ಜನಪ್ರಿಯವಾಗುತ್ತಿದೆ ಹತ್ತು ಹಲವು ವಿಶೇಷಗಳುಳ್ಳ ಟೆಲಿಗ್ರಾಂ! ಏನಿದರ ಉಪಯೋಗ?

By Web DeskFirst Published Aug 3, 2019, 6:43 PM IST
Highlights
  • ಇನ್ಸ್ಟಾಂಟ್ ಮೆಸೇಜಿಂಗ್ ಆ್ಯಪ್‌ಗಳ ಪೈಕಿ ಪ್ರಮುಖವಾಗಿದೆ ಟೆಲಿಗ್ರಾಂ
  • ಹಲವಾರು ವಿಶೇಷ ಫೀಚರ್‌ಗಳನ್ನು ಹೊಂದಿರುವ ಮೆಸೇಜಿಂಗ್ ಆ್ಯಪ್
  • ಒಂದು ಗ್ರೂಪ್‌ನಲ್ಲಿ 2 ಲಕ್ಷ ಸದಸ್ಯರು! ಸೀಕ್ರೆಟ್ ಚಾಟ್ ಫೀಚರ್
  • ಇನ್ಮುಂದೆ ಸುವರ್ಣ ನ್ಯೂಸ್ ಅಪ್ಡೇಟ್‌ಗಳು ಕೂಡಾ ಟೆಲಿಗ್ರಾಂನಲ್ಲಿ!

ನಿಮ್ಮ ವಾಟ್ಸಪ್ ನಂಬರೇನು? ವಾಟ್ಸಪ್ ಮಾಡ್ತೀನಿ, ವಾಟ್ಸಪ್‌ನಲ್ಲಿ ಕಳುಹಿಸು...... ಹೀಗೆ ಏನಾದರೂ ಮೆಸೇಜ್/ಫೋಟೋ/ವಿಡಿಯೋ ಅಥವಾ ಡಾಕ್ಯುಮೆಂಟ್ ವಿನಿಮಯ ಮಾಡಬೇಕಾದರೆ ಹಳ್ಳಿಯಿಂದ ಹಿಡಿದು ಡೆಲ್ಲಿವರೆಗೆ ಎಲ್ಲರ ಬಾಯಲ್ಲೂ ಮೊದಲು ಬರೋದು ವಾಟ್ಸಪ್.  

ಸೋಶಿಯಲ್ ಮೀಡಿಯಾಗಳ ಪೈಕಿ ವಾಟ್ಸಪ್ ಪ್ರಭಾವ ಬಹಳ ಹೆಚ್ಚಿದೆ. ಆದ್ರೆ ವಾಟ್ಸಪೇ ಎಲ್ಲಾ ಅಲ್ಲ. ವಾಟ್ಸಪ್‌ನ ಹೊರತಾಗಿಯೂ ಬಹಳಷ್ಟು ಇನ್ಸ್ಟಾಂಟ್ ಮೆಸೇಜಿಂಗ್ ಆ್ಯಪ್‌ಗಳು ಬಳಕೆಯಲ್ಲಿವೆ. ಆವುಗಳ ಪೈಕಿ ಟೆಲಿಗ್ರಾಂ ಎಂಬ ಆ್ಯಪ್ ಬಹಳ ಪ್ರಮುಖವಾದುದ್ದು.

ಟೆಲಿಗ್ರಾಂ ಅಂದ್ರೆ ಹಳೆ ತಲೆಮಾರಿಗೆ ಮೊದಲು ನೆನಪಿಗೆ ಬರೋದು ಅಂಚೆ ಕಚೇರಿಯಲ್ಲಿನ ಟಕ್ ಟಕ್ ಟಕ್.... ಟೆಲಿಗ್ರಾಂ! ಆದರೆ ಆ್ಯಂಡ್ರಾಯಿಡ್ ಜಮಾನದಲ್ಲಿ ಹುಟ್ಟಿರುವ ಯುವಪೀಳಿಗೆಗೆ ಟೆಲಿಗ್ರಾಂ ಅಂದ್ರೆ ಮೆಸೇಜಿಂಗ್ ಆ್ಯಪ್ ಅಂದ್ರೆ ತಪ್ಪಾಗಲಾರದು.

