ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಖಗೋಳ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇನ್ನೂ ಭೂಮಿಗೆ ಮರಳಲು ಹಲವು ತಿಂಗಳುಗಳು ಇವೆ. ಅದರ ನಡುವೆಯೇ ಅಲ್ಲಿಂದಲೇ ಇಬ್ಬರೂ ಸುದ್ದಿಗೋಷ್ಠಿ ಮಾಡಿ ಕೆಲವು ಮಾಹಿತಿ ನೀಡಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಖಗೋಳ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕುತೂಹಲದ ಮಾಹಿತಿಯೊಂದನ್ನು ಶೇರ್ ಮಾಡಿದ್ದಾರೆ. ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಠಿ ಮಾಡಿರುವ ಈ ಗಗನಯಾತ್ರಿಗಳು ಅಲ್ಲಿಂದಲೇ ಅದನ್ನು ನೇರಪ್ರಸಾರ ಮಾಡಿದ್ದಾರೆ. ಇದರಲ್ಲಿ ತಮ್ಮ ಜೀವನದ ಕೆಲವೊಂದು ಕುತೂಹಲದ ಮಾಹಿತಿಗಳನ್ನು ಇದರಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧ್ಯನಯಕ್ಕೆ ಹೋಗಿರುವ ಈ ಇಬ್ಬರು, ಕಳೆದ ಜೂನ್ 5ರಂದು ವಾಪಸಾಗಬೇಕಿತ್ತು. ಆದರೆ, ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿರೋ ಹಿನ್ನೆಲೆಯಲ್ಲಿ ಅವರು ಮುಂದಿನ ವರ್ಷ ವಾಪಸಾಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ. ಆದರೆ ಇದುವರೆಗೂ ಅವರು ಬದುಕಿರುವುದೇ ಕಷ್ಟ ಎನ್ನುವ ಬಗ್ಗೆ ವಾದಗಳೂ ಹುಟ್ಟಿಕೊಂಡಿವೆ.
ಇದರ ನಡುವೆಯೇ ಸುನೀತಾ, ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇದೀಗ ಸುದ್ದಿಗೋಷ್ಠಿ ಮಾಡುವ ಮೂಲಕ ಸುನೀತಾ ಮತ್ತು ಬುಚ್ ತಾವು ಅಲ್ಲಿ ಕ್ಷೇಮವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು ಇನ್ನೊಂದು ಇಂಟರೆಸ್ಟಿಂಗ್ ವಿಷಯವನ್ನು ಶೇರ್ ಮಾಡಿದ್ದಾರೆ. ಅದೇನೆಂದರೆ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಅಲ್ಲಿಂದಲೇ ಮತದಾನ ಮಾಡುವುದಾಗಿ ಹೇಳಿದ್ದಾರೆ. ಅಂದಹಾಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಅಂದು ಅಲ್ಲಿಂದಲೇ ಮತ ಚಲಾವಣೆ ಮಾಡುವುದಾಗಿ ಇವರಿಬ್ಬರೂ ಘೋಷಿಸಿದ್ದಾರೆ.
undefined
ಬಾಹ್ಯಾಕಾಶದ ಜೀವನ ಹೇಗಿರುತ್ತೆ? ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸುನೀತಾ ವಿವರಿಸಿರೋ ವಿಡಿಯೋ ವೈರಲ್
ಇವರಿಬ್ಬರೂ 2025ರ ಫೆಬ್ರವರಿಯಲ್ಲಿ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ನಾಸಾದ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್‌ನಲ್ಲಿ ಇತರ ಇಬ್ಬರು ಸಿಬ್ಬಂದಿ ಜೊತೆ ಭೂಮಿಗೆ ಮರಳಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಬಾಹ್ಯಾಕಾಶದಿಂದಲೇ ಮತ ಚಲಾಯಿಸುವುದು ಇದೇ ಮೊದಲಲ್ಲ. 1997 ರಿಂದ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮತ ಚಲಾಯಿಸುತ್ತಿದ್ದಾರೆ, ಟೆಕ್ಸಾಸ್ ಶಾಸಕಾಂಗದಲ್ಲಿ ನಾಸಾ ಉದ್ಯೋಗಿಗಳಿಗೆ ಬಾಹ್ಯಾಕಾಶದಿಂದ ಮತ ಚಲಾಯಿಸಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿಯಲ್ಲಿ ತಿಳಿಸಲಾಗಿದೆ.
ಆ ವರ್ಷ, ನಾಸಾ ಗಗನಯಾತ್ರಿ ಡೇವಿಡ್ ವುಲ್ಫ್ ಮೀರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಮತ ಚಲಾಯಿಸಿದ ಮೊದಲ ಅಮೆರಿಕನ್ ಎನಿಸಿಕೊಂಡರು. 2020 ರಲ್ಲಿ, ನಾಸಾ ಗಗನಯಾತ್ರಿ ಕೇಟ್ ರೂಬಿನ್ಸ್ ಐಎಸ್ಸ್ನಲ್ಲಿ ಬಾಹ್ಯಾಕಾಶದಿಂದ ಮತ ಚಲಾಯಿಸಿದ್ದರು. ಆದರೆ ಬಾಹ್ಯಾಕಾಶದಲ್ಲಿಯೇ ಎರಡು ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕೀರ್ತಿ ಸುನೀತಾ ಅವರಿಗೆ ಸಲ್ಲುತ್ತದೆ. ಇವರು ಮೊದಲ ಬಾರಿಗೆ ಅಂದರೆ ಡಿಸೆಂಬರ್ 2006 ರಿಂದ ಜೂನ್ 2007 ರವರೆಗೆ ಎಕ್ಸ್‌ಪೆಡಿಶನ್ 14/15 ರ ಸಮಯದಲ್ಲಿ ವಿಸ್ತೃತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆಗ ಅವರು ಫ್ಲೈಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಎರಡನೇ ಮಿಷನ್, ಎಕ್ಸ್‌ಪೆಡಿಶನ್ 32/33, ಜುಲೈನಿಂದ ನವೆಂಬರ್ 2012 ರವರೆಗೆ ನಡೆಯಿತು, ಈ ಸಮಯದಲ್ಲಿ ಅವರು ತಮ್ಮ ಜನ್ಮದಿನವನ್ನು ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಆಚರಿಸಿಕೊಂಡಿದ್ದರು, ಇದೀಗ ಎರಡನೆಯ ಬಾರಿ ಅನಿವಾರ್ಯ ಕಾರಣಗಳಿಂದಾಗಿ ಆಚರಿಸಿಕೊಳ್ಳುವಂತಾಗಿದೆ.
| astronauts Butch Wilmore and , who have seen their return to earth held by months due to technical problems with the Boeing Starliner, called the delay “testing times” but said they were grateful for more time on the International Space Station… pic.twitter.com/FvZOX3xx4T
— DD News (@DDNewslive)