ರಾಯಲ್ ಎನ್ಫೀಲ್ಡ್ ಚಾರ್ಮ್ ಈಗ್ಯಾಕಿಲ್ಲ? 5 ಕಾರಣಗಳು..!

First Published Jun 20, 2018, 5:55 PM IST
Highlights

ರಾಯಲ್ ಎನ್ಫೀಲ್ಡ್ ಚಾರ್ಮ್ ಈಗ್ಯಾಕಿಲ್ಲ?

ಪ್ರತಿಷ್ಠೆಯ ಬುಲೆಟ್ ಆಗಿ ಉಳಿದಿಲ್ಲವೇಕೆ?

ತುಂಬ ಕಾಮನ್ ಬುಲೆಟ್ ಆಗಿ ಪರಿವರ್ತನೆ

ಇಂದಿನ ಯುವ ಪೀಳಿಗೆಗೆ ರಾಯಲ್ ಎನ್ಫೀಲ್ಡ್ ಸೇರಲ್ವಾ?
 

ಬೆಂಗಳೂರು(ಜೂ.20): ರಾಯಲ್ ಎನ್ಫೀಲ್ಡ್ ಬೈಕ್ ಹೊಂದುವುದು ಪ್ರತಿಯೊಬ್ಬರ ಕನಸು. ಕೇವಲ ಬುಲೆಟ್ ಅನ್ನೋ ಮಾತ್ರಕ್ಕೆ ಜನರಿಗೆ ಈ ಕ್ರೇಜ್ ಇಲ್ಲ. ಬದಲಿಗೆ ಎರಡನೇ ವಿಶ್ವಯುದ್ಧದಲ್ಲಿ ಶತ್ರು ಪಡೆಗಳಿಗೆ ದುಸ್ವಪ್ನದಂತೆ ಕಾಡಿದ ಮತ್ತು ಬ್ರಿಟನ್ ಸೈನಿಕರ ಪಾಲಿಗೆ ಗೆಳಯನಂತ ವಾಹನ ಎಂಬ ಕಾರಣಕ್ಕೆ ರಾಯಲ್ ಎನ್ಫೀಲ್ಡ್ ಇಂದಿಗೂ ತನ್ನ ಹೆಸರನ್ನು ಉಳಿಸಿಕೊಂಡಿದೆ.

ಮಿಲಿಟರಿ ಉಪಯೋಗಕ್ಕೆಂದು ತಯಾರಿಸಲಾದ ರಾಯಲ್ ಎನ್ಫೀಲ್ಡ್ ಬೈಕ್, ಇಂದಿನ ಯುವ ಪೀಳಿಗೆಯ ಫೆವರಿಟ್ ಡ್ರೀಮ್ ಬೈಕ್‌ಗಳಲ್ಲಿ ಒಂದು. ಅದರಲ್ಲೂ ಈ ಕಂಪನಿ ಭಾರತಕ್ಕೆ ಕಾಲಿಟ್ಟ ಬಳಿಕ ಇಲ್ಲಿನ ಯುವಕರ ಪ್ರತಿಷ್ಠೆಯ ಬೈಕ್ ಆಗಿ ಪರಿವರ್ತನೆಗೊಂಡಿತು.

ಆದರೆ ಇಂದಿನ ಆಧುನಿಕ ಭಾರತದಲ್ಲಿ ರಾಯಲ್ ಎನ್ಫೀಲ್ಡ್ ದಿನೇ ದಿನೇ ತನ್ನ ಈ ಹಿಂದಿನ ಚಾರ್ಮ್ ಕಳೆದುಕೊಳ್ಳುತ್ತಿದೆ. ರಾಯಲ್ ಎನ್ಫೀಲ್ಡ್ ಬುಲೆಟ್‌ಗಳು ಭಾರತಕ್ಕೆ ಲಗ್ಗೆ ಇಟ್ಟಾಗ ಇದ್ದ ಪರಿಸ್ಥತಿ ಈಗ ಇಲ್ಲ. ಈ ಬುಲೆಟ್ ಮೇಲೆ ಇಂದಿನ ಯುವ ಪೀಳಿಗೆ ಅಷ್ಟೊಂದು ವ್ಯಾಮೋಹ ಹೊಂದಿಲ್ಲ.

