2020ರ ಮಾರ್ಚ್‌ನಿಂದ ಏರ್‌ಟೆಲ್‌ನ ಈ ಸೇವೆ ಬಂದ್| ಗ್ರಾಹಕರಿಗೆ ಶಾಕ್
ನವದೆಹಲಿ[ಆ.03]: ದೂರಸಂಪರ್ಕ ಕ್ಷೇತ್ರದ ದೈತ್ಯ ಸಂಸ್ಥೆ ಏರ್‌ಟೆಲ್ 2020ರ ಮಾರ್ಚ್‌ನಿಂದ ದೇಶಾದ್ಯಂತ ತನ್ನೆಲ್ಲಾ 3ಜಿ ನೆಟ್‌ವರ್ಕ್ ಸ್ಥಗಿತಗೊಳಿಸುವುದಾಗಿ ಶುಕ್ರವಾರ ಹೇಳಿದೆ.
ಫೈಬರ್ ಕೇಬಲ್ ಅಳವಡಿಕೆ ಮೂಲಕ ಸೌಲಭ್ಯದ ಗುಣಮಟ್ಟ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಇದರೊಂದಿಗೆ ಸರಾಸರಿ ಬಳಕೆದಾರರ ನಿರೀಕ್ಷಿತ ಗುಣಮಟ್ಟಹಾಗೂ ಕೈಗಾರಿಕೆಗಳ ದೂರಗಾಮಿ ಸಂಪರ್ಕದ ಕಾರ್ಯಸಾಧ್ಯತೆಯನ್ನೂ ತಲುಪಲು ಮುಂದಾಗಿದ್ದೇವೆ. ಈಗಾಗಲೇ 3ಜಿ ತರಂಗಾಂತರ ಸೇವೆ ಸ್ಥಗಿತ ಪ್ರಕ್ರಿಯೆ ಚಾಲನೆಯಲ್ಲಿದ್ದು, ಪ್ರಸ್ತುತ ನಮ್ಮಲ್ಲಿ 2ಜಿ ಮತ್ತು 4ಜಿ ತರಂಗಾಂತರ ಸೇವೆ ಮಾತ್ರ ಲಭ್ಯವಿರಲಿದೆ.
ಪ್ರಸ್ತುತ ಏರ್‌ಟೆಲ್ 8.4 ಕೋಟಿ 4ಜಿ ಗ್ರಾಹಕರನ್ನು ಹೊಂದಿದೆ.120 ಕೋಟಿ ಡಾಟಾ ಸೇವಾ ಗ್ರಾಹರಿದ್ದಾರೆ ಎಂದು ಭಾರತ ಮತ್ತು ದಕ್ಷಿಣ ಏಷ್ಯಾ ಸಿಇಒ ಗೋಪಾಲ ವಿಟ್ಟಲ್ ತಿಳಿಸಿದ್ದಾರೆ.