ಜಿಯೋಗೆ ಸೆಡ್ಡು ಹೊಡೆದ ಏರ್‌ಟೆಲ್

Published : Sep 24, 2016, 01:10 PM ISTUpdated : Apr 11, 2018, 12:47 PM IST
ಜಿಯೋಗೆ ಸೆಡ್ಡು ಹೊಡೆದ ಏರ್‌ಟೆಲ್

ಸಾರಾಂಶ

ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆದಿರುವ ಏರ್‌ಟೆಲ್ ಈಗ ೯೦ದಿನಗಳ ಉಚಿತ ೪ಜಿ ಟಾಡಾ ಯೋಜನೆ ಘೋಷಿಸಿದೆ

ನವದೆಹಲಿ(ಸೆ.24): ಉಚಿತ ಕರೆ ಮತ್ತು ಡಾಟಾ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆದಿರುವ ಏರ್‌ಟೆಲ್ ಈಗ ೯೦ದಿನಗಳ ಉಚಿತ ೪ಜಿ ಟಾಡಾ ಯೋಜನೆ ಘೋಷಿಸಿದೆ. ತಕ್ಷಣಕ್ಕೆ ಈ ಸೌಲಭ್ಯ ದೆಹಲಿಯಲ್ಲಿದೆ. ಕೆಲವೇ ದಿನಗಳಲ್ಲಿ ಇದು ಎಲ್ಲಾ ವೃತ್ತಗಳಲ್ಲೂ ಲಭ್ಯವಾಗಲಿದೆ.

ಏರ್‌ಟೆಲ್ ಘೋಷಿಸಿರುವ ನೂತನ ಯೋಜನೆ ಪ್ರಕಾರ, ಹಾಲಿ ೪ಜಿ ಗ್ರಾಹಕರು, ಹೊಸ ೪ಜಿ ಗ್ರಾಹಕರು ₹೧೪೯೪ ಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿದೆ. ಮುಂದಿನ ಮೂರು ತಿಂಗಳು ಅದೆಷ್ಟೇ ಡಾಟಾ ಬಳಸಿದರೂ ಅದು ಉಚಿತ.

೪ಜಿ ಬಳಕೆದಾದರ ಡಾಟಾ ಬೇಗ ಮುಗಿಯುತ್ತದೆ. ನಮ್ಮ ಹೋಸ ಯೋಜನೆಯಿಂದ ಗ್ರಾಹಕರು ದಿನವಿಡೀ ಆನ್‌ಲೈನ್‌ನಲ್ಲಿರಬಹುದು ಎಂದು ಏರ್‌ಟೆಲ್ ನಿರ್ದೇಶಕ ಅಜಯ್ ಪೂರಿ ಹೇಳಿದ್ದಾರೆ.

ಈ ಯೋಜನೆ ಮೂಲಕ ಏರ್‌ಟೆಲ್‌ನ ೨ಜಿ ಮತ್ತು ೩ಜಿ ಗ್ರಾಹಕರನ್ನು ೪ಜಿ ಸೇವೆಗೆ ಪರಿವರ್ತಿಸುವ ಪ್ರಯತ್ನವೂ ಇದೆ. ೪ಜಿ ಸೇವೆ ಡಾಟಾ ಆಧಾರಿತವಾಗಿದ್ದು, ಡಾಟಾ ಬಹುಬೇಗ ಮುಗಿಯುವುದರಿಂದ ಗ್ರಾಹಕರು ಹೆಚ್ಚೆಚ್ಚು ರಿಚಾರ್ಜ್ ಮಾಡಿಸುವುದರಿಂದ ದೀರ್ಘಕಾಲದಲ್ಲಿ ಕಂಪನಿಗೆ ಹೆಚ್ಚಿನ ಲಾಭ ದಕ್ಕಲಿದೆ.

ಉಚಿತ ಸಿಮ್, ಉಚಿತ ಕರೆ ಸೌಲಭ್ಯದೊಂದಿಗೆ ೪ಜಿ ಸೇವೆ ಆರಂಭಿಸಿರುವ ಜಿಯೋ ದೊಡ್ಡಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಏರ್‌ಟೆಲ್ ಗ್ರಾಹಕರೂ ಜಿಯೋನತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಏರ್‌ಟೆಲ್ ೯೦ ದಿನಗಳ ಯೋಜನೆ ಘೋಷಿಸಿದೆ. ಬರುವ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಘೋಷಿಸಲಿದೆ.

ಈ ನಡುವೆ, ಜಿಯೋಗೆ ಸ್ಪರ್ಧೆ ನೀಡಲು ಮುಂದಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ಉಚಿತ ಕರೆಗಳ ಸೌಲಭ್ಯ ನೀಡಲು ಮುಂದಾಗಿದೆ. ಬಿಎಸ್‌ಎನ್‌ಎಲ್ ೪ಜಿ ಅಷ್ಟೇ ಅಲ್ಲ, ೨ಜಿ ಮತ್ತು ೩ಜಿ ಗ್ರಾಹಕರಿಗೂ ಉಚಿತ ಕರೆ ಸೌಲಭ್ಯ ಒದಗಿಸಲಿದೆ. ಜತೆಗೆ ಡಾಟಾ ದರವು ಜಿಯೋ ನಿಗಿದಿ ಮಾಡಿರುವ ದರಕ್ಕಿಂತ ಕಡಮೆ ಇರಲಿದೆ.

ನಾವು ಮಾರುಕಟ್ಟೆಯನ್ನು ಗಮನಿಸುತ್ತಿದ್ದೇವೆ. ಸ್ಪರ್ಧೆಗೆ ಸಿದ್ದರಾಗಿದ್ದೇವೆ. ಹೊಸ ವರ್ಷದಿಂದ ಲೈಫ್‌ಟೈಮ್ ಉಚಿತ ಕರೆ ಸೇವೆ ಒದಗಿಸುತ್ತೇವೆ ಎಂದು ಬಿಎಸ್‌ಎನ್‌ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?