ಹೌದು, ಒಂದು ಕಾಲದ ಭಾರತದ ಡಾರ್ಲಿಂಗ್ ಆಫ್ ರೋಡ್ ಆಗಿದ್ದ ರಾಯಲ್ ಎನ್ಫೀಲ್ಡ್ ಈಗ ತನ್ನ ಹಿಂದಿನ ಪ್ರತಿಷ್ಠೆಯನ್ನು ಹುಡುಕುತ್ತಿದೆ. ಹಾಗಾದರೆ ರಾಯಲ್ ಎನ್ಫೀಲ್ಡ್ ತನ್ನ ಚಾರ್ಮ್ ಕಳೆದುಕೊಳ್ಳಲು ಪ್ರಮುಖ ೫ ಕಾರಣಗಳನ್ನು ನೋಡುವುದಾದರೆ..

1. ಪ್ರತಿಷ್ಠೆಯ ಬುಲೆಟ್ ಆಗಿ ಉಳಿದಿಲ್ಲ:
ಹೌದು ರಾಯಲ್ ಎನ್ಫೀಲ್ಡ್ ಭಾರತದ ಪ್ರತಿಷ್ಠೆಯ ಬೈಕ್ ಆಗಿ ಈಗ ಉಳಿದಿಲ್ಲ. ಒಂದು ಕಾಲದಲ್ಲಿ ಈ ಬುಲೆಟ್ ನ್ನು ಕೊಳ್ಳುವುದೆಂದರೆ ಭಾರೀ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅಂದಿನ ಭಾರತದ ಶ್ರೀಮಂತ ಮತ್ತು ಮಧ್ಯಮ ವರ್ಗದ ಜನ ಈ ಬುಲೆಟ್ ನ್ನು ತಮ್ಮದಾಗಿಸಿಕೊಳ್ಳಲು ನೀ ಮುಂದು ನಾ ಮುಂದು ಎಂದು ಪೈಪೋಟಿಗೆ ಬಿದ್ದಿದ್ದರು. ಆದರೆ ಸದ್ಯ ಮಾರುಕಟ್ಟೆಯಲ್ಲಿ ಅನೇಕ ವಿದೇಶಿ ಮತ್ತು ಸ್ವದೇಶಿ ಆಧುನಿಕ ಬೈಕ್ ಗಳು ಇರುವುದರಿಂದ ಇದರ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿದೆ.

2. ತುಂಬ ಕಾಮನ್ ಬುಲೆಟ್ ಆಗಿ ಪರಿವರ್ತನೆ:

ಈ ಮೊದಲು ರಾಯಲ್ ಎನ್ಫೀಲ್ಡ್ ಬೈಕ್ ಗಳು ತುಂಬ ವಿರಳವಾಗಿದ್ದವು. ಕಾರಣ ಕೇವಲ ಕೆಲವೇ ಕೆಲವು ಜನಕ್ಕೆ ಇದನ್ನು ಕೊಳ್ಳುವ ಸಾಮರ್ಥ್ಯ ಇತ್ತು. ಆದರೆ ಇದೀಗ ಭಾರತದ ಗಲ್ಲಿ ಗಲ್ಲಿಗಳಲ್ಲಿ ರಾಯಲ್ ಎನ್ಫೀಲ್ಡ್ ರಾರಾಜಿಸುತ್ತಿವೆ. ಭಾರತದ ರಸ್ತೆಗಳಲ್ಲಿ ಲೆಕ್ಕವಿಲ್ಲದಷ್ಟು ಬುಲೆಟ್ ಓಡುತ್ತಿವೆ. ಹೀಗಾಗಿ ಇಂದಿನ ಯುವ ಪೀಳಿಗೆಗೆ ಈ ಬೈಕ್ ಮೇಲೆ ವ್ಯಾಮೋಹ ಕಡಿಮೆಯಾಗಿದೆ.

