Xiaomi 12 Series: ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಶಾಓಮಿಯ ಮೂರು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ!

By Suvarna NewsFirst Published Dec 29, 2021, 9:08 AM IST
Highlights

Xiaomi 12 ಸರಣಿಯಲ್ಲಿ  Xiaomi 12, Xiaomi 12 Pro, ಮತ್ತು Xiaomi 12X ಅನ್ನು ಚೀನಾದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ Xiaomi 12 ಸರಣಿಯ ಬಿಡುಗಡೆಯ ಕುರಿತು ಕಂಪನಿ ಇನ್ನೂ ಯಾವುದೇ ವಿವರಗಳನ್ನು ಒದಗಿಸಿಲ್ಲ.

Tech Desk: ಶಾಓಮಿ ಡಿಸೆಂಬರ್ 28 ರಂದು ಚೀನಾದಲ್ಲಿ Xiaomi 12 ಸರಣಿಯ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ  Xiaomi 12, Xiaomi 12 Pro, ಮತ್ತು Xiaomi 12X ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. Xiaomi 12 ಸರಣಿಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್, ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು 5G ಸಂಪರ್ಕ ಹಾಗೂ ಹೋಲ್-ಪಂಚ್ ಡಿಸ್ಪ್ಲೇ ವಿನ್ಯಾಸವನ್ನು ಒಳಗೊಂಡಂತೆ ವಿವಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. Xiaomi 12 ಸರಣಿಯ ಜೊತೆಗೆ ಶಾಓಮಿ ಕಂಪನಿಯು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಅದರ ಇತ್ತೀಚಿನ ಕಸ್ಟಮ್ ರ‍್ಯಾಮ್‌ MIUI 13 ಅನ್ನು ಅನಾವರಣಗೊಳಿಸಿದೆ

Xiaomi 12, Xiaomi 12 Pro, Xiaomi 12X ಬೆಲೆ, ಲಭ್ಯತೆ

Xiaomi 12 ಬೆಲೆಯನ್ನು 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ CNY 3,699 (ಸುಮಾರು ರೂ. 43,400) ಗೆ ನಿಗದಿಪಡಿಸಲಾಗಿದೆ. ಫೋನ್ 8GB + 256GB ಮಾದರಿಯಲ್ಲಿ CNY 3,999 (ಸುಮಾರು ರೂ. 46,900) ಮತ್ತು ಟಾಪ್-ಎಂಡ್ 12GB + 256GB ಆಯ್ಕೆ CNY 4,399 (ಸುಮಾರು ರೂ. 51,600) ನಲ್ಲಿ ಲಭ್ಯವಿದೆ.

Xiaomi 12 Pro ಬೆಲೆಯು 8GB + 128GB ರೂಪಾಂತರಕ್ಕಾಗಿ CNY 4,699 (ಸುಮಾರು ರೂ. 55,100) ರಿಂದ ಪ್ರಾರಂಭವಾಗುತ್ತದೆ. ಫೋನ್ CNY 4,999 (ಸುಮಾರು ರೂ. 58,600) ನಲ್ಲಿ 8GB + 256GB ಮಾದರಿಯನ್ನು ಹೊಂದಿದೆ ಮತ್ತು CNY 5,399 (ಸುಮಾರು ರೂ. 63,300) ನಲ್ಲಿ ಟಾಪ್-ಆಫ್-ಲೈನ್ 12GB + 256GB ಆಯ್ಕೆಯನ್ನು ಹೊಂದಿದೆ.

Best Smartphones 2021: ಈ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ? ಇಲ್ಲಿದೆ ಪಟ್ಟಿ

Xiaomi 12X ಬೆಲೆ 8GB + 128GB ರೂಪಾಂತರಕ್ಕಾಗಿ CNY 3,199 (ಸುಮಾರು ರೂ. 37,500) ನಿಂದ ಪ್ರಾರಂಭವಾಗುತ್ತದೆ. ಫೋನ್ CNY 3,499 (ಸುಮಾರು ರೂ. 41,000) ನಲ್ಲಿ 8GB + 256GB ಮಾದರಿಯನ್ನು ಹೊಂದಿದೆ ಮತ್ತು CNY 3,799 (ಸುಮಾರು ರೂ. 44,500) ನಲ್ಲಿ 12GB + 256GB ಆಯ್ಕೆಯನ್ನು ಹೊಂದಿದೆ.

ಲಭ್ಯತೆಯ ಬಗ್ಗೆ ಗಮನಹರಿಸುವುದಾದರೆ, Xiaomi 12, Xiaomi 12 Pro ಮತ್ತು Xiaomi 12X ಎಲ್ಲಾ ಮೂರು ಫೋನ್‌ಗಳು ಡಿಸೆಂಬರ್ 31 ರಿಂದ ಚೀನಾದಲ್ಲಿ ಲಭ್ಯವಿರುತ್ತವೆ, ಅವುಗಳ ಪ್ರಿ ಸೇಲ್ಸ್ ಮಂಗಳವಾರದಿಂದ ಪ್ರಾರಂಭವಾಗಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ Xiaomi 12 ಸರಣಿಯ ಬಿಡುಗಡೆಯ ಕುರಿತು Xiaomi ಇನ್ನೂ ಯಾವುದೇ ವಿವರಗಳನ್ನು ಒದಗಿಸಿಲ್ಲ.

