ರಾಜಕೀಯವಾಗಿ ಮಣಿಸಲು ನಮ್ಮಪ್ಪನ ಮೇಲೆ ಪೋಕ್ಸೋ ಕೇಸ್ ಆರೋಪ ಹೊರಿಸಿದ್ದಾರೆ; ಬಿ.ವೈ. ರಾಘವೇಂದ್ರ

By Sathish Kumar KH  |  First Published Jun 15, 2024, 1:05 PM IST

ರಾಜಕೀಯವಾಗಿ ಮಣಿಸಲು ನಮ್ಮಪ್ಪನ ಮೇಲೆ ಪೋಕ್ಸೋ ಕೇಸ್ ಆರೋಪ ಹೊರಿಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.


ಬೆಂಗಳೂರು (ಜೂ.15): ಒಬ್ಬ ಹೆಣ್ಣು ಮಗಳು ಬೇರೆ ಬೇರೆ ಸಮಸ್ಯೆಗಳನ್ನು ಬಗೆಹರಿ ಹರಿಸಬೇಕೆಂದು ನಮ್ಮ ಮನೆಗೆ ಬಂದಿದ್ದರು. ಆದರೆ, ದುರದ್ದೇಶದಿಂದ ಆ ಮಹಿಳೆ ದೂರು ಕೊಟ್ಟು ಮುಜಗರ ಮಾಡಿದ್ದಾರೆ. ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪನವರ ಮೇಲೆ ಸುಳ್ಳು ಆರೋಪ ಹೊರಿಸಿದ್ದರು. ಈಗ ಈ ಕೇಸಿನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಇದರಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ಕೆಲವರು ಸುಳ್ಳು ಆರೋಪ ತಂದೆ ಮೇಲೆ ಹೊರಿಸಿದ್ದರು. ಈಗ ಮಧ್ಯಂತರ ಜಾಮೀನು ಸಿಕ್ಕಿದೆ‌. ಇದರಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಮಾಜಿ ಸಿಎಂ ಯಡಿಯೂರಪ್ಪನವರು ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಇಂದು ಭದ್ರವಾಗಿದೆ. ಯಡಿಯೂರಪ್ಪ ಜನಪರ ಕಾರ್ಯ ಉತ್ತಮ ಆಡಳಿತ ನೀಡಿದವರು. ಇವರನ್ನು ರಾಜಕೀಯವಾಗಿ ಮಣಿಸುವ ಉದ್ದೇಶದಿಂದಲೇ ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿದರು.

Latest Videos

undefined

ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

ಒಬ್ಬ ಹೆಣ್ಣು ಮಗಳು ಬೇರೆ ಬೇರೆ ಸಮಸ್ಯೆಗಳನ್ನು ಬಗೆಹರಿ ಹರಿಸಬೇಕೆಂದು ನಮ್ ಮನೆಗೆ ಬಂದಿದ್ದರು. ಆದರೆ, ದುರದ್ದೇಶದಿಂದ ಆ ಮಹಿಳೆ ದೂರು ಕೊಟ್ಟು ಮುಜಗರ ಮಾಡಿದ್ದಾರೆ. ಇದರಿಂದ ನಮ್ಮ ಇಡೀ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಿಗೆ ಬಹಳ‌ ನೋವುಂಟು ಮಾಡಿದೆ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಬೇಲ್ ರೀತಿಯಲ್ಲಿ ನಮಗೆ ಅವಕಾಶ ಸಿಕ್ಕಿದೆ. ಬರುವಂತಹ ದಿನಗಳಲ್ಲಿ ಸತ್ಯಾ ಸತ್ಯತೆಯನ್ನು ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸವನ್ನು ವಕೀಲರು ಮಾಡ್ತಾರೆ. ಸುಳ್ಳು ಆರೋಪದ ಮೂಲಕ ನಮ್ಮನ್ನು ರಾಜಕೀಯವಾಗಿ ಮಣಿಸುವಂತ ಪ್ರಕರಣಗಳು ನಮ್ಮ ಮೇಲೆ ಬಹಳಷ್ಟು ನಡೆದಿವೆ. ಅವಾಗ್ಲೆಲ್ಲ ನಮಗೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ. ಇವಾಗ್ಲೂ ವಿಶ್ಚಾಸ ಇದೆ, ಈ ಸುಳ್ಳು ಆರೋಪದಿಂದ ನಮ್ಮ ತಂದೆಯವರು ಮುಕ್ತರಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಯಡಿಯೂರಪ್ಪ ಜೀವನ ಪೂರ್ತಿ ಹೋರಾಟದ ಮೂಲಕ ಈ ನಾಡಿಗೆ ನ್ಯಾಯ ಕೊಟ್ಟವರು. ದಕ್ಷಿಣ ಭಾರತದ ದಲ್ಲಿ ಬಿಜೆಪಿ ಭದ್ರಕೋಟೆಯಾಗಿ ಕರ್ನಾಟಕ ಇದೆ. ಹೀಗಾಗಿ ಇವರ ವಿರುದ್ಧ ಕಾಣದ ಕೈಗಳು ಈ ರೀತಿ ಮಾಡಿದ್ದಾರೆ. ನ್ಯಾಯಲಯ ನಮಗೆ ರಕ್ಷಣೆ ಕೊಟ್ಟಿದೆ. ಮುಂದೆ ನ್ಯಾಯಲಯಕ್ಕೂ‌ ನಾವು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡ್ತೀವಿ. ಯಡಿಯೂರಪ್ಪ ಅವರು ಇಂದು ಮನೆಗೆ ಬರ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದರು.

