ದೂರವಾಯ್ತು ಬಿಎಸ್‌ಎನ್‌ಎಲ್‌ಗೆ ಇದ್ದ ಸಮಸ್ಯೆ-  ಕೈ ಜೋಡಿಸಿದ  ದೇಶಿ ಕಂಪನಿ  

By Mahmad Rafik  |  First Published Sep 15, 2024, 12:32 PM IST

ಖಾಸಗಿ ಕಂಪನಿಗಳು ಮೊಬೈಲ್ ರೀಚಾರ್ಜ್ ದರ ಏರಿಸಿದ ಬೆನ್ನಲ್ಲೇ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. 5G ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ದೇಶಿ ಕಂಪನಿಯೊಂದು ಬಿಎಸ್‌ಎನ್‌ಎಲ್‌ಗೆ ಸಾಥ್ ನೀಡಿದೆ.


ನವದೆಹಲಿ: ಕಳೆದ ಎರಡ್ಮೂರು ತಿಂಗಳಿನಿಂದ ಟೆಲಿಕಾಂ ಅಂಗಳದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮೊದಲು ಖಾಸಗಿ ಕಂಪನಿಗಳು ಒಂದಾದ ನಂತರ ಒಂದರಂತೆ ಮೊಬೈಲ್ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸಿಕೊಂಡವು. ಬೆಲೆ ಏರಿಕೆ ಬೆನ್ನಲ್ಲೇ ಒಂದಿಷ್ಟು ಬಳಕೆದಾರರು ಎಂಎನ್‌ಪಿ ಮೂಲಕ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಪೋರ್ಟ್ ಆಗುತ್ತಿದ್ದಾರೆ. ಆದ್ರೆ ಹೈಸ್ಪೀಡ್ ಮತ್ತು 5G ನೆಟ್‌ವರ್ಕ್ ಬಳಕೆದಾರರು ಬೆಲೆ ಏರಿಕೆಯಾದ್ರೂ ಅನಿವಾರ್ಯವಾಗಿ ಖಾಸಗಿ ಕಂಪನಿಗಳಲ್ಲಿ  ಉಳಿಯುವಂತಾಗಿತ್ತು. ಇದೀಗ ಬಿಎಸ್‌ಎನ್‌ಎಲ್‌  ಗಿದ್ದ  5ಜಿ ಸಮಸ್ಯೆನಯನ್ನು ದೂರ ಮಾಡಲು  ದೇಶಿ ಕಂಪನಿ ಸಾಥ್ ನೀಡಿದೆ. ಈ ಮೂಲಕ ಬಿಎಸ್‌ಎನ್‌ಎಲ್ 5G ನೆಟ್‌ವರ್ಕ್ ತೊಂದರೆ ದೂರವಾಗಲಿದೆ ಎಂದು ಹೇಳಲಾಗುತ್ತಿದೆ. ಇತ್ತ ಕಳೆದ  ಎರಡು ತಿಂಗಳಿನಿಂದ ಬಿಎಸ್‌ಎನ್ಎಲ್ ಸೇರ್ಪಡೆಯಾಗುವ ಬಳಕೆದಾರರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ.

ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾಗೆ ಟಕ್ಕರ್ ಕೊಡುತ್ತಿರುವ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ, ಅಧಿಕ ಡೇಟಾಗಳ ಆಫರ್ ನೀಡುತ್ತಿವೆ. ಮತ್ತೊಂದೆಡೆ  4G ಮತ್ತು 5G ನೆಟ್‌ವರ್ಕ್ ಅಳವಡಿಕೆಯ ಕೆಲಸವನ್ನು ಅತ್ಯಂತ ವೇಗವಾಗಿ ನಡೆಸುತ್ತಿದೆ. ಇದೀಗ ಬಿಎಸ್‌ಎನ್‌ಎಲ್ 5G ನೆಟ್‌ವರ್ಕ್ ಸೇವೆಯ ಕುರಿತು ಬಿಗ್ ಅಪ್‌ಡೇಟ್ ನ್ಯೂಸ್ ಹೊರ ಬಂದಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಈಗಾಗಲೇ 5G ಟವರ್ ಅಳವಡಿಕೆಯ ಕಾರ್ಯವನ್ನು ಭಾಗಶಃ ಪೂರ್ಣಗೊಳಿಸಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬಿಎಸ್‌ಎನ್‌ಎಲ್ 5G ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Latest Videos

