ರಾಯಲ್ ಎನ್‌ಫೀಲ್ಡ್ ಹಿಂದಿಕ್ಕಿಲು ಮತ್ತೆ ಬರುತ್ತಿದೆ ಜಾವಾ ಬೈಕ್

 |  First Published Jul 3, 2018, 10:10 PM IST

ಜಾವಾ ಬೈಕ್ ಭಾರತದಲ್ಲಿ ಮೋಡಿ ಮಾಡಿ ವರುಷಗಳೇ ಉರುಳಿದೆ. ಇದೀಗ ಮತ್ತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಜಾವಾ ಬೈಕ್ ಸಜ್ಜಾಗಿದೆ. ಶೀಘ್ರದಲ್ಲೇ ಹಳೇ ಜಾವಾ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಸೂಪರ್ ಬೈಕ್‌ನ ವಿಶೇಷತೆ ಏನು? ಇಲ್ಲಿದೆ.


ಬೆಂಗಳೂರು(ಜು.03): ಭಾರತದಲ್ಲಿ 80ರ ದಶಕದಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಭಾರಿ ಪೈಪೋಟಿ ನೀಡಿದ ಏಕೈಕ ಬೈಕ್ ಜಾವಾ. ಇದೀಗ ಜಾವಾ ಮತ್ತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗುತ್ತಿದೆ.

ಮಹೀಂದ್ರ ಮೋಟಾರು ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರ ಭಾರದಲ್ಲಿ ಜಾವಾ ಬೈಕ್ ವಾಪಾಸ್ಸಾಗುತ್ತಿರುವುದನ್ನ ದೃಢೀಕರಿಸಿದ ಬೆನ್ನಲ್ಲೇ, ಇದೀಗ ಜಾವಾ ಮೋಟಾರ್ ಬೈಕ್ ಸಂಸ್ಥೆ ಇದೇ ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಿದೆ.

Latest Videos

undefined

80ರ ದಶಕದಲ್ಲಿನ ರೆಟ್ರೋ ಶೈಲಿಯಲ್ಲೇ ನೂತನ ಜಾವಾ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಜಾವಾ 350 ಹಾಗೂ ಜಾವಾ 660 ಬೈಕ್ ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಜಾವಾ ಬೈಕ್ 300 ಸಿಸಿ ಇಂಜಿನ್ ಎಂದು ಹೇಳಲಾಗುತ್ತಿದೆ.

2016ರಲ್ಲಿ ಮಹೀಂದ್ರ ಸಬ್ಸಿಡರಿ, ಕ್ಲಾಸಿಕ್ ಲೆಜೆಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಜಾವಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ, ಭಾರತ ಸೇರಿದಂತೆ ಏಷ್ಯಾ ಮಾರುಕಟ್ಟೆಯಲ್ಲಿ ಮಹೀಂದ್ರ ಸಬ್ಸಿಡರಿ ಹಾಗೂ ಕ್ಲಾಸಿಕ್ ಲೆಜೆಂಡ್ ಮಾರಾಟ ಹಕ್ಕನ್ನ ಪಡೆದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ನೂತ ಜಾವಾ ಬೈಕ್ ವಿಶೇಷತೆ, ಬೆಲೆ ಕುರಿತು ಶೀಘ್ರದಲ್ಲೇ ಜಾವಾ ಕಂಪೆನಿ ಮಾಹಿತಿಗಳನ್ನ ಬಿಡುಗಡೆ ಮಾಡಲಿದೆ. ಮೂಲಗಳ ಪ್ರಕಾರ ಈ ವರ್ಷದಲ್ಲೇ ಜಾವಾ ನೂತನ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

click me!