ವಿಸ್ತರಣೆಯ ಹಾದಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಸ್ಟಾರ್ಟ್ಅಪ್ BosonQ Psi

By Suvarna NewsFirst Published Feb 2, 2023, 5:49 PM IST
Highlights

ದೇಶದ ಸ್ಟಾರ್ಟ್‌ಹಬ್‌ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಮತ್ತೊಂದು ಸ್ಟಾರ್ಟ್‌ಅಪ್‌ ಕಂಪನಿ ಸದ್ದು ಮಾಡುತ್ತಿದೆ. ಕ್ವಾಂಟಮ್‌ ಕಂಪ್ಯೂಟಿಂಗ್‌ ಬೋಸನ್‌ಕ್ಯೂ ಪಿಎಸ್‌ಐ, ವಿಶ್ವದ ಮೊದಲ ಕ್ವಾಂಟಮ್ ಚಾಲಿತ ಎಂಜಿನಿಯರಿಂಗ್ ಸಿಮ್ಯುಲೇಶನ್ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಬೆಂಗಳೂರು (ಫೆ.2): ವಿಶ್ವದ ಮೊದಲ ಕ್ವಾಂಟಮ್‌ ಚಾಲಿತ ಎಂಜಿನಿಯರಿಂಗ್‌ ಸಿಮ್ಯುಲೇಷನ್‌ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡುತ್ತಿರುವ ಬೆಂಗಳೂರು ಮೂಲದ ಕ್ವಾಂಟಮ್‌ ಕಂಪ್ಯೂಟಿಂಗ್‌ ಕಂಪನಿ ಬೋಸನ್‌ಕ್ಯೂ ಪಿಎಸ್‌ಐ ತನ್ನ ಕಂಪನಿಯನ್ನು ವಿಸ್ತರಣೆ ಮಾಡುವ ಹಾದಿಯಲ್ಲಿದೆ. ದೇಶದ ಉತ್ಸಾಹಿ ಎಂಜಿನಿಯರಿಂಗ್‌ ಪದವೀಧರರನ್ನು ತನ್  ತಂಡಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಘೋಷಣೆ ಮಾಡಿದೆ. ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಬೋಸನ್‌ಕ್ಯೂ ಪಿಎಸ್‌ಐ ಪ್ರಗತಿ ಕಂಡಿದ್ದು, ಈ ವರ್ಷವೂ ಕೂಡ ಇದೇ ಪ್ರಗತಿ ಮಟ್ಟವನ್ನು ಕಾಪಾಡಿಕೊಳ್ಳುವ ಗುರಿಯಲ್ಲಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿಕ್ಯುಪಿ, ಈ ವರ್ಷ ಅಮೆರಿಕ ಹಾಗೂ ಇಂಗ್ಲೆಂಡ್‌ನ ಕೆಂಬ್ರಿಡ್ಜ್‌ನಲ್ಲಿ ತನ್ನ ಕಚೇರಿಗಳನ್ನು ತೆರೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. 