Amazon Savings Days: Xiaomi, OnePlus ಸ್ಮಾರ್ಟ್‌ಫೋನ್‌ ಮೇಲೆ ರೂ 5000 ವರೆಗೆ ರಿಯಾಯಿತಿ!

By Suvarna News  |  First Published Jan 8, 2022, 10:29 PM IST

ಸಿಟಿ ಬ್ಯಾಂಕ್ ಕಾರ್ಡ್ ಬಳಸುವ Amazon ಗ್ರಾಹಕರು  1,000 ರೂ.ವರೆಗೆ 10 ಪ್ರತಿಶತ   ರಿಯಾಯಿತಿಯನ್ನು ಪಡೆಯಬಹುದು. 


Tech Desk: ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್ ಭಾರತದಲ್ಲಿ ಶುಕ್ರವಾರ, ಜನವರಿ 7 ರಂದು ಪ್ರಾರಂಭವಾಗಿದೆ. ಈ ಬಂಪರ್‌ ಸೇಲ್‌ನಲ್ಲಿ OnePlus Nord 2 5G, Samsung Galaxy S20 FE 5G, ಮತ್ತು Redmi Note 10S ಸೇರಿದಂತೆ ಹಲವು ಮಾದರಿಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ನೀಡುತ್ತಿದೆ. ನಾಲ್ಕು ದಿನಗಳ ಮಾರಾಟವು ಜನವರಿ 10 ರವರೆಗೆ ಇರುತ್ತದೆ, Samsung Galaxy M52 5G, OnePlus 9 ಮತ್ತು OnePlus 9R ನ ರಿಯಾಯಿತಿ ದರದಲ್ಲಿ ಲಭ್ಯವಿವೆ. Xiaomi 11 Lite NE 5G ಸೇರಿದಂತೆ ಫೋನ್‌ಗಳಲ್ಲಿ ಹೆಚ್ಚುವರಿ ವಿನಿಮಯ ರಿಯಾಯಿತಿಗಳನ್ನು ಅಮೆಝಾನ್‌ ನೀಡುತ್ತಿದೆ. ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಅಮೆಜಾನ್ ಸೇಲ್ ವಿವಿಧ ಸ್ಮಾರ್ಟ್ ಟಿವಿಗಳಲ್ಲಿ ಬ್ಯಾಂಕ್ ರಿಯಾಯಿತಿಗಳನ್ನು ನೀಡುತ್ತಿದೆ.

ಸಿಟಿ ಬ್ಯಾಂಕ್ ಕಾರ್ಡ್ ಬಳಸುವ Amazon ಗ್ರಾಹಕರು  1,000 ರೂ.ವರೆಗೆ 10 ಪ್ರತಿಶತ   ರಿಯಾಯಿತಿಯನ್ನು ಪಡೆಯಬಹುದು. ಅಮೆಝಾನ್‌ನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟದ ಅಡಿಯಲ್ಲಿ ನಿರ್ದಿಷ್ಟ ಸ್ಮಾರ್ಟ್‌ಫೋನ್ ಅಥವಾ ಟಿವಿಯನ್ನು ಖರೀದಿಸುವಾಗ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ  ರೂ. 1,250 ವರೆಗಿನ  ರಿಯಾಯಿತಿ ನೀಡುತ್ತಿದೆ.

Latest Videos

undefined

ಸಿಟಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ತ್ವರಿತ ರಿಯಾಯಿತಿ!

Amazon ನಲ್ಲಿ ಮೀಸಲಾದ ಮೊಬೈಲ್‌ಗಳ ವಿಭಾಗದ ಪಟ್ಟಿಯ ಪ್ರಕಾರ, ಈ ಸೇಲ್‌ನಲ್ಲಿ Redmi 9A ಸ್ಪೋರ್ಟ್ ಅನ್ನು ಸಿಟಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ತ್ವರಿತ ರಿಯಾಯಿತಿಯ  ಜತೆಗೆ ಪರಿಣಾಮಕಾರಿ ಬೆಲೆ ರೂ. 6,479 ನಲ್ಲಿ ಪಡೆಯಬಹುದು. ಈ ಫೋನ್ ಸಾಮಾನ್ಯವಾಗಿ ಬೆಲೆ ರೂ. 7,199ನಲ್ಲಿ ಲಭ್ಯವಿದೆ. Redmi Note 10S ಅನ್ನು ಸಹ ರೂ. 16,249  ಬೆಲೆಯಲ್ಲಿ ಖರೀದಿಸಬಹುದು. ಇದರ ಸಾಮಾನ್ಯ ಬೆಲೆ ರೂ. 17,499 ಆಗಿದೆ. 

ಇದನ್ನೂ ಓದಿ: Work From Homeಗೆ ಇಲ್ಲಿವೆ ಉತ್ತಮ ಬ್ರಾಡ್‌ಬ್ಯಾಂಡ್ ಯೋಜನೆಗಳು: 300mbps‌ ವರೆಗಿನ ಸ್ಪೀಡ್!

