ಸಿಕ್ತೊಂದು ಸೂಪರ್ ಅರ್ಥ್: ಸಾಧ್ಯವೇ ಜೀವಿಗಳ ಬರ್ತ್?

By nikhil vk  |  First Published Aug 3, 2019, 3:59 PM IST

ಭೂಮಿಯ ಅತ್ಯಂತ ಸಮೀಪದಲ್ಲೇ ಇದೆ ಭುಮಿಯನ್ನು ಹೋಲು ಗ್ರಹ| ಭೂಮಿಯಿಂದ ಕೇವಲ 31 ಜ್ಯೋತಿವರ್ಷ ದೂರದಲ್ಲಿದೆ GJ 357 d ಗ್ರಹ| ಗಾತ್ರದಲ್ಲಿ GJ 357 d ಗ್ರಹ ಭೂಮಿಗಿಂತ 6 ಪಟ್ಟು ದೊಡ್ಡದು| ಹೈಡ್ರಾ ನಕ್ಷತ್ರಪುಂಜದಲ್ಲಿರುವ ಕುಬ್ಜ  ನಕ್ಷತ್ರವೊಂದನ್ನು ಸುತ್ತುತ್ತಿರುವ GJ 357 d ಗ್ರಹ| ನಕ್ಷತ್ರದಿಂದ ಇರುವ ದೂರದ ಪರಿಣಾಮವಾಗಿ ವಾಸಯೋಗ್ಯ ಪ್ರದೇಶ| GJ 357 d ಗ್ರಹದಲ್ಲಿ ನೀರು ಇರುವ ಸಾಧ್ಯತೆ|


ವಾಷಿಂಗ್ಟನ್(ಆ.03): ಸೌರಮಂಡಲದಾಚೆಗಿನ ಗ್ರಹಗಳನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿರುವ ನಾಸಾದ TESS ಟೆಲಿಸ್ಕೋಪ್, ಭೂಮಿಯನ್ನು ಹೋಲುವ ಆದರೆ ಭೂಮಿಗಿಂತ 6 ಪಟ್ಟು ದೊಡ್ಡದಾದ ಗ್ರಹವೊಂದನ್ನು ಪತ್ತೆ ಹಚ್ಚಿದೆ.

ಭೂಮಿಯಿಂದ ಕೇವಲ 31 ಜ್ಯೋತಿವರ್ಷ ದೂರದಲ್ಲಿರುವ GJ 357 d ಗ್ರಹ, ಗಾತ್ರದಲ್ಲಿ ಭೂಮಿಗಿಂತ 6 ಪಟ್ಟು ದೊಡ್ಡದಿದೆ ಎಂದು ನಾಸಾ ತಿಳಿಸಿದೆ. ಹೈಡ್ರಾ ನಕ್ಷತ್ರಪುಂಜದಲ್ಲಿರುವ ಕುಬ್ಜ  ನಕ್ಷತ್ರವೊಂದನ್ನು ಸುತ್ತುತ್ತಿರುವ GJ 357 d ಗ್ರಹ, ತನ್ನ ಮಾತೃ ನಕ್ಷತ್ರದಿಂದ ಇರುವ ದೂರದ ಪರಿಣಾಮವಾಗಿ ವಾಸಯೋಗ್ಯ ಪ್ರದೇಶವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

. observations led to the discovery of three planets around a star known as GJ 357, which is located just 31 light-years away. The outermost planet, GJ 357 d, orbits within the star’s so-called habitable zone. Learn more here: https://t.co/iTxgSASv7l pic.twitter.com/29s3RJTV8h

— NASA_TESS (@NASA_TESS)

Latest Videos

GJ 357 d ಗ್ರಹದಲ್ಲಿ ನೀರು ಇರುವ ಸಾಧ್ಯತೆ ದಟ್ಟವಾಗಿದ್ದು, ಭೂಮಿಗೆ ಇಷ್ಟು ಹತ್ತಿರದಲ್ಲಿ ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹ ಇರುವುದು ನಿಜಕ್ಕೂ ಆಶ್ವರ್ಯವನ್ನುಂಟು ಮಾಡಿದೆ ಎಂದು ಕಾರ್ಲ್ ಸೆಗಾನ್ ಇನ್ಸಿಟ್ಯೂಟ್’ನ ಲಿಸಾ ಕಲ್ಟೆನೆಗ್ಗರ್ ಹೇಳಿದ್ದಾರೆ.

GJ 357 d ಗ್ರಹ -53 ಡಿಗ್ರಿ ಸೆಲ್ಸಿಯಸ್ ನಷ್ಟು ಮೇಲ್ಮೈ ವಾತಾವರಣ ಹೊಂದಿದ್ದು, ಮೇಲ್ಮೈ ಭೂಪ್ರದೇಶದಲ್ಲಿ ನೀರು ದ್ರವರೂಪದಲ್ಲೇ ಇರುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

click me!