ಭಾರತದಲ್ಲಿ ಐ-ಪ್ಯಾಡ್‌ ಉತ್ಪಾದನೆ : ಟೆಲಿಕಾಂ ಹಬ್‌ಗೆ ಆ್ಯಪಲ್‌ ಸಾಥ್‌

By Kannadaprabha News  |  First Published Feb 19, 2021, 9:33 AM IST

ಕೇಂದ್ರ ಸರ್ಕಾರ ಪ್ರೋತ್ಸಾಹಕಗಳನ್ನು ಘೋಷಿಸಿದದ ಬೆನ್ನಲ್ಲೇ, ಭಾರತದಲ್ಲೇ ಐಪ್ಯಾಡ್‌ ಉತ್ಪಾದನೆಗೆ ಆ್ಯಪಲ್‌ ಕಂಪನಿ ಮುಂದಾಗಿದೆ. 


ನವದೆಹಲಿ (ಫೆ.19): ಟೆಲಿಕಾಂ ಉತ್ಪನ್ನಗಳನ್ನು ದೇಶೀಯವಾಗಿಯೇ ತಯಾರಿಸುವುದಕ್ಕೆ ಕೇಂದ್ರ ಸರ್ಕಾರ ಪ್ರೋತ್ಸಾಹಕಗಳನ್ನು ಘೋಷಿಸಿದದ ಬೆನ್ನಲ್ಲೇ, ಭಾರತದಲ್ಲೇ ಐಪ್ಯಾಡ್‌ ಉತ್ಪಾದನೆಗೆ ಆ್ಯಪಲ್‌ ಕಂಪನಿ ಮುಂದಾಗಿದೆ. 

ತನ್ಮೂಲಕ ಭಾರತವನ್ನು ಜಾಗತಿಕ ಟೆಲಿಕಾಂ ಉತ್ಪನ್ನಗಳ ತಯಾರಿಕಾ ತಾಣವಾಗಿ ರೂಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಪಾಲುದಾರನಾಗಲು ಅಮೆರಿಕದ ಆ್ಯಪಲ್‌ ಕಂಪನಿ ನಿರ್ಧರಿಸಿದೆ. 

Tap to resize

Latest Videos

undefined

ಲೆನೆವೋ ಟ್ಯಾಬ್ ಪಿ11 ಪ್ರೊ ಟ್ಯಾಬ್ಲೆಟ್ ಬಿಡುಗಡೆ, ಭರಪೂರ ಫೀಚರ್‌ಗಳು ..

ಈ ಹಿಂದಿನಿಂದಲೂ ತನ್ನ ಉತ್ಪನ್ನಗಳ ತಯಾರಿಕೆಗೆ ಚೀನಾ ಅವಲಂಬನೆಯನ್ನು ಸೀಮಿತಗೊಳಿಸುತ್ತಿರುವ ಆ್ಯಪಲ್‌ ಸಂಸ್ಥೆ ಭಾರತದಲ್ಲೇ ಹೆಚ್ಚು ಐಫೋನ್‌ಗಳನ್ನು ಉತ್ಪಾದಿಸುತ್ತಿದೆ. ಇದೀಗ ಇದೇ ವರ್ಷಾಂತ್ಯದ ವೇಳೆ ಐ-ಪ್ಯಾಡ್‌ ಉತ್ಪಾದನೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

click me!