ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸ್ಮಾರ್ಟ್‌ಫೋನ್‌ಗಳಿಗೆ ಆ್ಯಪಲ್ ಜಗತ್ಪ್ರಸಿದ್ಧ ಕಂಪನಿ; ಬೆಂಗಳೂರಿನಲ್ಲಿ ತಯಾರಿಕಾ ಘಟಕ ಆರಂಭಿಸಿರುವ ದಿಗ್ಗಜ ಮೊಬೈಲ್ ಕಂಪನಿ
ಭಾರತದಲ್ಲಿ ‘ಆ್ಯಪಲ್’ ಅಂದರೆ ಈವೆರೆಗೆ ಕಾಶ್ಮೀರ ಚಿತ್ರ ಕಣ್ಣಿನ ಮುಂದೆ ಬರುತಿತ್ತು. ಇನ್ಮುಂದೆ ಹೊಸ ಪೀಳಿಗೆಗೆ ‘ಆ್ಯಪಲ್’ ಅಂದ್ರೆ ಮೊದಲು ಬೆಂಗಳೂರು ನೆನಪಾಗುವ ದಿನ ದೂರವಿಲ್ಲ!
ಹೌದು, ಬೆಂಗಳೂರಿನ ಹೊರವಲಯದಲ್ಲಿರುವ ಆ್ಯಪಲ್‌ನ ಉತ್ಪಾದನಾ ಘಟಕದಲ್ಲಿ ಸ್ಮಾರ್ಟ್ ಫೋನ್ ತಯಾರು ಮಾಡುವ ಕೆಲಸ ಆರಂಭವಾಗಿದೆ. iPhone SE ಹಾಗೂ iPhone 6s ಜೊತೆಗೆ ಆ್ಯಪಲ್ ಇದೀಗ iPhone 7ನ್ನು ಉತ್ಪಾದಿಸುವ ಮೂಲಕ Make in Indiaದತ್ತ ಇನ್ನೊಂದು ಹೆಜ್ಜೆ ಹಾಕಿದೆ.
undefined
ಇದನ್ನೂ ಓದಿ: Whatsapp ಹೊಸ ಫೀಚರ್: ಇನ್ನು ತಲೆ ನೋವಿಲ್ಲ, ಗ್ರೂಪ್‌ಗೆ ಸೇರಲು 3 ಆಪ್ಷನ್!
ಭಾರತೀಯ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು, ನಾವು ಬೆಂಗಳೂರಿನಲ್ಲಿ iPhone 7 ತಯಾರಿಸುತ್ತಿದ್ದೇವೆ ಎಂದು Apple ಹೇಳಿದೆ.ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯು ಆ್ಯಪಲ್‌ಗಾಗಿ iPhone SE ಹಾಗೂ iPhone 6s ಮೊಬೈಲ್ ಸಿದ್ಧಪಡಿಸುತ್ತಿದೆ. ಈಗ ಅದೇ ಕಂಪನಿ iPhone 7ನ್ನು ಕಳೆದ ಮಾರ್ಚಿನಿಂದ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದೆ.
ಬೆಂಗಳೂರು ಬಳಿ, ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೈವಾನಿನ ವಿಸ್ಟ್ರಾನ್ ಟೆಕ್ನಾಲಜಿ ಕಂಪನಿ ಐಪೋನ್ ತಯಾರಿಸುವ ಘಟಕ ಸ್ಥಾಪಿಸಿದೆ.