ಇದನ್ನೂ ಓದಿ: ಫೇಸ್ಬುಕ್ ಕೈಕೊಟ್ರೆ ಏನ್ಮಾಡಬೇಕು? ಅಪ್ಡೇಟ್ ಆಗೋದು ಹೇಗೆ?

ಏನಿದು ಟೆಲಿಗ್ರಾಂ?

ಟೆಲಿಗ್ರಾಂ ಕೂಡಾ ವಾಟ್ಸಪ್‌ನಂತೆಯೇ ಮೆಸೇಜಿಂಗ್ ಆ್ಯಪ್. ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಬಳಕೆದಾರರು ಇನ್ಸ್ಟಾಲ್ ಮಾಡಿದ ಬಳಿಕ ಟೆಕ್ಸ್ಟ್ ಸಂದೇಶಗಳನ್ನು ಮಾತ್ರವಲ್ಲ, ಫೋಟೋ, ವಿಡಿಯೋ ಮತ್ತು ಡಾಕ್ಯುಮೆಂಟ್‌ಗಳನ್ನು ಕೂಡಾ ಕಳುಹಿಸಬಹುದು. ಟೆಲಿಗ್ರಾಂನಲ್ಲಿ doc, zip, mp3 ಮುಂತಾದ ಫಾರ್ಮಟ್‌ಗಳಲ್ಲೂ ಫೈಲ್‌ಗಳನ್ನು ಕಳುಹಿಸಬಹುದಾಗಿದೆ.

ಬಳಸಲು ಸರಳವಾಗಿರುವ ಟೆಲಿಗ್ರಾಂ, ಸ್ಪೀಡ್ ಮತ್ತು ಸುರಕ್ಷತೆ ದೃಷ್ಟಿಯಿಂದ ಅಷ್ಟೇ ಮುಂದಿದೆ ಎಂದು ಕಂಪನಿಯ ವಾದ. ಟೆಲಿಗ್ರಾಂ ಒಮ್ಮೆ ಇನ್ಸ್ಟಾಲ್ ಮಾಡಿದ ಬಳಿಕ ಪದೇ ಪದೇ ಸೈನ್ ಇನ್- ಸೈನ್ ಔಟ್ ಮಾಡೋ ಕಿರಿಕಿರಿಯಿಲ್ಲ.  ಏಕಕಾಲದಲ್ಲಿ ಬೇರೆ ಬೇರೆ ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಡೆಸ್ಕ್ ಟಾಪ್‌ನಲ್ಲೂ ಇದನ್ನು ಬಳಸಬಹುದು.

ಟೆಲಿಗ್ರಾಂನಲ್ಲಿ ವಾಯ್ಸ್ ಕರೆಯ ಸೌಲಭ್ಯವೂ ಇದೆ, ಹಾಗೂ ಇದು ಕೂಡಾ ಸುರಕ್ಷತೆಯ ದೃಷ್ಟಿಯಿಂದ ಎಂಡ್-ಟು-ಎಂಡ್ ಎಂಕ್ರಿಪ್ಟೆಡ್ ಆಗಿದೆ. ಅಂದರೆ, ನಿಮ್ಮ ಮೆಸೇಜ್ ಮತ್ತು ಸಂಭಾಷಣೆಗಳನ್ನು ಯಾವುದೇ ತೃತೀಯ ವ್ಯಕ್ತಿ ಕದ್ದಾಲಿಸುವುದು ಅಥವಾ ಕದ್ದು ಓದಲು ಸಾದ್ಯವಿಲ್ಲ.

2 ಲಕ್ಷ ಸದಸ್ಯರ ಗ್ರೂಪ್!

ಟೆಲಿಗ್ರಾಂನಲ್ಲೂ ಗ್ರೂಪ್‌ಗಳನ್ನು ರಚಿಸಬಹುದಾಗಿದ್ದು 200000 ಮಂದಿಯನ್ನು ಸದಸ್ಯರಾಗಿ ಸೇರಿಸಬಹುದಾಗಿದೆ! ಬ್ರಾಡ್‌ಕಾಸ್ಟಿಂಗ್‌ಗಾಗಿ ಚ್ಯಾನೆಲ್‌ಗಳನ್ನು ರಚಿಸಿ ಅಸಂಖ್ಯಾತ ವೀಕ್ಷಕರನ್ನು ತಲುಪಬಹುದಾಗಿದೆ.

