೆ BSNL 4G ಸಿಮ್

ಇದೇ 999 ರೂಪಾಯಿಯಲ್ಲಿಯೇ ಅಂದ್ರೆ ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಹಲವು ಓಟಿಟಿ ಆಪ್‌ ಗಳ ಉಚಿತ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. ಬಳಕೆದಾರರಿಗೆ  Disney Plus Hotstar, Sony LIV, Zee5, YuppTV, Hungama ಸೇರಿದಂತೆ ಹಲವು OTTಯ ಚಂದಾದಾರಿಕೆ ಉಚಿವಾಗಿ ಸಿಗಲಿದೆ. ಇಷ್ಟು ಮಾತ್ರವಲ್ಲದೇ ಈ ಪ್ಲಾನ್‌ ಆಕ್ಟಿವೇಟ್ ಮಾಡಿಕೊಂಡ ನಂಬರ್‌ಗೆ ಇಡೀ ದೇಶದ ತುಂಬೆಲ್ಲಾ ಅನ್‌ಲಿಮಿಟೆಡ್ ಕಾಲಿಂಗ್ ಫ್ರೀ ಆಫರ್ ಕೊಡಲಾಗುತ್ತದೆ.

999 ರೂಪಾಯಿಗೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ ಪ್ಯಾಕ್ ಬಗ್ಗೆ ಬಿಎಸ್ಎನ್ಎಲ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗ್ರಾಹಕರು ತಮ್ಮ ಮೊಬೈಲ್‌ ನಂಬರ್‌ನಿಂದ ಬಿಎಸ್‌ಎನ್‌ಎಲ್ ನ  18004444 ಈ ಸಂಖ್ಯೆಗೆ ವಾಟ್ಸಪ್‌ನಲ್ಲಿ Hi ಅಂತ ಟೈಪ್ ಮಾಡಿ ಮೆಸೇಜ್ ಕಳುಹಿಸಬೇಕು ಅಥವಾ ಬಿಎಸ್‌ಎನ್ಎಲ್ ನೀಡಿರುವ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿದರೆ ಈ ಪ್ಲಾನ್ ಕುರಿತ ಮಾಹಿತಿ ಸಿಗುತ್ತದೆ. ಇಲ್ಲವೇ ನೇರವಾಗಿ ಬಿಎಸ್‌ಎನ್ಎಲ್ ವೆಬ್‌ಸೈಟ್ ಅಥವಾ ಸಮೀಪದ ಟೆಲಿಫೋನ್ ಎಕ್ಸ್‌ಚೇಂಜ್ ಕೇಂದ್ರಕ್ಕೆ ಭೇಟಿ ನೀಡಿ ಫೈಬರ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಬಹುದು. 

ಬೆಲೆ ಏರಿಕೆ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ಗೆ 20 ಲಕ್ಷ ಹೊಸ ಗ್ರಾಹಕರು; ಜಿಯೋ, ಏರ್‌ಟೆಲ್ ಕಳೆದುಕೊಂಡಿದ್ದೆಷ್ಟು?

Unlimited data, calling & fun, just in Rs 999/month !!!
Subscribe for https://t.co/kqmAq7rbBn or Call or Say 'Hi' to 18004444 (WhatsApp) pic.twitter.com/PYXhmNH8iy

— BSNL_RAJASTHAN (@BSNL_RJ)
click me!