Better.com CEO Vishal Garg Apologises: ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ: ಕ್ಷಮೆಯಾಚಿಸಿದ ಸಿಇಓ!

By Suvarna NewsFirst Published Dec 9, 2021, 1:29 PM IST
Highlights

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ಕ್ಷಮೆಯಾಚಿಸಿದ Better.com CEO ವಿಶಾಲ್‌ ಗಾರ್ಗ್!‌

ನವದೆಹಲಿ(ಡಿ. 09):  ಇತ್ತಿಚೇಗೆ  ಬೆಟರ್‌ ಡಾಟ್‌ ಕಾಮ್‌ (Better.com) ಕಂಪನಿ ಸಿಇಓ ವಿಶಾಲ್‌ ಗಾರ್ಗ್ (Vishal Garg)  ಝೂಮ್ ಮೀಟಿಂಗ್‌ನಲ್ಲಿ 900 ಸಿಬ್ಬಂದಿಗಳನ್ನು ವಜಾಗೊಳಿಸಿದ್ದರು.  ವರ್ಷಾಂತ್ಯದ ಬೋನಸ್ ಮೀಟಿಂಗ್, ಇದು ಹೊಸ ವರ್ಷದಿಂದ ವೇತನ ಹೆಚ್ಚಳದ ಮೀಟಿಂಗ್, ಇದು ಕಂಪನಿಯ ಹೊಸ ಘೋಷಣೆಗಳ ಮೀಟಿಂಗ್ ಇರಬಹುದು ಅಂದುಕೊಂಂಡು  ಸಿಬ್ಬಂದಿಗಳು (Employees) ನಗು ಮುಖದಿಂದ ಝೂಮ್ ಮೀಟಿಂಗ್‌ಗೆ ಹಾಜರಾಗಿದ್ದರು. ಆದರೆ ಮೀಟಿಂಗ್‌ ಆರಂಭವಾಗುತ್ತಿದ್ದಂತೆಯೇ ಸಿಇಓ ಸಿಬ್ಬಂದಿಗಳಿಗೆ ಶಾಕ್‌ ನೀಡಿದ್ದರು. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪರ ವಿರೊಧದ ಚರ್ಚೆಗಳು ನಡೆದಿದ್ದವು. ಈ ಬೆನ್ನಲ್ಲೇ ಈಗ ಬೆಟರ್‌ ಡಾಟ್‌ ಕಾಮ್‌ ಸಿಇಓ ವಿಶಾಲ್‌ ಗಾರ್ಗ್‌ ಕ್ಷಮೆಯಾಚಿಸಿದ್ದಾರೆ (Apologises).

ಸಾಫ್ಟ್‌ಬ್ಯಾಂಕ್ (Soft Bank) ಬೆಂಬಲಿತ ಕಂಪನಿಯು ವೀಡಿಯೊ ಕರೆ (Video Call) ಮೂಲಕ ತನ್ನ ಸುಮಾರು 9 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದಾದ ನಂತರ ಸಿಇಓ ವಿಶಾಲ್ ಗಾರ್ಗ್  ತೀವ್ರ ಟೀಕೆಗೆ ಒಳಗಾಗಿದ್ದರು. "ವಜಾಗೊಳಿಸುವಿಕೆಯನ್ನು ತಿಳಿಸುವಲ್ಲಿ ನಾವು ಎಡವಿದ್ದು ಇದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮಾದವಾಗಿದೆ" ಎಂದು ಅವರು ಹೇಳುವ ಮೂಲಕ ಈಗ ಕ್ಷಮೆಯಾಚಿಸಿದ್ದಾರೆ. "ನಾನು ಈ ಸುದ್ದಿಯನ್ನು ತಿಳಿಸಲು  ಬಳಸಿದ ವಿಧಾನವು ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಗಾರ್ಗ್ ಮಂಗಳವಾರ (ಡಿ. 7) ಪತ್ರದ ಮೂಲಕ ತಿಳಿಸಿದ್ದಾರೆ.

ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ

ವಿಡಿಯೋ ಮೀಟಿಂಗ್‌ನಲ್ಲಿ, ನೀವು ಕೇಳ ಬಯಸಿದ ಸುದ್ದಿ ಇದಲ್ಲ. ನೀವೆಲ್ಲಾ ವಜಾಗೊಳಿಸುತ್ತಿರುವ ಸಿಬ್ಬಂದಿಗಳ ಗುಂಪಿನ ಭಾಗವಾಗಿದ್ದೀರಿ. ಈ ಕಂಪನಿ ಜೊತೆಗಿನ ನಿಮ್ಮ ಉದ್ಯೋಗ ಇಲ್ಲಿಗೆ ಅಂತ್ಯವಾಗುತ್ತಿದೆ ಎಂದು ಇಂಡೋ ಅಮೆರಿಕನ್ ಸಿಇಓ ವಿಶಾಲ್ ಗರ್ಗ್ ಝೂಮ್ ವಿಡಿಯೋ ಕಾಲ್‌ನಲ್ಲಿ ಹೇಳಿದ್ದರು. ಸಿಬ್ಬಂದಿಗಳನ್ನು ವಜಾಗೊಳಿಸಲು ಇದು ಸರಿಯಾದ ವಿಧಾನವಲ್ಲ ಎಂದು ಹಲವರು ಹೇಳಿದ್ದರು. ವಿಶಾಲ ಗಾರ್ಗ್‌ ಈ ನಡೆ ಭಾರೀ ಟಿಕೇಗೆ ಗುರಿಯಾಗಿತ್ತು.

