
ಕ್ಯಾಲಿಫೋರ್ನಿಯಾ(ಸೆ.23): ಯಾಹೂ ವೆಬ್‌ಸೈಟ್ ಮಾಹಿತಿಗಳಿಗೆ ಕನ್ನ ಹಾಕಲಾಗಿದೆ ಎಂಬ ಆಘಾತಕಾರಿ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಯಾಹೂವಿನ 6.72 ಕೋಟಿ ಗ್ರಾಹಕರ ಮಾಹಿತಿಗಳಿಗೆ 2014ರಲ್ಲೇ ಕನ್ನ ಹಾಕಲಾಗಿದ್ದು, ಸಂಸ್ಥೆ ಕೈಗೊಂಡ ತನಿಖೆಯಲ್ಲಿ ಈ ಬಗ್ಗೆ ಬಹಿರಂಗವಾಗಿದೆ.
‘ರಾಷ್ಟ್ರವೊಂದರ ಸರ್ಕಾರಿ ಪ್ರಾಯೋಜಿತ ಸಂಸ್ಥೆ’ಯೇ ಹ್ಯಾಕ್ ಮಾಡಿಸಿದೆ ಎಂದು ಯಾಹೂ ಆರೋಪಿಸಿದೆ. ಆದರೆ, ಯಾವ ರಾಷ್ಟ್ರ ಈ ಕೃತ್ಯ ಮಾಡಿಸಿದೆ ಎಂಬುದನ್ನು ಬಹಿರಂಗ ಪಡಿಸಲು ನಿರಾಕರಿಸಿದೆ. ಈ ಘಟನೆ 2 ವರ್ಷಗಳ ಹಿಂದೆ ಸಂಭವಿಸಿದ ಹೊರತಾಗಿಯೂ ಯಾಹೂ ತನ್ನ ಗ್ರಾಹಕರಿಗೆ ಈ ವಿಚಾರ ತಿಳಿಸಿದ್ದು ಈಗ. ಇದರಿಂದ ಬೇಸರಗೊಂಡ ಗ್ರಾಹಕರು ಯಾಹೂ ಸಿಇಒ ಸ್ಥಾನಕ್ಕೆ ಮರಿಸ್ಸಾ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಏನೇನು ಹ್ಯಾಕ್?: ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಜನ್ಮ ದಿನಾಂಕ, ಪಾಸ್‌ವರ್ಡ್‌ಗಳು ಮತ್ತು ಪಾಸ್‌ವರ್ಡ್ ಬದಲಾವಣೆ ವೇಳೆ ಬಳಸುವ ಸೆಕ್ಯೂರಿಟಿ ಪ್ರಶ್ನೆ ಮತ್ತು ಉತ್ತರಗಳೂ ಹ್ಯಾಕ್ ಆಗಿವೆ. ಕನ್ನ ಹಾಕಲಾದ ಮಾಹಿತಿಗಳನ್ನು ‘ಡಾರ್ಕ್ ವೆಬ್’ಗೆ ಕೇವಲ ರೂ.1.20 ಲಕ್ಷಕ್ಕೆ ಮಾರಾಟ ಮಾಡಿರುವ ಸಾಧ್ಯತೆಯಿದ್ದು, ಈ ದಾಖಲೆಗಳನ್ನಿಟ್ಟುಕೊಂಡು ಬಳಕೆದಾರರಿಗೆ ಬ್ಲಾಕ್‌ಮೇಲ್ ಮಾಡುವ ಉದ್ದೇಶವಿರಬಹುದು ಎಂದು ಯಾಹೂ ಶಂಕಿಸಿದೆ. ಆದರೆ, ಯಾಹೂ ಬಳಕೆದಾರರ ಬ್ಯಾಂಕ್ ಅಕೌಂಟ್, ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಗೆ ಯಾವುದೇ ಧಕ್ಕೆಯಾಗಿಲ್ಲ ಸಂಸ್ಥೆ ಸ್ಪಷ್ಟಪಡಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.