 

Today, we launched our flagship series in China. Like and RT if you'd like to see this in our global markets! pic.twitter.com/YbQoJaA83P

— leijun (@leijun)

 

Xiaomi 12 Specifications 

Xiaomi 12 ಆಂಡ್ರಾಯ್ಡ್-ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.28-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬಿಡುಗಡೆಯಾಗಿದ್ದು 20:9 ಅಸ್ಪೇಕ್ಟ್‌ ರೇಶೋ  ಹೊಂದಿದೆ. Xiaomi 12 ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಅನ್ನು ಹೊಂದಿದೆ, ಜೊತೆಗೆ 12GB LPDDR5 RAM ಅನ್ನು ಕೂಡ ಹೊಂದಿದೆ.

Xiaomi 12 Camera

Xiaomi 12 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅದು 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX766 ಸೆನ್ಸರ್‌, f/1.88 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲ ಹೊಂದಿದೆ. ಕ್ಯಾಮರಾ ಸೆಟಪ್ 13-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಜೊತೆಗೆ f/2.4 ಅಲ್ಟ್ರಾ-ವೈಡ್ ಲೆನ್ಸ್ ಜೊತೆಗೆ 123 ಡಿಗ್ರಿ ವೀಕ್ಷಣಾ ಸಾಮರ್ಥ್ಯ ಹೊಂದಿದೆ. ಇವುಗಳನ್ನು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ನೊಂದಿಗೆ ಜೋಡಿಸಲಾಗಿದೆ, ಇದು ಬೀಜಗಳು ಮತ್ತು ಹೂವುಗಳಂತಹ ಸಣ್ಣ ವಸ್ತುಗಳು ಮತ್ತು ವಿಷಯಗಳನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ. 

Realme 9i Leak: 50MP ಪ್ರೈಮರಿ ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಶೀಘ್ರದಲ್ಲೇ ಬಿಡುಗಡೆ?

Xiaomi 12 ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕದೊಂದಿಗೆ ಬರುತ್ತದೆ. ಇದು ಸ್ಟಾಗರ್ HDR ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಸೌಂದರ್ಯೀಕರಣ ವೈಶಿಷ್ಟ್ಯಗಳಿಗೆ ಬೆಂಬಲವನ್ನು ಹೊಂದಿದೆ. Xiaomi 12  4,500mAh ಬ್ಯಾಟರಿ ಹೊಂದಿದ್ದು 67W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Xiaomi 12 Pro specifications

Xiaomi 12 Pro MIUI 13 ನಲ್ಲಿ ಕೆಲಸ ಮಾಡಲಿದೆ ಮತ್ತು 6.73-ಇಂಚಿನ WQHD+ (1,440x3,200 ಪಿಕ್ಸೆಲ್‌ಗಳು) E5 AMOLED ಡಿಸ್ಪ್ಲೇ ಜೊತೆಗೆ 1,500 nits ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ಡೈನಾಮಿಕ್ ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಪ್ಲೇ 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಸಹ ಹೊಂದಿದೆ. ಇದು ಆಪಲ್ ತನ್ನ ಪ್ರೀಮಿಯಂ ಐಫೋನ್ ಮಾದರಿಗಳಲ್ಲಿ ಬಳಸುವ ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ಬ್ಯಾಕ್‌ಪ್ಲೇನ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. Xiaomi 12 Pro ಸ್ನಾಪ್‌ಡ್ರಾಗನ್ 8 Gen 1 SoC ನಿಂದ ಚಾಲಿತವಾಗಿದೆ, ಜೊತೆಗೆ 12GB ವರೆಗೆ LPDDR5 RAM ಅನ್ನು ಹೊಂದಿದೆ.

Xiaomi 12 Pro Camera 

ಫೋಟೋಗಳು ಮತ್ತು ವೀಡಿಯೊಗಳ ಭಾಗದಲ್ಲಿ, Xiaomi 12 Pro ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX707 ಸೆನ್ಸರ್ OIS-ಬೆಂಬಲಿತ ವೈಡ್-ಆಂಗಲ್ f/1.9 ಲೆನ್ಸ್ ಜೊತೆಗೆ 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸಂವೇದಕ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್‌ ಹೊಂದಿದೆ. ಫೋನ್ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸರ್ ಸಹ ಹೊಂದಿದೆ. Xiaomi 12 Pro 4,600mAh ಬ್ಯಾಟರಿ ಜತೆಗೆ 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Xiaomi 12X specifications

Xiaomi 12X Xiaomi 12 ರ ಟ್ವೀಕ್ ಮಾಡಿದ ಆವೃತ್ತಿಯಾಗಿದೆ. ಸ್ಮಾರ್ಟ್‌ಫೋನ್ ಸಾಮಾನ್ಯ Xiaomi 12 ನಲ್ಲಿ ಲಭ್ಯವಿರುವ ಅದೇ 6.28-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಒಂದೇ ರೀತಿಯ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಅದೇ 4,500mAh ಬ್ಯಾಟರಿಯನ್ನು ಸಹ ಹೊಂದಿದೆ. ವ್ಯತ್ಯಾಸಗಳ ವಿಷಯದಲ್ಲಿ, Xiaomi 12X ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ನಿಂದ ಚಾಲಿತವಾಗಿದೆ, ಇದು 12GB RAM ಜತೆಗೆ ಬರಲಿದೆ. ಫೋನ್ 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ.

click me!