Namma metro: ವರ್ಷಾಂತ್ಯಕ್ಕೆ ಯೆಲ್ಲೋ ಮೆಟ್ರೋ ಶುರು?

By Kannadaprabha News  |  First Published Jun 30, 2023, 4:34 AM IST

ವರ್ಷಾಂತ್ಯಕ್ಕೆ ‘ನಮ್ಮ ಮೆಟ್ರೋ’ದ ಹಳದಿ ಮಾರ್ಗ ಸೇರಿದಂತೆ ವಿಸ್ತರಿತ ಮಾರ್ಗಗಳು ಜನ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದ್ದು, ದಿನವೊಂದಕ್ಕೆ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಸಾಧ್ಯತೆಯಿದೆ.


ಬೆಂಗಳೂರು (ಜೂ.30) : ವರ್ಷಾಂತ್ಯಕ್ಕೆ ‘ನಮ್ಮ ಮೆಟ್ರೋ’ದ ಹಳದಿ ಮಾರ್ಗ ಸೇರಿದಂತೆ ವಿಸ್ತರಿತ ಮಾರ್ಗಗಳು ಜನ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದ್ದು, ದಿನವೊಂದಕ್ಕೆ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಸಾಧ್ಯತೆಯಿದೆ.

ಪ್ರಸ್ತುತ ಬೆಂಗಳೂರು ಮೆಟ್ರೋ ರೈಲ್ವೇ ನಿಗಮವು 69.66 ಕಿ.ಮೀ. ಉದ್ದಕ್ಕೆ ತನ್ನ ಸೇವೆಯನ್ನು ಕಲ್ಪಿಸುತ್ತಿದೆ. ವರ್ಷಾಂತ್ಯದ ವೇಳೆಗೆ ಸುಮಾರು 30 ಕಿ.ಮೀ ಮಾರ್ಗವನ್ನು ಸೇರ್ಪಡೆ ಮಾಡಲು ಬಿಎಂಆರ್‌ಸಿಎಲ್‌ ಭರದಿಂದ ಕಾಮಗಾರಿ ನಡೆಸುತ್ತಿದೆ. ಆರ್‌.ವಿ.ರಸ್ತೆ-ಬೊಮ್ಮಾಪುರ ನಡುವಿನ ಹೊಸದಾದ ಹಳದಿ ಮಾರ್ಗ ಡಿಸೆಂಬರ್‌ಗೆ ಹಾಗೂ ಈಗಿನ ನೇರಳೆ ಮತ್ತು ಹಸಿರು ಮಾರ್ಗದ ವಿಸ್ತರಿತ ಮೆಟ್ರೋ ಸೆಪ್ಟೆಂಬರ್‌ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

Tap to resize

Latest Videos

ಬೆಂಗಳೂರು: ಫ್ಲಾಟ್‌ ಮಾರಲು ಅಪಾರ್ಚ್‌ಮೆಂಟಲ್ಲೇ ಬಿಡಿಎ ಶಿಬಿರ!

ಒಟ್ಟಾರೆ ವಿಸ್ತರಿತ ಮಾರ್ಗದಿಂದ ನೇರಳೆ (43.5 ಕಿ.ಮೀ.) ಹಾಗೂ ಹಸಿರು ಮಾರ್ಗದ (30.5 ಕಿ.ಮೀ.) ಸ್ಟೆ್ರಚ್‌ ಪೂರ್ಣಗೊಂಡಂತಾಗಲಿದೆ. ಈ ಮಾರ್ಗಗಳ ಸೇರ್ಪಡೆಯಿಂದ ಪ್ರತಿದಿನ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಲಿದ್ದಾರೆ. ಅದೇ ರೀತಿ ಡಿಸೆಂಬರ್‌ ವೇಳೆಗೆ ತಿಂಗಳಿಗೆ ಪ್ರಯಾಣಿಕರ ಸಂಖ್ಯೆ 2 ಕೋಟಿ ದಾಟುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

ಈಗಾಗಲೇ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 5.70 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹೆಚ್ಚುವರಿ 7 ಲಕ್ಷ ಪ್ರಯಾಣಿಕರು ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ 1.46 ಕೋಟಿ, ಮಾಚ್‌ರ್‍ 1.60 ಕೋಟಿ ಹಾಗೂ ಏಪ್ರಿಲ್‌ನಲ್ಲಿ 1.71 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಮೇ ತಿಂಗಳಲ್ಲಿ 1.74 ಪ್ರಯಾಣಿಕರು ಸಂಚರಿಸಿದ್ದು, .43.45 ಕೋಟಿ ಆದಾಯ ಬಂದಿದೆ. ಕಳೆದ ಮೇ 20ರಂದು ಒಂದೇ ದಿನ 7.3 ಲಕ್ಷ ಜನರು ಪ್ರಯಾಣಿಸಿದ್ದು, ಈವರೆಗಿನ ಗರಿಷ್ಠ ಎನ್ನಿಸಿದೆ.

