ಬೆಂಗಳೂರು (ಫೆ.11): ಸ್ಮಾರ್ಟ್‌ಪೋನ್‌ಗಳು ಹೇಗೆ ಜನಜೀವನದ ಅವಿಭಾಜ್ಯ ಅಂಗವಾಗಿದೆಯೋ, ಪವರ್‌ಬ್ಯಾಂಕ್‌ಗಳು ಕೂಡಾ ಸ್ಮಾರ್ಟ್‌ಫೋನ್‌ಗಳ ಅವಿಭಾಜ್ಯ ಅಂಗವಾಗಿದೆ.
ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಫೋನ್‌ಗಳು ಹೆಚ್ಚು ಸಾಮರ್ಥ್ಯದ ಬ್ಯಾಟರಿಗಳನ್ನು ಹೊಂದಿರುತ್ತವೆ, ಆದರೆ ಬಳಕೆಯೂ ಕೂಡಾ ಹೆಚ್ಚಾಗಿರುವುದರಿಂದ ಚಾರ್ಜ್ ಬೇಗ ಮುಗಿಯೋದು ಸಾಮಾನ್ಯ.
undefined
ಇದನ್ನೂ ಓದಿ | ಗೂಗಲ್ ಕಿವಿಗೆ ಹೂವಿಟ್ಟ ಕಲಾವಿದ, ನಕಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ!
ಪ್ರತಿ ಬಾರಿ ಪ್ಲಗ್ ಪಾಯಿಂಟ್ ಎಲ್ಲಿದೆ, ಪ್ಲಗ್ ಫ್ರೀ ಇದೆಯಾ ಅಂತಾ ಹುಡುಕೋದು ಕಿರಿಕಿರಿ ಕೆಲ್ಸ. ಪವರ್ ಬ್ಯಾಂಕ್ ಇದ್ರೆ ಟೆನ್ಶನ್ ಇಲ್ಲ. ಹಾಗಾಗಿ ಈಗ ಬಹಳಷ್ಟು ಮಾದರಿಯ ಪವರ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಲಭ್ಯವಿದೆ ಸರಿ, ಅದರೆ ನಿಮ್ಮ ಫೋನ್‌ಗೆ ಸರಿಯಾಗಿದೆಯಾ? ಭಾರ ಹೆಚ್ಚಾಗಿದ್ರೆ ಅದನ್ನು ಹೊತ್ಕೊಂಡು ಓಡಾಡೋದು ಹೇಗೆ? ದಪ್ಪಗಿದ್ರೆ ಅದನ್ನ ಎಲ್ಲಿ ಇಡೋದು? ಎಂಬೋದು ಪವರ್‌ಬ್ಯಾಂಕ್ ಬಳಸುವವರ ಸಾಮಾನ್ಯ ಚಿಂತೆ.
ಈಗ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಶ್ಯೋಮಿ ಹೊಸ ಪವರ್‌ಬ್ಯಾಕೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ | ಇಸ್ರೋನಿಂದ ಗಗನಯಾನ್; ವ್ಯೋಮ್ ಮಿತ್ರ ಜೊತೆ ಸುವರ್ಣನ್ಯೂಸ್ ರೌಂಡ್
Mi Powebank 2i ಎಂಬ 10000 mAh ಸಾಮರ್ಥ್ಯದ ಈ ಪವರ್‌ಬ್ಯಾಂಕ್ ಡ್ಯುಯಲ್ ಯುಎಸ್‌ಬಿ ಪೋರ್ಟ್ ಹೊಂದಿದೆ. 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರೋ ಈ ಪವರ್‌ಬ್ಯಾಂಕ್ ಅಲ್ಟ್ರಾಸ್ಲಿಮ್ ಆಗಿದ್ದು, ಕೈಯಲ್ಲಿ ಸುಲಭವಾಗಿ ಹಿಡಿಯಬಹುದು ಎಂದು ಕಂಪನಿಯ ವಾದ.
ಅತೀಯಾದ ಉಷ್ಣತೆ, ಶಾರ್ಟ್ ಸರ್ಕ್ಯೂಟ್, ಓವರ್ ಚಾರ್ಜಿಂಗ್ ಹೀಗೆ 9 ಸ್ತರದ ಪ್ರೊಟೆಕ್ಷನ್ ಈ ಪವರ್‌ಬ್ಯಾಂಕ್‌ನಲ್ಲಿದೆ ಎಂದು ಕಂಪನಿ ಹೇಳಿದೆ.
14.64 ಸೆಂ.ಮೀ ಉದ್ದ, 7.39 ಸೆಂ. ಮೀ ಅಗಲ, ಮತ್ತು 1.53 ಸೆಂ.ಮೀ ದಪ್ಪ ಇರೋ ಈ ಪವರ್ ಬ್ಯಾಂಕ್ ಕಪ್ಪು, ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ. ಎಂ.ಆರ್.ಪಿ 1199 ಆದರೆ ರಿಯಾಯಿತಿ ಬಳಿಕ 899 ರೂ. ಗೆ ಲಭ್ಯವಿದೆ.