ವಿಶ್ವದ ಮೊದಲ ಸ್ಮಾರ್ಟ್ ಶರ್ಟ್: ನಾವು-ನೀವು ತೊಡಬಹುದು, ಬೆಲೆಯೂ ಕಡಿಮೆ

By Internet DeskFirst Published Sep 24, 2016, 9:21 AM IST
Highlights

ದಿನದಿಂದ ದಿನಕ್ಕೆ ಇಡೀ ವಿಶ್ವವೇ ಸ್ಮಾರ್ಟ್ ಆಗುತ್ತಿದ್ದು, ಪ್ರಪಂಚದಲ್ಲಿರೂ ಪ್ರತಿ ನಿರ್ಜಿವ ವಸ್ತುಗಳು ಸ್ಮಾರ್ಟ್ ಆಗಿ ಅಪ್ ಗ್ರೇಡ್ ಆಗುತ್ತಿವೆ. ಈಗ ಅದೇ ಸಾಲಿಗೆ ಸೇರುತ್ತಿದೆ ಶರ್ಟ್'ಗಳು, ಮೊಬೈಲ್ ನಿಂದ ಆರಂಭವಾದ ಸ್ಮಾರ್ಟ್ ಬದಲಾವಣೆ ಇಂದು ಸ್ಮಾರ್ಟ್ ಶರ್ಟಿನವರೆಗೂ ಬಂದು ನಿಂತಿದೆ ಎಂದರೆ ಅಚ್ಚರಿಪಡಲೇಬೇಕಾಗಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಮಾರ್ಟ್'ಗೆ ಬೆಲೆ ಜಾಸ್ತಿ. 

ಮೊನ್ನೆ ತಾನೆ ನೈಕ್ ಸ್ಮಾರ್ಟ್ ಶೂ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿತ್ತು, ಇಂದು ಅದೇ ಮಾದರಿಯಲ್ಲಿ ಸ್ಮಾರ್ಟ್ ಶರ್ಟ್ ಬಿಡುಗಡೆ ಮಾಡಿ ಇಡೀ ವಿಶ್ವದ ಗಮನ ಸೆಳೆದಿದೆ ಬ್ರಾಂಡೆಡ್ ವಸ್ತ್ರಗಳ ಉತ್ಪಾದನೆಯಲ್ಲಿ ಗುರುತಿಸಿಕೊಂಡಿರುವ ಆರೋ(arrow). ಈ ಸ್ಮಾರ್ಟ್ ಶರ್ಟ್'ಅನ್ನು ಕಂಪನಿ ಸಾಮಾನ್ಯ ಜನರ ಹಿತ ದೃಷ್ಠಿಯಿಂದಲೇ ರೂಪಿಸಿದೆ ಎಂದರೆ ತಪ್ಪಾಗುವುದಿಲ್ಲ. 

Latest Videos

ಈ ಸ್ಮಾರ್ಟ್ ಶರ್ಟ್ ಸಾಮಾನ್ಯ ಶರ್ಟ್ ನಂತಯೇ ಇದೆ. ಆದರೆ ಶರ್ಟ್ ನ ಕೈ ಬಳಿ ಅಳವಡಿಸಿರುವ ಎನ್ ಎಫ್ ಸಿ ಟ್ಯಾಗ್ ಶರ್ಟ್ ಅನ್ನು ಸ್ಮಾರ್ಟ್ ಮಾಡಿದೆ. ಈ ಶರ್ಟ್ ನಿಮ್ಮ ಮೊಬೈಲ್ ನೊಂದಿಗೆ ಸಂಪರ್ಕಸಾಧಿಸಲಿದ್ದು, ಇದು ನಿಮ್ಮ ಫೇಸ್ ಬುಕ್ ಅಕೌಂಟ್ ಮಾಹಿತಿ ಪಡೆಯಲು ಹಾಗೂ ಮ್ಯೂಸಿಕ್ ಕೇಳಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಮೊಬೈಲ್ ಅನ್ನು ಸೈಲೆಂಟ್ ಮಾಡಲು, ನಿಮ್ಮ ನಂಬರ್ ಅನ್ನು ಇತರರೊಂದಿಗೆ ಹಚ್ಚಿಕೊಳ್ಳುವಲ್ಲಿ ಸಹ ಶರ್ಟ್ ಸಹಕಾರಿಯಾಗಲಿದೆ. 

ಅಲ್ಲದೇ ಇದರ ಬೆಲೆಯೂ ಸಾಮಾನ್ಯ ಬ್ರಾಂಡೆಡ್ ಶರ್ಟ್ ಗಳ ಬೆಲೆಯಷ್ಟೆ ಇದೆ. ಇದರಿಂದಾಗಿ ಸಾಮಾನ್ಯ ಜನರು ಸಹ ಇದನ್ನು ಖರೀದಿಸ ಬಹುದಾಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 2.999 ರೂಗಳಿಗೆ ಲಭ್ಯವಿದೆ. ಸಧ್ಯ ಆನ್ ಲೈನ್ ಮಾರುಕಟ್ಟೆಯಲ್ಲಿಯೂ ದೊರೆಯುತ್ತಿದೆ. 


 

click me!