ಜಿಯೋ, ಪೇಟಿಎಂಗೆ ಆಧಾರ್ ಜೋಡಿಸಿದ ಗ್ರಾಹಕರ ಮುಂದಿರುವ ಆಯ್ಕೆಗಳೇನು?

By Web DeskFirst Published Sep 27, 2018, 8:09 PM IST
Highlights

ಖಾಸಗಿ ಸಂಸ್ಥೆಗಳು  ಆಧಾರ್ ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಇದೀಗ ಖಾಸಗಿ ಕಂಪೆನಿಗಳಿಗೆ ಹೊಡೆತ ನೀಡಿದೆ. ಈಗಾಗಲೇ ಸಿಮ್ ಕಾರ್ಡ್, ಮೊಬೈಲ್ ವ್ಯಾಲೆಟ್ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಜೋಡಿಸಿದವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ.
 

ನವದೆಹಲಿ(ಸೆ.27): ಆಧಾರ್ ಕುರಿತು ಸುಪ್ರೀಂ ಕೋರ್ಟ್ ತೀರ್ಪುನ್ನ ಭಾರತೀಯರು ಸ್ವಾಗತಿಸಿದ್ದಾರೆ. ಆದರೆ ಕೆಲ ಖಾಸಗಿ ಕಂಪೆನಿಗಳಿಗೆ ಸುಪ್ರೀಂ ತೀರ್ಪು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದರಲ್ಲೂ ರಿಯಾಲಯನ್ಸ್ ಜಿಯೋ ಹಾಗೂ ಪೆಟಿಎಂ ಸಂಸ್ಥೆಗಳು ಇದೀಗ ಪರ್ಯಾಯ ಮಾರ್ಗ ಹುಡುಕಬೇಕಿದೆ.

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಿಂದ ರಿಲಾಯನ್ಸ್ ಜಿಯೋ ಹಾಗೂ ಪೇಟಿಎಂ ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿತು. ಎರಡು ಸಂಸ್ಥೆಗಳ ಸೇವೆ ಬಳಸಿಕೊಳ್ಳಲು ಆಧಾರ್ ಜೋಡಣೆ ಖಡ್ಡಾಯವಾಗಿತ್ತು. 

ಬಹುತೇಕ ಕಂಪನಿಗಳು  ಆಧಾರ್ ಇ-ಕೆವೈಸಿ(ಗ್ರಾಹಕರ ಪರಿಶೀಲನೆ) ಖಡ್ಡಾಯ ಮಾಡಿತ್ತು.  ಸುಮಾರು 200 ಮಿಲಿಯನ್ ಜಿಯೋ ಹಾಗೂ ಪೆಟಿಎಂ ಬಳಕೆದಾರರು ಈಗಾಗಲೇ  ಆಧಾರ್ ಜೋಡಣೆ ಮಾಡಿದ್ದಾರೆ. ಸದ್ಯ ಇರೋ ಪ್ರಶ್ನೆ ಈಗಾಗಲೇ ಆಧಾರ್ ಜೋಡಣೆ ಮಾಡಿರೋ ಗ್ರಾಹಕರು ತಮ್ಮ ಖಾಸಗಿ ಮಾಹಿತಿ ದತ್ತಾಂಶ ಹಿಂಪಡೆಯಲು ಸಾಧ್ಯವೇ? ಈ ಕುರಿತು ಜಿಯೋ ಹಾಗೂ ಪೆಟಿಎಂ ಸಂಸ್ಥೆಗಳು ಇನ್ನಷ್ಟೇ ಕಾರ್ಯಪ್ರವತ್ತರಾಗಬೇಕಿದೆ.

ಸಿಮ್ ಜೊತೆ ಆಧಾರ್, ಬಯೋಮೆಟ್ರಿಕ್ ಮಾಹಿತಿ ಹಂಚಿಕೊಂಡಿರುವ ಗ್ರಾಹಕರು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಆಧಾರ ಜೋಡಣೆಯನ್ನ ಹಿಂಪಡೆಯಲು ಅವಕಾಶವಿದೆ. ಕಂಪೆನಿ ಗ್ರಾಹಕನ ದತ್ತಾಂಶವನ್ನ ಅಳಿಸಿ(ಡಿಲೀಟ್) ಹಾಕಬೇಕು. ಆದರೆ ಸದ್ಯ ಜಿಯೋ, ಪೇಟಿಎಂ ಸೇರಿದಂತೆ ಹಲವು ಕಂಪೆನಿಗಳು ಈ ಕುರಿತು ಯಾವುದೇ ಪರ್ಯಾಯ ಮಾರ್ಗ ಕಂಡುಹಿಡಿದಿಲ್ಲ.

ಗ್ರಾಹಕರು  ಬ್ಯಾಂಕ್‌ಗಳಿಗೆ ನೀಡಿದ ಆಧಾರ್ ಮಾಹಿತಿಯನ್ನ ತೆಗೆಯಲು ತಮ್ಮ ತಮ್ಮ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಬೇಕು. ಇಷ್ಟೇ ಅಲ್ಲ, ಕೇವಲ ಆಧಾರ್ ನಂಬರ್‌ನಿಂದ ಸಿಮ್, ಬ್ಯಾಂಕ್ ಖಾತೆಗೆ ಅನುವು ಮಾಡಿಕೊಟ್ಟಿದ್ದ ಖಾಸಗಿ ಕಂಪೆನಿಗಳು ಇದೀಗ ಮತ್ತೇ ಹಳೇ ವಿಧಾನದ ಮೊರೆ ಹೋಗಬಹುದು.

click me!