ಗ್ರೂಪ್‌ಗಳಲ್ಲಿ ಸಂವಹನ/ಚರ್ಚೆ/ಸಂಭಾಷಣೆ ಸುಲಭವಂತಾಗಲು, ರಿಪ್ಲೈ, ಮೆಂಶನ್ ಮತ್ತು ಹ್ಯಾಶ್ ಟ್ಯಾಗ್ ಫೀಚರ್ ಕೂಡಾ ಇದೆ. ಗ್ರೂಪ್ ನಿರ್ವಹಣೆ ಮಾಡಲು ಅಡ್ಮಿನ್‌ಗೆ ವಿಶೇಷ ಮತ್ತು ಅಡ್ವಾನ್ಸ್ಡ್ ಟೂಲ್ ಗಳಿವೆ. 

ಇದನ್ನೂ ಓದಿ: ಟ್ರಿಣ್ ಟ್ರಿಣ್ ಟ್ರೀನ್ ಟ್ರೀನ್.. ಟ್ರೀಈನ್...... BSNL ಅಂತ್ಯ ಸನ್ನಿಹಿತ?

ಪಬ್ಲಿಕ್ ಗ್ರೂಪ್ ಎಂಬ ವಿಶೇಷ! 

ಟೆಲಿಗ್ರಾಂನಲ್ಲಿ ಪಬ್ಲಿಕ್ ಗ್ರೂಪ್ ಎಂಬ ವಿಶೇಷ ಫೀಚರ್ ಇದೆ. ವಿವಿಧೋದ್ದೇಶಗಳಿಗೆ ಯಾರು ಬೇಕಾದರೂ ಪಬ್ಲಿಕ್ ಗ್ರೂಪ್‌ಗಳನ್ನು ರಚಿಸಬಹುದು; ಅಥವಾ, ರಚನೆಯಾಗಿರುವ ಅಂತಹ ಯಾವುದೇ ಗ್ರೂಪ್‌ನಲ್ಲಿ ಯಾರೂ ಬೇಕಾದರೂ ಸೇರಿಕೊಳ್ಳಬಹುದು.

ನೀವು ಚಾಟ್‌ನಲ್ಲಿ ಚಿತ್ರಗಳನ್ನು ಹೆಚ್ಚು ಬಳಸುವವರಾಗಿದ್ದರೆ, ನಿಮ್ಮಂಥವರಿಗಾಗಿಯೇ  gif ಸರ್ಚ್ ಆಪ್ಷನ್, ಮುಕ್ತವಾದ ಸ್ಟಿಕರ್ ಪ್ಲಾಟ್‌ಫಾರ್ಮ್ ಕೂಡಾ ಇದೆ. ಫೋಟೋಗಳನ್ನು ತಕ್ಷಣ ಎಡಿಟ್ ಮಾಡಲಿಕ್ಕೆ ಫೋಟೋ ಎಡಿಟರ್ ಕೂಡಾ ಇದೆ! 

ಇಷ್ಟೆಲ್ಲಾ ಫೀಚರ್ ಇದ್ರೆ ಡಿವೈಸ್ ಮೆಮೊರಿ ಬಗ್ಗೆ ಚಿಂತೆನಾ? ಅದನ್ನು ಮರೆತುಬಿಡಿ. ಟೆಲಿಗ್ರಾಂನಲ್ಲಿ ಕ್ಯಾಚ್ ಮೇನೇಜ್ ಮೆಂಟ್ ಸೌಲಭ್ಯ ಇದೆಯಲ್ಲದೇ ಕ್ಲೌಡ್ ಸಪೋರ್ಟ್ ಕೂಡಾ ಇದೆ. ಹಾಗಾಗಿ ಅತೀ ಕಡಿಮೆ ಮೆಮೊರಿ ಸ್ಪೇಸ್‌ನಲ್ಲೇ ಟೆಲಿಗ್ರಾಂನ್ನು ಬಳಸಬಹುದು. ನಿಮ್ಮ ಫೈಲ್‌ಗಳನ್ನು ಕ್ಲೌಡ್‌ನಲ್ಲಿ ಸುರಕ್ಷಿತವಾಗಿಡಬಹುದು.

