ಮೊಬೈಲ್ ಡೇಟಾ ದರ ಸಮರ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇದೀಗ ಬಿಎಸ್ಎನ್ಎಲ್‌ಗೆ ಸ್ಪರ್ಧೆ ನೀಡಲು ಏರ್‌ಟೆಲ್ ಹೊಸ ಡೇಟಾ ಪ್ಲ್ಯಾನನ್ನು ಬಿಡುಗಡೆ ಮಾಡಿದೆ.
ಈ ವಾರದ ಆರಂಭದಲ್ಲಿ ಬಿಎಸ್ಎನ್ಎಲ್ ₹75 ಪ್ಲ್ಯಾನ್ ಬಿಡುಗಡೆ ಮಾಡಿತ್ತು. ಇದೀಗ ಏರ್‌ಟೆಲ್ ಕೂಡಾ ಪ್ರಿಪೇಯ್ಡ್ ಗ್ರಾಹಕರಿಗೆ 28 ದಿನಗಳ ಅವಧಿಗೆ ₹75ರ ಪ್ಲ್ಯಾನನ್ನು ಬಿಡುಗಡೆ ಮಾಡಿದೆ.
ಈ ಪ್ಲ್ಯಾನ್‌ನಲ್ಲಿ, 28 ದಿವಸಗಳ ಅವಧಿಗೆ 1 ಜಿಬಿ ಡೇಟಾ ( 2G/3G/4G) ಜೊತೆಗೆ 300 ನಿಮಿಷಗಳ ಉಚಿತ ಕರೆಗಳು ಹಾಗೂ 100 ಎಸ್ಸೆಮ್ಮೆಸ್‌ಗಳು ಉಚಿತವಾಗಿರುತ್ತವೆ ಎಂದು ಬಿಜಿಆರ್ ವರದಿ ಮಾಡಿದೆ.
ಐಡಿಯಾ ಸೇವೆಯಲ್ಲೂ ಇಂತಹದ್ದೇ ಪ್ಲ್ಯಾನ್ ಲಭ್ಯವಿದೆ, ಆದರೆ ಡೇಟಾ ಮಾತ್ರ 4Gಗೆ ಸೀಮಿತವಾಗಿದೆ.
ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ₹75 ಪ್ಲ್ಯಾನ್ 15 ದಿನಗಳಿಗೆ ಮಾತ್ರ ಸೀಮಿತವಾಗಿದೆ.