ಡಿಸೆಂಬರ್‌ನಲ್ಲಿ ಭಾರತದ 36.77 ಲಕ್ಷ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್!

By Suvarna NewsFirst Published Feb 2, 2023, 5:31 PM IST
Highlights

ಭಾರತದಲ್ಲಿ ಹಲವರ ವ್ಯಾಟ್ಸ್ಆ್ಯಪ್ ಮಹತ್ವದ ಹೆಜ್ಜೆ ಇಟ್ಟಿದೆ. ಹಲವರ ಖಾತೆಗಳು ಸ್ಥಗಿತಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಖಾತೆಗಳನ್ನು ವ್ಯಾಟ್ಸ್ಆ್ಯಪ್ ನಿಷೇಧಿಸಿದೆ. ಈ ಸಂಖ್ಯೆ ಬರೋಬ್ಬರಿ 36.77 ಲಕ್ಷ.
 

ನವದೆಹಲಿ(ಫೆ.02); ಬಳಕೆದಾರರ ದೂರು, ನಿಯಮ ಉಲ್ಲಂಘನೆ ಸೇರಿದಂತೆ ಕೆಲ ಕಾರಣಗಳಿಗೆ ವ್ಯಾಟ್ಸ್ಆ್ಯಪ್ ಬಳಕೆದಾರರ ಖಾತೆಗಳನ್ನು ನಿಷೇಧಿಸುವುದು ಹೊಸತೇನಲ್ಲ. ಆದರೆ ಈ ಬಾರಿ ಭಾರತದಲ್ಲಿ ವ್ಯಾಟ್ಸ್ಆ್ಯಪ್ ಕೇವಲ ಒಂದು ತಿಂಗಳಲ್ಲಿ ಬರೋಬ್ಬರಿ 36.77 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಿದೆ. 2022ರ ಡಿಸೆಂಬರ್ ತಿಂಗಳ 1ರಿಂದ 31ರ ವರೆಗೆ 3,66,77,000 ವ್ಯಾಟ್ಸ್ಆ್ಯಪ್ ಖಾತೆಗಳು ಬ್ಯಾನ್ ಆಗಿವೆ. 2021ರ ಐಟಿ ನಿಮಯದ ಪ್ರಕಾರ ವ್ಯಾಟ್ಸ್ಆ್ಯಪ್ ವರದಿ ಬಿಡುಗಡೆ ಮಾಡಿದ್ದು, ದೂರು, ಕ್ರಮ, ಪರಿಹಾರದ ಕುರಿತು ವಿವರಣೆ ನೀಡಿದೆ.

ಕಳೆದ ವರ್ಷ ಮಾರ್ಚ 1 ರಿಂದ ಮೂವರು ತಜ್ಞರನ್ನೊಳಗೊಂಡ ಸಮಿತಿ ಬಳಕೆದಾರರು ನೀಡಿದ ದೂರುಗಳನ್ನು ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಿದೆ.  ಕಳೆದ ವರ್ಷದಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರು ನಿಮಯ ಉಲ್ಲಂಘಿಸುವ ಅಥವಾ ಹಾನಿಯನ್ನುಂಟುಮಾಡುವ ಬಳಕೆದಾರರ ವಿರುದ್ಧ ದೂರು ನೀಡಲು ಟೂಲ್ಸ್ ಹಾಗೂ ಸಂಪನ್ಮೂಲಗಳನ್ನು ವಿನಿಯೋಗಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವ್ಯಾಟ್ಸ್ಆ್ಯಪ್ ಮೂಲಕ ಕಾನೂನುಬಾಹಿರ ಅಥವಾ ಬಳಕೆದಾರರಿಕೆ ಕಿರಿಕಿರಿಯನ್ನುಂಟು ಮಾಡಿದರೆ ನೋಟಿಸ್ ಇಲ್ಲದೆ ಖಾತೆ ಸ್ಥಗಿತಗೊಳ್ಳಲಿದೆ. 

ಗೌಪ್ಯತಾ ನೀತಿ ಒಪ್ಪದವರಿಗೂ ವಾಟ್ಸಾಪ್‌ ನಿರ್ಬಂಧಿಸಲ್ಲ ಎಂದು ಘೋಷಿಸಿ: ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ

ಡಿಸೆಂಬರ್ ತಿಂಗಳಲ್ಲಿ ವ್ಯಾಟ್ಸಾಪ್ ಬಳಕೆದಾರರು ಮನವಿ ಶೇಕಡಾ 70 ರಷ್ಟು ಹೆಚ್ಚಾಗಿದೆ. 1,607 ಬಳಕೆದಾರರು 1,459 ವ್ಯಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲು ಆಗ್ರಹಿಸಿದ್ದರು.  ನವೆಂಬರ್ ತಿಂಗಳಲ್ಲಿ ಮೂವರ ಸಮಿತಿಗೆ 946 ದೂರುಗಳು ಬಂದಿತ್ತು. ಈ ಪೈಕಿ ವ್ಯಾಟ್ಸ್ಆ್ಯಪ್ ಸಮಿತಿ ತನಿಖೆ ನಡೆಸಿ 166 ಮಂದಿ ದೂರುಗಳಿಗೆ ಸ್ಪಂದಿಸಿ ಕ್ರಮ ಕೈಗೊಂಡಿದೆ.