ಹೆಚ್ಚು ಪ್ರೈವೆಸಿ ಬಯಸುವವರಿಗೆ ಅದಕ್ಕೂ ಸೌಲಭ್ಯವಿದೆ. ಅಡ್ವಾನ್ಸ್ಡ್ ಸೆಟ್ಟಿಂಗ್ ಬಳಸಿ ತಮಗೆ ಬೇಕಂತೆ ಸೆಟ್ ಮಾಡಿಕೊಳ್ಳಬಹುದು.

ಸೀಕ್ರೆಟ್ ಚಾಟ್ ಆಪ್ಶನ್ ಬಳಸಿ ತೀರಾ ಖಾಸಗಿ ಟೆಕ್ಸ್ಟ್-ಫೋಟೋ- ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಇಲ್ಲಿ ಫಾರ್ವರ್ಡ್‌ಗಳಿಗೆ ಅವಕಾಶವಿರೋದಿಲ್ಲ. ಹಾಗೂ ನೀವು ಮಾಡುವ ಸಂಭಾಷಣೆ ಸೇವ್ ಆಗಿರಲ್ಲ. ಸೀಕ್ರೆಟ್ ಚಾಟ್ ಮಾತ್ರ ಒಂದೇ ಡಿವೈಸ್ ಮೂಲಕ ನಡೆಸಬಹುದಾಗಿದೆ. ಆ್ಯಪನ್ನು ಹೆಚ್ಚುವರಿ ಪಾಸ್‌ಕೋಡ್ ಬಳಸಿ ಲಾಕ್ ಕೂಡಾ ಮಾಡಬಹುದು.

ವಾಟ್ಸಪ್‌ಗಿಂತ ಹೇಗೆ ಭಿನ್ನ? 

ಟೆಲಿಗ್ರಾಂ ಕ್ಲೌಡ್ ತಂತ್ರಜ್ಞಾನಾಧರಿತ ಮೆಸೇಜಿಂಗ್ ಆ್ಯಪ್ ಆಗಿರುವುದರಿಂದ, ಏಕಕಾಲದಲ್ಲಿ ಬೇರೆ ಬೇರೆ ಟ್ಯಾಬ್ಲೆಟ್, ಕಂಪ್ಯೂಟರ್‌ಗಳಂಥ ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ.   

ಟೆಲಿಗ್ರಾಂ ಸಂಪೂರ್ಣ ಉಚಿತ, ಬಳಸಲು ಯಾವುದೇ ಶುಲ್ಕವಿಲ್ಲ. ಇದು ಎಂದೆಂದಿಗೂ ಉಚಿತವಾಗಿರುತ್ತೆ ಎಂದು ಕಂಪನಿಯು ಖುದ್ದು ಹೇಳಿಕೊಂಡಿದೆ.

ಇದನ್ನೂ ಓದಿ: ಟ್ರೂಕಾಲರ್ ಬಳಕೆದಾರರಿಗೆ ‘ಬ್ಯಾಂಕ್’ ಶಾಕ್!

ಹುಟ್ಟು,ನಿರ್ವಹಣೆ ಮತ್ತು ಬಳಕೆ:
14 ಆಗಸ್ಟ್ 2013ರಂದು ಆ್ಯಪಲ್ ಫೋನ್‌ಗಳಿಗೆ ಟೆಲಿಗ್ರಾಂ ಆ್ಯಪ್ ಶುರುವಾಗಿದ್ದರೆ,  ಅದೇ ವರ್ಷ 20 ಅಕ್ಟೋಬರ್‌ಗೆ ಆ್ಯಂಡ್ರಾಯಿಡ್ ಫೋನ್‌ಗಳಿಗಾಗಿ ಬಿಡುಗಡೆಯಾಗಿತ್ತು. 

