ಉತ್ತರಾಧಿಕಾರಿಗಳ ಸೃಷ್ಟಿ ಮಾಡಿಕೊಳ್ತಿವೆ AI ಟೂಲ್ಸ್‌! ಟೆಕ್‌ ಇತಿಹಾಸದಲ್ಲೇ ಬಹುದೊಡ್ಡ ಬೆಳವಣಿಗೆ

Published : Jun 06, 2026, 08:26 AM IST
Artificial Intelligence

ಸಾರಾಂಶ

ಆ್ಯಂಥ್ರೋಪಿಕ್‌ ಕಂಪನಿಯ ಕ್ಲಾಡ್‌ನಂತಹ ಎಐ ಟೂಲ್‌ಗಳು ತಮ್ಮ ಉತ್ತರಾಧಿಕಾರಿಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿವೆ. ಈ ಸ್ವ-ಸುಧಾರಣಾ ತಂತ್ರಜ್ಞಾನವು ಮಾನವನ ಉದ್ಯೋಗಗಳಿಗೆ ಕುತ್ತು ತರಬಹುದೆಂಬ ಆತಂಕವನ್ನು ಹುಟ್ಟುಹಾಕಿದ್ದು, ಎಐ ಬೆಳವಣಿಗೆಗೆ ತಾತ್ಕಾಲಿಕ ತಡೆ ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ವಾಷಿಂಗ್ಟನ್‌: ‘ಕೃತಕ ಬುದ್ಧಿಮತ್ತೆ (ಎಐ) ಟೂಲ್‌ಗಳು ಸ್ವ ಸುಧಾರಣೆಯನ್ನು ಕಲಿತುಬಿಟ್ಟರೆ ಅದರಿಂದ ಮಾನವರ ಕೆಲಸಕ್ಕೆ ಕುತ್ತು ಬರುವುದು ತಪ್ಪಿದ್ದಲ್ಲ’ ಎಂದು ಕ್ಲಾಡ್‌ನಂತಹ ಚಾಣಾಕ್ಷ ಎಐಗಳನ್ನು ಅಭಿವೃದ್ಧಿಪಡಿಸಿರುವ ಆ್ಯಂಥ್ರೋಪಿಕ್‌ ಕಂಪನಿ ಎಚ್ಚರಿಸಿದೆ.

ಮೇ ತಿಂಗಳಲ್ಲಿ, ಸಾಫ್ಟ್‌ವೇರ್‌ಗಳನ್ನು ನಿರ್ಮಿಸಿ, ಪರೀಕ್ಷಿಸಿ, ನಿರ್ವಹಿಸಿಸಲು ಅಗತ್ಯವಾದ ತನ್ನ ಕೋಡ್‌ಬೇಸ್‌ಗೆ ಮರ್ಜ್‌ ಮಾಡಲಾದ ಶೇ.80ರಷ್ಟು ಕೋಡ್‌ಗಳನ್ನು ಕ್ಲಾಡ್‌ ಎಐ ಕೈಯ್ಯಿಂದಲೇ ಬರೆಸಿಕೊಳ್ಳಲಾಗಿತ್ತು ಎಂಬ ವಿಷಯವನ್ನು ಆ್ಯಂಥ್ರೋಪಿಕ್‌ ಶುಕ್ರವಾರ ಬಹಿರಂಗಪಡಿಸಿದೆ.

ಟೆಕ್‌ ಇತಿಹಾಸದಲ್ಲೇ ಬಹುದೊಡ್ಡ ಬೆಳವಣಿಗೆ

ಈ ಬಗ್ಗೆ ವಿಶ್ಲೇಷಣೆ ಮಾಡಿರುವ ಅದು, ‘ಮಾನವನ ಅಗತ್ಯವೇ ಇಲ್ಲದೆ ಎಐಗಳು ಇನ್ನೊಂದು ಎಐ ಅನ್ನು ಅಭಿವೃದ್ಧಿಪಡಿಸಲು ಶಕ್ತವಾಗಿದೆ. ಅವುಗಳು ತಮ್ಮ ಉತ್ತರಾಧಿಕಾರಿಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತವೆ. ಇದು ಟೆಕ್‌ ಇತಿಹಾಸದಲ್ಲೇ ಬಹುದೊಡ್ಡ ಬೆಳವಣಿಗೆಯಾಗಿದೆ. ಇದರಿಂದ ವಿಜ್ಞಾನ, ಆರೋಗ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಬಹುದು’ ಎಂದಿದೆ.