ಒಂದೇ ಹಂತದಲ್ಲಿ ಓಪನ್‌

ಬಿಎಂಆರ್‌ಸಿಎಲ್‌ ಲೆಕ್ಕಾಚಾರದಂತೆ ಈಗಾಗಲೇ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 7 ಲಕ್ಷ ಪ್ರಯಾಣಿಕರು ಸಂಚರಿಸಬೇಕಿತ್ತು. ಆದರೆ, ನಿರೀಕ್ಷೆಯಷ್ಟುಪ್ರಯಾಣಿಕರು ಮೆಟ್ರೋ ಏರುತ್ತಿಲ್ಲ. ಕೆ.ಆರ್‌.ಪುರ-ವೈಲ್ಡ್‌ಫೀಲ್ಡ್‌ ಮಾರ್ಗದಂತೆ ಹಳದಿ ಮಾರ್ಗವನ್ನು ಕೂಡ ಎರಡು ಹಂತಗಳಲ್ಲಿ ಜನಸಂಚಾರಕ್ಕೆ ಮುಕ್ತಗೊಳಿಸಲು ಮೆಟ್ರೋ ಈ ಮೊದಲು ನಿರ್ಧರಿಸಿತ್ತು. ಆದರೆ, ಇದರಿಂದ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಸಾಧ್ಯವಿಲ್ಲ. ಅಲ್ಲದೆ ಫೀಡರ್‌ ಬಸ್‌ಗಳನ್ನು ಒದಗಿಸಬೇಕಾದ ಸಮಸ್ಯೆ ಕೂಡ ಎದುರಾಗುತ್ತದೆ ಎಂದು ಪಾಠ ಕಲಿತಿರುವ ಬಿಎಂಆರ್‌ಸಿಎಲ್‌ ಹಳದಿ ಮಾರ್ಗವನ್ನು ಡಿಸೆಂಬರ್‌ಗೆ ಒಂದೇ ಹಂತದಲ್ಲಿ ತೆರೆಯಲು ನಿರ್ಧರಿಸಿದೆ. ಈ ಮೂಲಕ ಪ್ರಯಾಣಿಕರನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.

ವಯಡಕ್ಟ್ ಅಡಿ ಸಂಚಾರ

ಮೆಟ್ರೋ ಪಿಲ್ಲರ್‌ಗಳ ಕೆಳಭಾಗದಲ್ಲಿ ವಾಹನಗಳು ಸಂಚರಿಸಲು ಅನುವಾಗುವಂತೆ ಬಿಎಂಆರ್‌ಸಿಎಲ್‌ ’ಪೋರ್ಟಲ್‌ ಪಿಯರ್‌’ (ಅವಳಿ ಪಿಲ್ಲರ್‌) ವಿನ್ಯಾಸದಲ್ಲಿ ಪಿಲ್ಲರನ್ನು ನಿರ್ಮಿಸಿದೆ. ದೊಡ್ಡನೆಕ್ಕುಂದಿ ಬಳಿ ಅವಳಿ ಮೇಲ್ಸೇತುವೆ ಕೆಳಗೆ ಶೀಘ್ರವೇ ರಸ್ತೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಮುಂದಿನ ವಾರದಿಂದ ಇಲ್ಲಿ ವಾಹನ ಸಂಚರಿಸಲು ಅನುಕೂಲವಾಗಲಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ನಿಯಂತ್ರಣವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ತುಂಬಿ ತುಳುಕುತ್ತಿದ್ದ ಮೆಟ್ರೋದಲ್ಲಿ ಪುರುಷರ ರಸ್ಲಿಂಗ್‌: ವೀಡಿಯೋ ವೈರಲ್

ಬಿಎಂಆರ್‌ಸಿಎಲ್‌ ಪ್ರಕಾರ ವರ್ಷಾಂತ್ಯಕ್ಕೆ ತೆರೆದುಕೊಳ್ಳಲಿರುವ ಮಾರ್ಗಗಳು

ಮಾರ್ಗ ಎಲ್ಲಿಂದ ಎಲ್ಲಿವರೆಗೆ ಅಂತರ

  • ಹಳದಿ ಮಾರ್ಗ ಆರ್‌.ವಿ.ರಸ್ತೆ ಬೊಮ್ಮಾಪುರ 19.5 ಕಿ.ಮೀ.
  • ಹಸಿರು ವಿಸ್ತರಿತ ನಾಗಸಂದ್ರ ಬಿಐಇಸಿ 3 ಕಿ.ಮೀ.
  • ನೇರಳೆ ವಿಸ್ತರಿತ ಬೈಯಪ್ಪನಹಳ್ಳಿ ಕೆ.ಆರ್‌.ಪುರ 2.5 ಕಿ.ಮೀ.
  • ನೇರಳೆ ವಿಸ್ತರಿತ ಕೆಂಗೇರಿ-ಚಲ್ಲಘಟ್ಟ 1.9 ಕಿ.ಮೀ.
click me!