3. ಮೊದಲಿನ ತಂತ್ರಜ್ಞಾನ ಇಲ್ಲದೇ ಇರುವುದು: 
ಹೌದು, ರಾಯಲ್ ಎನ್ಫೀಲ್ಡ್ ಇದೀಗ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಆದರೆ ಇದೇ ಸಂಸ್ಥೆ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಭಾರತದ ಬಹುತೇಕ ಬೈಕ್ ಉತ್ಪಾದನಾ ಕಂಪನಿಗಳು ಆಧುನಿಕ ತಂತ್ರಜ್ಞಾನದ ಸಹಾಯದಿಂದ ತರಹೇವಾರಿ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ತನ್ನದೇ ಆದ ವಿಶಿಷ್ಟ ತಂತ್ರಜ್ಞಾನ ಹೊಂದಿದ್ದ ರಾಯಲ್ ಎನ್ಫೀಲ್ಡ್ ಇತರ ಬೈಕ್‌ಗಳಂತೆ ಸಾಮಾನ್ಯವಾಗಿರುವುದು ಯುವಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

4. ಹ್ಯಾಂಡ್ ಮೇಡ್ ಬೈಕ್ ಆಗಿ ಉಳಿದಿಲ್ಲ:
ರಾಯಲ್ ಎನ್ಫೀಲ್ಡ್ ಬೈಕ್ ನ ವಿಶೇಷತೆ ಎಂದರೆ ಇದರ ಪ್ರತಿಯೊಂದು ಬಿಡಿ ಭಾಗಗಳನ್ನೂ ಉತ್ಪಾದನಾ ಘಟಕದಲ್ಲಿ ಕಾರ್ಮಿಕರು ಕೈಯಿಂದ ಜೋಡಿಸುತ್ತಿದ್ದರು. ಆದರೆ ಈಗಿನ ಬೈಕ್ ಗಳು ಯಂತ್ರಗಳ ಸಹಾಯದೊಂದಿಗೆ ಅಸಂಬಲ್ ಆಗುವುದರಿಂದ ಬೇರೆ ಬೈಕ್‌ಗಳಿಗೂ ಮತ್ತು ಇದಕ್ಕೂ ವ್ಯತ್ಯಾಸ ಕಾಣುತ್ತಿಲ್ಲ.

5. ಹೈವೆ, ಲಾಂಗ್ ರೈಡ್ ಬೈಕ್ ಎಂಬ ಖ್ಯಾತಿ ಈಗಿಲ್ಲ:
ಈ ಮೊದಲು ಕಾಲೇಜು ಯುವಕ, ಯುವತಿಯರ ಫೆವರಿಟ್ ಬೈಕ್ ಆಗಿತ್ತು ರಾಯಲ್ ಎನ್ಫೀಲ್ಡ್. ಕಾರಣ ಲಾಂಗ್ ರೈಡ್ ಮತ್ತಉ ಹೈವೆಗಳಲ್ಲಿ ಇದರ ಕಾರ್ಯಕ್ಷಮತೆ ಕಂಡು ಮೆಚ್ಚದವರಿಲ್ಲ. ಆದರೆ ಇಂದಿನ ಮಾರುಕಟ್ಟೆಯಲ್ಲಿ ವಿವಿಧ ಸಿಸಿ ಸಾಮರ್ಥ್ಯವುಳ್ಳ ಆಧುನಿಕ ಬೈಕ್ ಗಳು ರಾರಾಜಿಸುತ್ತಿದ್ದು, ರಾಯಲ್ ಎನ್ಫೀಲ್ಡ್ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆ.
 

click me!