Samsung Galaxy S20 FE 5G ಸಹ ರೂ 38,740 ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದ್ದು
ಇದು ಸಾಮಾನ್ಯವಾಗಿ ರೂ.39,990. ನಲ್ಲಿ ಲಭ್ಯವಿದೆ. ಅಮೆಜಾನ್ ಟೆಕ್ನೋ ಸ್ಪಾರ್ಕ್ 8T ಅನ್ನು ಬ್ಯಾಂಕ್ ಕೊಡುಗೆಯೊಂದಿಗೆ  8,549ರೂ.ಗೆ ಮಾರಾಟ ಮಾಡುತ್ತಿದೆ ಅದರ ನಿಯಮಿತ ಆರಂಭಿಕ ಬೆಲೆ ರೂ. 9,499 ಆಗಿದೆ. ಇದಲ್ಲದೆ, Vivo V21 5G  ಬ್ಯಾಂಕ್ ರಿಯಾಯಿತಿ ಜೊತೆಗೆ ರೂ. 28,740 ಲಭ್ಯವಿದೆ , ಫೋನ್ ಸಾಮಾನ್ಯವಾಗಿ ಚಿಲ್ಲರೆ ರೂ. 29,990 ನಲ್ಲಿ ಸಿಗುತ್ತದೆ.

Xiaomi, OnePlus ಸ್ಮಾರ್ಟ್‌ಫೋನ್‌ ರಿಯಾಯಿತಿ!

ಬ್ಯಾಂಕ್ ಕೊಡುಗೆಯ ಜೊತೆಗೆ, OnePlus Nord 2 5G ಮತ್ತು Xiaomi 11 Lite NE 5G ಗಳು 5,000 ವರೆಗಿನ ಹೆಚ್ಚುವರಿ ವಿನಿಮಯ ರಿಯಾಯಿತಿಯೊಂದಿಗೆ ಲಭ್ಯವಿದೆ. Amazon Galaxy M52 5G, OnePlus 9, OnePlus 9R ಮತ್ತು Realme Narzo 50A ಅನ್ನು ಸಹ ರೂ.5,000 ವರೆಗಿನ ರಿಯಾಯಿತಿ ಕೂಪನ್‌ನೊಂದಿಗೆ ನೀಡುತ್ತಿದೆ. . iQoo Z5 ಮತ್ತು iQoo 7 ಸೇರಿದಂತೆ ಮಾದರಿಗಳೊಂದಿಗೆ ರಿಯಾಯಿತಿ ಕೂಪನ್‌ಗಳು ಹೆಚ್ಚುವರಿಯಾಗಿ ಲಭ್ಯವಿವೆ.

ಇದನ್ನೂ ಓದಿ: Set Back For Future Group: ಮಧ್ಯಸ್ಥಿಕೆ ಸಮಿತಿ ನೀಡಿದ್ದ ತೀರ್ಪು ವಜಾ ಮಾಡಲು ದೆಹಲಿ ಹೈ ಕೋರ್ಟ್ ನಕಾರ!

Amazon ಸೇಲ್ AmazonBasics 50-ಇಂಚಿನ 4K ಟಿವಿಯಲ್ಲಿ 40 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ ಅದರ  ಬೆಲೆ ರೂ. 32,999 ರಿಂದ ಪ್ರಾರಂಭವಾಗುತ್ತದೆ. ಅದೇ ರೀತಿ, Sony 50-ಇಂಚಿನ 4K UHD Google TV 30 ಪ್ರತಿಶತ ರಿಯಾಯಿತಿಯೊಂದಿಗೆ ರೂ. 77,990 ಪ್ರಾರಂಭವಾಗುತ್ತದೆ. ಅಲ್ಲದೇ iFFalcon 43-ಇಂಚಿನ 4K UHD TV 48 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಮಾರಾಟದಲ್ಲಿದೆ.

12 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI

ಈ ಸೇಲ್‌ನಲ್ಲಿ ಗ್ರಾಹಕರಿಗೆ 12 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳನ್ನು ಸಹ ನೀಡಲಾಗುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರು ಹೆಚ್ಚುವರಿಯಾಗಿ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಿಸಿದರೆ ರೂ. 20,000 ವರೆಗೆ ಸೇವಿಂಗ್ಸ್‌ ಮಾಡಬಹುದು. ಜತೆಗೆ ಆರು ತಿಂಗಳ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಮತ್ತು ಹೆಚ್ಚುವರಿ ಮೂರು ತಿಂಗಳ ನೋ-ಕಾಸ್ಟ್ EMI ಅನ್ನು ಒಳಗೊಂಡಿದೆ.

ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟದ ಹೊರತಾಗಿ, Amazon ತನ್ನ ಪ್ರೀಮಿಯಂ ಫೋನ್‌ಗಳ ಪಾರ್ಟಿ ಈವೆಂಟ್ ಅನ್ನು ನಡೆಸುತ್ತಿದೆ ಅದರ ಅಡಿಯಲ್ಲಿ ಪ್ರಮುಖ ಫೋನ್‌ಗಳಲ್ಲಿ 40 ಪ್ರತಿಶತದಷ್ಟು ರಿಯಾಯಿತಿಗಳನ್ನು ಮತ್ತು ಹೆಚ್ಚುವರಿ ರೂ. 5,000 ಕೂಪನ್ ರಿಯಾಯಿತಿಗಳು ಲಭ್ಯವಿವೆ. ಈ ಸೇಲ್ ಜನವರಿ 12 ರವರೆಗೆ ಲೈವ್ ಇರಲಿದೆ.

click me!