ಯಡಿಯೂರಪ್ಪನನ್ನು ಬಂಧಿಸದಂತೆ ಸೂಚನೆ ಕೊಟ್ಟ ಕೋರ್ಟ್:  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜೂನ್ 17ಕ್ಕೆ ಮುಂದಿನ ವಿಚಾರಣೆಗೆ ಹಾಜರಾಗಲು ತಿಳಿಸಿದ ಕೋರ್ಟ್ ಮುಂದಿನ ಆದೇಶದವರೆಗೆ ಬಂಧಿಸದಂತೆ ಹೇಳಿದೆ. ಮುಂದಿನ ಸೋಮವಾರ ವಿಚಾರಣೆ ನಡೆಸುವವರೆಗೂ ಒತ್ತಾಯದ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್ ಆದೇಶಿಸಿದೆ. ಮಾಜಿ ಸಿಎಂ ಆಗಿದ್ದು, ಬಿಎಸ್‌ವೈ ಜೀವನದ ಸಂಧ್ಯಾಕಾಲದಲ್ಲಿ ಇದ್ದಾರೆ. ಸ್ವಾಭಾವಿಕವಾಗಿ ಆರೋಗ್ಯದ ಅಡಚಣೆ ಇರುತ್ತವೆ. ಓಡಿ ಹೋಗುವ ವ್ಯಕ್ತಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್, ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ‌ ವಕೀಲರಿಗೆ ನೋಟಿಸ್ ನೀಡಿದೆ. 

ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪಗೆ ರಿಲೀಫ್‌: ಕೋಟಿ ಹೃದಯಗಳ ಪ್ರಾರ್ಥನೆ ಫಲಿಸಿದೆ, ವಿಜಯೇಂದ್ರ

ಅರ್ಜಿಯಲ್ಲಿ ಮನವಿ ಮಾಡಿದ್ದೇನು? : ತಮಗೆ 81 ವರ್ಷವಾಗಿದ್ದು, ಹಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದೇನೆ. ಜತೆಗೆ, ಕಾಲ ಕಾಲಕ್ಕೆ ವೈದ್ಯರ ಭೇಟಿ ಮಾಡುವುದು ಔಷಧಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ತನ್ನ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಬಹದಾದ ಆರೋಪ ಇಲ್ಲ. ಕೇವಲ ಏಳು ವರ್ಷಗಳ ಶಿಕ್ಷೆಯಾಗುವಂತಹ ಆರೋಪವಿದೆ. ಇಂತಹ ಪ್ರಕರಣದಲ್ಲಿ ವಿಚಾರಣಾ ಸಂದರ್ಭದಲ್ಲಿ ಬಂಧನ ಮಾಡದೆ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ. ಅದರಂತೆ ತಮಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಅರ್ಜಿಯಲ್ಲಿ ಕೋರಿದ್ದರು.

click me!