ಡಿಸೆಂಬರ್ 2022ರಲ್ಲಿ 36.77 ಖಾತೆಗಳನ್ನು ವ್ಯಾಟ್ಸ್ಆ್ಯಪ್ ನಿಷೇಧಿಸಿದೆ. ಇದರಲ್ಲಿ 9.9 ಲಕ್ಷ ಬಳಕೆದಾರರ ಖಾತೆಗಳನ್ನು ಮನವಿ ಅಥವ ದೂರು ಬರುವ ಮುನ್ನವೇ ವ್ಯಾಟ್ಸ್ಆ್ಯಪ್ ಕ್ರಮ ಕೈಗೊಂಡು ನಿಷೇಧ ಹೇರಿದೆ. 2021ರ ಐಟಿ ನಿಯಮದ ಪ್ರಕಾರ ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಡಿಜಿಟಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್, ಸಾಮಾಜಿಕ ಜಾಲತಾಣಗಳು ದೂರು ಸ್ವೀಕರಿಸುವ ಹಾಗೂ ಕ್ರಮಕ್ಕೆಸೂಚಿಸುವ ತಂಡವನ್ನು ರಚಿಸರಬೇಕು. ಈ ನಿಯಮದ ಬಳಿಕ ವ್ಯಾಟ್ಸ್ಆ್ಯಪ್‌ಗೆ ಪ್ರತಿ ತಿಂಗಳು ವರದಿ ಕಡ್ಡಾಯವಾಗಿ ಪ್ರಕಟಿಸಬೇಕು. ಬಂದಿರುವ ದೂರುಗಳು, ಕೈಗೊಂಡಿರುವ ಕ್ರಮಗಳು ಸೇರಿದಂತೆ ಸವಿಸ್ತಾರವಾದ ವರದಿನೀಡಬೇಕು. ಇದರಿಂದ ವ್ಯಾಟ್ಸ್ಆ್ಯಪ್ ವರದಿ ಪ್ರಕಟಿಸಿದೆ.

ಟ್ವಿಟರಲ್ಲಿ ಭಾರತದ ತಪ್ಪಾದ ಭೂಪಟ ಪೋಸ್ಟ್: ವಾಟ್ಸಾಪ್‌ಗೆ ಸಚಿವ ರಾಜೀವ್‌ ಎಚ್ಚರಿಕೆ

ಕೇಂದ್ರಕ್ಕೆ ನೀಡಿದ ಮುಚ್ಚಳಿಕೆಯ ಜಾಹೀರಾತು ನೀಡಿ: ವಾಟ್ಸಾಪ್‌ಗೆ ಸುಪ್ರೀಂ ಸೂಚನೆ
‘2021ರಲ್ಲಿ ಜಾರಿಗೆ ತಂದಿದ್ದ ‘ಖಾಸಗಿತನ ನೀತಿ’ ಒಪ್ಪದ ಬಳಕೆದಾರರ ಮೇಲೆ ನಿರ್ಬಂಧ ಹೇರಲ್ಲ’ ಎಂದು ಸರ್ಕಾರಕ್ಕೆ ಬರೆದುಕೊಟ್ಟಿದ್ದ ಮುಚ್ಚಳಿಕೆ ಪತ್ರವನ್ನು 5 ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಮೊಬೈಲ್‌ ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ಗೆ ಸುಪ್ರೀಂ ಕೋರ್ಚ್‌ ಸೂಚನೆ ನೀಡಿದೆ.

2 ವರ್ಷದ ಹಿಂದೆ ವಾಟ್ಸಾಪ್‌ ಖಾಸಗಿತನ ನೀತಿಯೊಂದನ್ನು ಜಾರಿಗೆ ತಂದಿತ್ತು. ಈ ನೀತಿಯ ಅನುಸಾರ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿನ ಫೋಟೋ, ಸಂಪರ್ಕಗಳು, ಬರಹಗಳನ್ನು ವಾಟ್ಸಾಪ್‌ ಹಾಗೂ ಅಂಗಸಂಸ್ಥೆ ಫೇಸ್‌ಬುಕ್‌ ಜತೆ ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಖಾತೆ ನಿಷ್ಕಿ್ರಯ ಮಾಡಲಾಗುವುದು ಎಂಬ ಷರತ್ತು ವಿಧಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಚ್‌ ಮೊರೆ ಹೋಗಿ, ಇದು ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆ ಎಂದಿದ್ದರು. ಬಳಿಕ ವ್ಯಾಪಕ ಜನವಿರೋಧದ ಕಾರಣ ತನ್ನ ಈ ನೀತಿಗೆ ತಡೆ ನೀಡಿ, ಬಳಕೆದಾರರ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಸರ್ಕಾರಕ್ಕೆ ಮುಚ್ಚಳಿಕೆ ನೀಡಿತ್ತು.

click me!