
ಬೆಂಗಳೂರು(ಜು.04): ಭಾರತದ ಸ್ಕೂಟರ್ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಹೊಂಡಾ ಆಕ್ಟೀವಾ ಇದೀಗ 2018ರ ನೂತನ ಆಕ್ಟೀವ್ 125 ಸ್ಕೂಟರ್ ಲಾಂಚ್ ಮಾಡಿದೆ. ಹೆಚ್ಚುವರಿ ಫೀಚರ್ಸ್ ಹಾಗೂ ಹೊಸ ಕಲರ್‌ಗಳಲ್ಲಿ ನೂತನ ಆಕ್ಟೀವಾ ಸ್ಕೂಟರ್ ಗ್ರಾಹಕಲಿಗೆ ಸಿಗಲಿದೆ.
ನೂತನ ಹೊಂಡಾ ಆಕ್ಟೀವಾ 125 ಸ್ಕೂಟರ್ ಬೆಲೆ 59,621(ಎಕ್ಸ್ ಶೋರೂಂ) ಇದು ಹಿಂದಿನ ಆಕ್ಟೀವಾ 125 ಸ್ಕೂಟರ್‌ಗಿಂತ 2000 ರೂಪಾಯಿ ಹೆಚ್ಚು ಬೆಲೆ ತರೆಬೇಕಾಗಿದೆ. ಆದರೆ ಇದಕ್ಕೆ ತಕ್ಕಂತೆ ಆಲೋಯ್ ವೀಲ್ಸ್, ಡ್ರಮ್ ಹಾಗೂ ಡಿಸ್ಕ್ ಸೌಲಭ್ಯಗಳನ್ನ ನೂತನ ಆಕ್ಟೀವ್ 125 ಸ್ಕೂಟರ್‌ನಲ್ಲಿ ನೀಡಲಾಗಿದೆ.
ಎಲ್ಇಡಿ ಹೆಡ್‌ಲೈಟ್ಸ್, ಫೋರ್ ಇನ್ ಒನ್ ಇಗ್ನಿನೀಷನ್, ಸೀಟು ತೆರೆಯಲು ಹೊಸ ಬಟನ್, ಇಕೋ ಸ್ವೀಡ್ ಇಂಡಿಕೇಟರ್ ಹಾಗೂ ಡಿಎಲ್‌ಎಕ್ಸ್ ಡಿಸ್ಕ್ ಬ್ರೇಕ್ ಕೂಡ ಈ ನೂತನ ಆಕ್ಟೀವಾ 125 ಸ್ಕೋಟರ್ ವಿಶೇಷತೆ.
124.9 ಸಿಸಿ ಇಂಜಿನ್ ಹೊಂದಿರುವ ನೂತನ ಆಕ್ಟೀವಾ, ಸಿಂಗಲ್ ಸಿಲಿಂಡರ್ ಹಾಗೂ ಫೋರ್ ಸ್ಟ್ರೋಕ್ ಇಂಜಿನ್ ಹೊಂದಿದೆ. ಹೀಗಾಗಿ 8 ಬಿಹೆಚ್‌ಪಿ ಪವರ್ ಹಾಗೂ 10.55 ಎನ್‌ಎಮ್ ಟಾರ್ಕ್ಯೂ ಹೊಂದಿದೆ. ಜೊತೆಗೆ ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್(ಸಿಬಿಎಸ್) ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.