2020ರಲ್ಲಿ ಆರಂಭವಾಗಿದ್ದ ಕಂಪನಿ, ಕಳೆದ ಜುಲೈನಲ್ಲಿ ನಡೆದ 3 ಟು 1 ಕ್ಯಾಪಿಟಲ್‌ ನೇತೃತ್ವದ ಪ್ರೀ ಸೀಡ್‌ ಫಂಡ್‌ನಲ್ಲಿ 525, 000 ಡಾಲರ್‌ ಹಣ ಸಂಗ್ರಹ ಮಾಡಿತ್ತು. 'ಭಾರತ ಈಗಾಗಲೇ ಸೂಪರ್‌ ಕಂಪ್ಯೂಟರ್‌ ಕಾನ್ಸೆಪ್ಟ್‌ಅನ್ನು ಸ್ಕಿಪ್‌ ಮಾಡಿದೆ. ಆದರೆ, ಕ್ವಾಂಟಮ್‌ ಕಂಪ್ಯೂಟಿಂಗ್‌ ಬಗ್ಗೆ ಭಾರತ ಈಗಾಗಲೇ ಸಾಕಷ್ಟು ಆಸಕ್ತಿ ವಹಿಸಿದೆ. ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ವಲಯಗಳಲ್ಲಿ ಕ್ವಾಂಟಮ್‌ ಕಂಪ್ಯೂಟರ್‌ಅನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ನಾವು ಆಟೋಮೊಬೈಲ್‌, ಆಯಿಲ್‌ ಮತ್ತು ಗ್ಯಾಸ್‌ ಹಾಗೂ ಏರೋಸ್ಪೇಸ್‌ ವಲಯಗಳಲ್ಲಿ ಕಾರ್ಯನಿವರ್ಹಿಸಲು ಬಯಸಿದ್ದೇವೆ' ಎಂದು ಕಂಪನಿಯ ಸಂಸ್ಥಾಪಕ ಅಭಿಷೇಕ್‌ ಚೋಪ್ರಾ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಾಂಟಮ್‌ ಕಂಪ್ಯೂಟಿಂಗ್‌ ಅಟೋಮೊಬೈಲ್‌ ಕ್ಷೇತ್ರದಲ್ಲಿ ಖಂಡಿತವಾಗಿ ದೊಡ್ಡ ಬದಲಾವಣೆಯನ್ನು ತರಲಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಇತ್ತೀಚೆಗೆ ಕಾರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಿ, ಅದಕ್ಕೆ ಡೆಡ್‌ಲೈನ್‌ ಕೂಡ ಘೋಷಣೆ ಮಾಡಿದ್ದರು. ಆದರೆ, ಅಷ್ಟು ವೇಗವಾಗಿ ಈಗಿರುವ ಕಂಪ್ಯೂಟರ್‌ ವ್ಯವಸ್ಥೆಗಳಲ್ಲಿ ಬದಲಾವಣೆ ತರೋದು ಕಷ್ಟ. ಆದರೆ, ಕ್ವಾಂಟಮ್‌ ಕಂಪ್ಯೂಟಿಂಗ್‌ನಿಂದ 6 ತಿಂಗಳಲ್ಲಾಗುವ ಕೆಲಸವನ್ನು ಬರೀ 6 ನಿಮಿಷಗಳಲ್ಲಿ ಮಾಡಬಹುದು. ಸಿಮ್ಯುಲೇಶನ್‌ ಕೂಡ ಇದರಲ್ಲೇ ಪರೀಕ್ಷೆ ಮಾಡಬಹುದು. ಮುಂದಿನ ದಿನಗಳಲ್ಲಿ ಹವಾಮಾನ ಮುನ್ಸೂಚನೆ, ವಿಪತ್ತುಗಳ ಮುನ್ಸೂಚನೆ, ಡೀಪ್‌ ವಾಟರ್‌ನಲ್ಲಿ ಆಗುವ ಕೆಲಸಗಳಿಗೆ ಬೇಕಾದಂತೆ ಕ್ವಾಂಟಮ್‌ ಕಂಪ್ಯೂಟರ್‌ ಬಳಸಬಹುದು' ಎಂದು ಹೇಳಿದರು. 