ನಾವು ಜಾಹೀರಾತುಗಳನ್ನು ಕೊಡಲ್ಲ, ಆದುದರಿಂದ ಬಳಕೆದಾರರ ಡೇಟಾ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕಂಪನಿಯ ಮಾತು. 

ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರೋ ವ್ಯಕ್ತಿಗಳು ಟೆಲಿಗ್ರಾಂ ಹಾಕಿಕೊಂಡರೆ ನಿಮಗೆ ಸುಲಭವಾಗಿ ಗೊತ್ತಾಗುತ್ತದೆ. ಇಲ್ಲದವರ ಯೂಸರ್‌ನೇಮ್ ಬಳಸಿಯೂ ನೀವು ಅವರೊಂದಿಗೆ ಚಾಟ್ ಮಾಡಬಹುದು. ನೀವು ನಿಮ್ಮ ಗೆಳೆಯರನ್ನು SMS ಮೂಲಕವೂ ಡೌನ್ ಲೋಡ್ ಲಿಂಕ್ ಕಳುಹಿಸಿ ಚಾಟ್‌ಗೆ ಆಹ್ವಾನಿಸಬಹುದು.

ಮಿಕ್ಕಿದಂತೆ ವಾಟ್ಸಪ್ ರೀತಿಯಲ್ಲಿ ನಿಮ್ಮ ಮೆಸೇಜ್ ತಲುಪಿರುವ ಬಗ್ಗೆ, ಓದಿರುವ/ನೋಡಿರುವ ಬಗ್ಗೆ ಸಿಂಗಲ್ ಚೆಕ್, ಡಬಲ್ ಚೆಕ್ ಮಾರ್ಕ್ ತೋರಿಸುವ ಫೀಚರ್‌ಗಳು ಕೂಡಾ ಇವೆ.  ‘ಲಾಸ್ಟ್ ಸೀನ್’ ಫೀಚರ್ ಇದ್ದರೂ, ಪ್ರೈವೆಸಿ ಕಾರಣಗಳಿಂದ ನಿಖರ ಸಮಯವನ್ನು ಅಡಗಿಸುವ ಸೌಲಭ್ಯವೂ ಇದೆ. 

ಹೀಗೆ ಟೆಲಿಗ್ರಾಂ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಫೀಚರ್‌ಗಳನ್ನು ಒದಗಿಸುತ್ತಾ ಬಂದಿದೆ. ವಾಟ್ಸಪ್‌ಗಿಂತ ಭಿನ್ನವಾದ ಹತ್ತು ಹಲವು ವಿಶೇಷ ಫೀಚರ್‌ಗಳನ್ನು ಟೆಲಿಗ್ರಾಂ ಒಳಗೊಂಡಿದೆ. ಹಾಗಾಗಿ ಟೆಲಿಗ್ರಾಂ ಇಂದಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ನೂರಾರು ಮಿಲಿಯನ್ ಮಂದಿ ಇದನ್ನು ಬಳಸುತ್ತಿದ್ದಾರೆ.

ಹ್ಞಾಂ... ಅಂದ ಹಾಗೆ, ಕಾಲ ಬದಲಾದಂತೆ ನಾವೂ ಬದಲಾಗಲೇಬೇಕು. ಇನ್ನು ಹೆಚ್ಚು ದಿನ ವಾಟ್ಸಪ್‌ನಲ್ಲಿ ನಾವಿರೋಲ್ಲ. ಆದರೆ, ನಿಮ್ಮೊಂದಿಗಿನ ಬಾಂಧವ್ಯ ಕಡಿದುಕೊಳ್ಳಲು ಸುವರ್ಣನ್ಯೂಸ್.ಕಾಂ ಗೆ ಸುತರಾಂ ಇಷ್ಟವಿಲ್ಲ. ನಮ್ಮ ಸುದ್ದಿ ಅಪ್‌ಡೇಟ್ಸ್‌‌ ಇನ್ನು ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಬರಲಿದೆ. ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್ ಫಾಲೋ ಮಾಡಿ. SUVARNA NEWS ಈ ಕೊಂಡಿಯನ್ನು ಒತ್ತಿ ⬇ https://www.msgp.pl/12RkBIw

click me!