undefined

ಉತ್ತಮ ಕನೆಕ್ಟಿವಿಟಿಗಾಗಿ ಕಂಪನಿ 4G ನೆಟ್‌ವರ್ಕ್‌ಗಾಗಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿಯೇ ದೇಶದ ಎಲ್ಲಾ ನಗರಗಳಲ್ಲಿ 4G ಸೇವೆ ಆರಂಭಿಸಲಾಗುವುದು. ನೆಟ್‌ವರ್ಕ್ ಸ್ಥಾಪನೆಗಾಗಿ ಟಿಸಿಎಸ್ Tata Consultancy Services (TCS) ಸಾಥ್  ನೀಡುತ್ತಿದೆ. ಇದಕ್ಕಾಗಿ ಟಾಟಾ ಪ್ರತ್ಯೇಕ ಹೊಸ ಡೇಟಾ ಸೆಂಟರ್ ಸ್ಥಾಪಿಸಲಿದೆ ಎಂದು ಜ್ಯೋತರಾದಿತ್ಯ ಸಿಂಧಿಯಾ  ಮಾಹಿತಿ ನೀಡಿದ್ದಾರೆ. 2024ರ ದೀಪಾವಳಿಯೊಳಗೆ 75 ಸಾವಿರ 4G ನೆಟ್‌ವರ್ಕ್ ಟವರ್ ಅಳವಡಿಕೆ ಮಾಡಲಾಗುವುದು ಎಂದು ಬಿಎಸ್‌ಎನ್‌ಎಲ್ ಹೇಳಿಕೊಂಡಿತ್ತು. ಆದರೆ ಇದುವರೆಗೂ 25 ಸಾವಿರಕ್ಕೂ ಅಧಿಕ ಟವರ್‌ಗಳಲ್ಲಿ 4G ನೆಟ್‌ವರ್ಕ್ ಅಳವಡಿಸಲಾಗಿದೆ.

ಇದೀಗ ಟಾಟಾ ಸಂಸ್ಥೆ ಸಹ ಬಿಎಸ್‌ಎನ್‌ಎನ್ ಜೊತೆ ಕೈ ಜೋಡಿಸಿರುವ ಪರಿಣಾಮ 4G ನೆಟ್‌ವರ್ಕ್ ಅಳವಡಿಕೆ ಕಾರಣ ವೇಗ ಪಡೆದುಕೊಳ್ಳಲಿದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಟ್ಯಾರಿಫ್ ಏರಿಕೆಯಾದ ಜೂನ್ ತಿಂಗಳಲ್ಲಿ ಬಿಎಸ್ಎನ್ಎಲ್‌ಗೆ  10,000ದಷ್ಟು ಹೊಸ ಬಳಕೆದಾರರ ಆಗಮನವಾಗಿತ್ತು. ಜುಲೈನಲ್ಲಿ 66,321 ಮತ್ತು ಆಗಸ್ಟ್‌ ನಲ್ಲಿ 1,00,487 ಬಳಕೆದಾರರು ಬಿಎಸ್ಎನ್‌ಎಲ್ ಕುಟುಂಬವನ್ನು ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ. ಪೋರ್ಟ್‌ಬಿಲಿಟಿಯ ಎಂಎನ್‌ಪಿ ಮೂಲಕ ಜುಲೈನಲ್ಲಿ 25,755 ಮತ್ತು ಆಗಸ್ಟ್‌ನಲ್ಲಿ 44,886 ಬಳಕೆದಾರು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಬದಲಾಗಿದ್ದಾರೆ. 

click me!