BharOS: ಬಂದಿದೆ ಮೊಬೈಲ್‌ಗೆ ದೇಶಿ ಆಪರೇಟಿಂಗ್‌ ಸಿಸ್ಟಂ ‘ಭರೋಸ್‌’; ಆ್ಯಂಡ್ರಾಯ್ಡ್‌, ಐಒಎಸ್‌ಗೆ ಪರ್ಯಾಯ ವ್ಯವಸ್ಥೆ

ಈ ವರ್ಷ  ಹೊಸ ಉದ್ಯೋಗ ಸೃಷ್ಟಿ: ಬಿಕ್ಯುಪಿಯ ಮೂಲಸೌಕರ್ಯ ಹಾಗೂ ಬೆಳವಣಿಗೆ ವಿಭಾಗವನ್ನು ನೋಡಿಕೊಳ್ಳುವ ಆದಿತ್ಯ ಸಿಂಗ್‌, ಭವಿಷ್ಯದ ದಿನಗಳಲ್ಲಿ ನಾವು ತುಂಬಾ ದೊಡ್ಡ ಗುರಿಗಳನ್ನು ಇರಿಸಿಕೊಂಡಿದ್ದೇವೆ. ಈಗಾಗಲೇ ಸಾಕಷ್ಟು ಅನುಭವಿ ವೃತ್ತಿಪರರಾದ ಕಾರ್ತಿಗಣೇಶ್‌ ದೊರೈ ಹಾಗೂ ವಿಜಯ್‌ ವಿಶ್ವನಾಥನ್‌ ಅವರನ್ನು ಕಂಪನಿಗೆ ಸೇರಿಸಿಕೊಂಡಿದ್ದೇವೆ. ಪ್ರಸ್ತುತ ಕಂಪನಿಯಲ್ಲಿ 30 ಜನ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅನುಭವಿಗಳು. 2023ರಲ್ಲಿ ಇನ್ನೂ 50 ಮಂದಿ ಉತ್ಸಾಹಿ ಎಂಜಿನಿಯರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದೇವೆ. ಇತ್ತೀಚೆಗೆ ಯಶವಂತಪುರದ ಎನ್‌ಎಂಐಟಿಯಲ್ಲಿ ಕ್ವಾಂಟಮ್‌ ಕಂಪ್ಯೂಟಿಂಗ್‌ನ ಹ್ಯಾಕಥಾನ್‌ ಅನ್ನೂ ಆಯೋಜನೆ ಮಾಡಿದ್ದೆವು. ಉತ್ತಮ ಪ್ರತಿಕ್ರಿಯೆ ವ್ಯ್ತವಾಗಿತ್ತು. 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಹೇಳಿದರು.

ನೆಮೊ ಆ್ಯಪ್ ಬಿಡುಗಡೆ ಮಾಡಿದ ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ!

ಕಂಪನಿಯ ಟೆಕ್ನಿಕಲ್‌ ಹಾಗೂ ಮಾರ್ಕೆಟಿಂಗ್‌ ವಿಭಾಗದಲ್ಲಿ ಈಗಾಗಲೇ ಅನುಭವಿಗಳನ್ನು ಸೇರಿಸಿಕೊಳ್ಳಲಾಗಿದೆ. ಬಿಕ್ಯುಪಿಯ ಚೀಫ್‌ ಕ್ವಾಂಟಮ್‌ ಆರ್ಕಿಟೆಕ್ಟ್‌ ಆಗಿ ಕಾರ್ತಿಗಣೇಶ್‌ ದೊರೈ ಸೇರಿಕೊಂಡಿದ್ದಾರೆ.  ಕ್ವಾಂಟಮ್‌ ಚಾಲಿತ ಸಿಮ್ಯುಲೇಷನ್‌ ಸ್ಯೂಟ್‌ಅನ್ನು ನಿರ್ಮಾಣ ಮಾಡುವ ಜವಾಬ್ದಾರಿ ಇವರ ಮೇಲಿರುತ್ತದೆ. ಇನ್ನು ವಿಜಯ್‌ ವಿಶ್ವನಾಥನ್‌ ಕಂಪನಿಯ ಮಾರ್ಕೆಟಿಂಗ್‌ ಹಾಗೂ ಕಂಪನಿಯ ಬ್ರ್ಯಾಂಡ್‌ಅನ್ನು ಏರಿಸುವ ಜವಾಬ್ದಾರಿ ಹೊಂದಿರಲಿದ್ದಾರೆ ಎಂದು ತಿಳಿಸಿದರು. ಈ ವೇಳೆ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಹಾಗೂ ಸಿಟಿಒ ರುಥ್‌ ಲಿನ್ಸೆವಾಲಾ, ಕಂಪನಿಯ ಮೇಲೆ ಈಗಾಗಲೇ ಹೂಡಿಕೆ ಮಾಡಿರುವ ಅಭಯ್‌ ಟಂಡನ್‌ ಕೂಡ ಹಾಜರಿದ್ದರು. 

click me!