ಇದರ ಜತೆಗೆ, ‘ಎಐಗಳ ಸ್ವ ಉನ್ನತಿ ಸಾಮರ್ಥ್ಯವು ವೃದ್ಧಿಸುತ್ತಿದ್ದಂತೆ ಅವುಗಳನ್ನು ನೋಡಿಕೊಳ್ಳುವ, ವರ್ತನೆಯನ್ನು ನಿರ್ವಹಿಸುವ ಜವಾಬ್ದಾರಿಗಳು ಹೆಚ್ಚುತ್ತವೆ’ ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಅಮೆರಿಕಾದ ಕಾನೂನು ಸವಾಲುಗಳನ್ನು ಗೆದ್ದ ಅದಾನಿ , ಎಐ ಕ್ರಾಂತಿ ಹಾಗೂ ಜಾಗತಿಕ ಮೂಲಸೌಕರ್ಯ ವಿಸ್ತರಣೆಗೆ ಭರ್ಜರಿ ಯೋಜನೆ

ಎಐಗೆ ಬ್ರೇಕ್‌?:

ಅತ್ಯಾಧುನಿಕ ಎಐ ಬೆಳವಣಿಗೆಗೆ ತಾತ್ಕಾಲಿಕವಾಗಿಯಾದರೂ ತಡೆ ಒಡ್ಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ಆ್ಯಂಥ್ರೋಪಿಕ್‌, ‘ಹೀಗೆಂದು ಎಲ್ಲಾ ಎಐ ಕಂಪನಿಗಳ ಸ್ಥಾಪಕರ ಮನವೊಲಿಸುವುದು ಕಷ್ಟ. ನಾವು ಅವುಗಳ ಅಭಿವೃದ್ಧಿ ನಿಲ್ಲಿಸಿದಾಗ ಇನ್ನುಳಿದವರು ಹಾಗೆ ಮಾಡದಿದ್ದರೆ, ನಾವು ಅವಕಾಶ ಕೈಚೆಲ್ಲಿದಂತಾಗುತ್ತದೆ’ ಎಂದಿದೆ.

ಆದರೂ, ಮುಂಬರುವ ತಿಂಗಳುಗಳಲ್ಲಿ ಎಐ ಬೆಳವಣಿಗೆಗೆ ಕಡಿವಾಣ ಹಾಕುವ ಹಾಗೂ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುಬ ನಿಟ್ಟಿನಲ್ಲಿ ಸಭೆಗಳನ್ನು ನಡೆಸುವ ಉದ್ದೇಶವನ್ನು ಕಂಪನಿ ಹೊಂದಿದೆ.

ಇದನ್ನೂ ಓದಿ: ಭವಿಷ್ಯದ ಎಐ ತಜ್ಞರನ್ನು ರೂಪಿಸಲು ಮುಂದಾದ ಕಾಗ್ನಿಜೆಂಟ್, ಯುವ ಎಂಜಿನಿಯರ್‌ಗಳಿಗೆ ಬಂಪರ್ ಅವಕಾಶ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ರಾತ್ರಿ ಫೋನ್ ಬಳಸುತ್ತೀರಾ? ಈ ಸೆಟ್ಟಿಂಗ್ ಆನ್ ಮಾಡಿ, ಕಣ್ಣು ಸೇಫ್ ಆಗಿರುತ್ತೆ!
ವಾಟ್ಸಾಪ್‌ನಲ್ಲಿ ಭರ್ಜರಿ ಸೆಕ್ಯೂರಿಟಿ ಫೀಚರ್: ಇನ್ಮುಂದೆ ಮೆಸೇಜ್ ಓದಿದ ತಕ್ಷಣ ತಾನಾಗಿಯೇ ಡಿಲೀಟ್!