ಲೇಟಾಗಿ ಊಟ ಆರ್ಡರ್ ಮಾಡಿ ಕ್ಷಮಿಸಿ ಎಂದ ವ್ಯಕ್ತಿ, ರೆಸ್ಟೋರೆಂಟ್‌ ಕಳುಹಿಸಿದ ಪ್ಯಾಕ್‌ನಲ್ಲಿತ್ತು ಅಚ್ಚರಿ!

3 ನಿಮಿಷದ ವಿಡಿಯೋ ಕಾಲ್‌ನಲ್ಲಿ 900 ಸಿಬ್ಬಂದಿಗಳು ಕಂಪನಿಯಿಂದ ಹೊರ ಹಾಕಲಾಗಿತ್ತು. ಇದಕ್ಕೆ ವಿಶಾಲ್ ಗರ್ಗ್ ಕಾರಣವನ್ನೂ ನೀಡಿದ್ದರು. ಈ ಉದ್ಯೋಗಿಗಳು ದಿನದಲ್ಲಿ ಗರಿಷ್ಠ 2 ಗಂಟೆ ಕೆಲಸ ಮಾಡಿಲ್ಲ. ಸಮರ್ಥವಾಗಿ ಕೆಲಸ ನಿರ್ವಹಿಸಲು ಅಸಾಧ್ಯರಾಗಿದ್ದಾರೆ. ಕಂಪನಿಯ ವೇತನ, ಇತರ ಸೌಲಭ್ಯ ಪಡೆದು ಕಂಪನಿಗೆ ಒಂದು ರೂಪಾಯಿ ಆದಾಯವನ್ನು ತಂದುಕೊಟ್ಟಿಲ್ಲ. ಹೀಗಾಗಿ ಕಂಪನಿ ಅಸಮರ್ಥ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದೆ ಎಂದಿದ್ದರು.

 

Vishal Garg: “I wish I didn’t have to lay off 900 of you over a zoom call but I’m gonna lay y’all off right before the holidays lmfaooo”pic.twitter.com/6bxPGTemEG

— litquidity (@litcapital)

 

ಕೊರೋನಾ ವೈರಸ್‌ನಿಂದ (Corona Virus) ಈಗಾಗಲೇ ಕಂಪನಿ ಆರ್ಥಿಕ ಹೊಡೆತ (Economic Blow) ಅನುಭವಿಸಿದೆ. ಎಲ್ಲಾ ಅಡೆ ತಡೆ ನಿವಾರಿಸಿಕೊಂಡು ಮುನ್ನಗ್ಗುತ್ತಿರುವ ಬೆಟ್ಟರ್ ಕಂಪನಿಗೆ ಉದ್ಯೋಗಿಗಳೇ ಹಿನ್ನಡೆ ತರುತ್ತಿದ್ದಾರೆ. ಹಲವರು ಕೊರೋನಾದಿಂದ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸಿಗಲು ಪರದಾಡುತ್ತಿದ್ದಾರೆ. 

ಆದರೆ ಇರುವ ಉದ್ಯೋಗವನ್ನು ಬೇಕಾಬಿಟ್ಟಿ ಮಾಡಿದರೆ ಯಾವ ಕಂಪನಿಯೂ ಸಹಿಸುವುದಿಲ್ಲ. ಸಂಕಷ್ಟ ಸಮಯದಲ್ಲಿ ಉತ್ತಮ ಕೆಲಸ ಮಾಡಿ ಕಂಪನಿ ಹಾಗೂ ಸಿಬ್ಬಂದಿಗಳ ಏಳಿಗೆಗೆ ಶ್ರಮವಹಿಸಬೇಕು. ಆದರೆ ವಜಾಗೊಳಿಸುವ ಸಿಬ್ಬಂದಿಗಳು ಹಾಗೇ ಮಾಡಲಿಲ್ಲ ಎಂದು ವಿಶಾಲ್ ಗರ್ಗ್ ಹೇಳಿದ್ದರು. ಸಿಬ್ಬಂದಿಗಳನ್ನು ವಜಾಗೊಳಿಸಲು ತಾವು ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಅರಿತ ಸಿಇಓ ವಿಶಾಲ್‌ ಗಾರ್ಗ್‌ ಈಗ ಕ್ಷಮೆ ಯಾಚಿಸಿದ್ದಾರೆ.

click me!