ಅಂಬೇಡ್ಕರ್ ಬಗ್ಗೆ ಮಾತನಾಡುವ ಕಳ್ಳರು ಮೊದಲು ಅವರ ಪುಸ್ತಕ ಓದಲಿ: ಕಾಂಗ್ರೆಸ್ ಮುಖಂಡ ಅಜ್ಜಂಪಿರ್ ಖಾದ್ರಿ ವಿರುದ್ಡ ಯತ್ನಾಳ್ ಕಿಡಿ

By Ravi Janekal  |  First Published Nov 14, 2024, 2:02 PM IST

ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆ ವಿರುದ್ಡ ಇದ್ದಿರಬಹುದು ಆದರೆ ಅವರು ಯಾವತ್ತೂ ಹಿಂದೂ ವಿರೋಧಿಯಾಗಿರಲಿಲ್ಲ, ದೇಶದ್ರೋಹಿಯಾಗಿರಲಿಲ್ಲ. ಅಂಬೇಡ್ಕರ್ ದೇಶಕ್ಕಾಗಿ ದುಡಿದ, ದೇಶಕ್ಕಾಗಿ ಮಿಡಿದವರು. ಆದರೆ ದೇಶದ್ರೋಹಿಗಳ ಪರ ನಿಂತಿರುವ ಈ ಕಳ್ಳರು(ಕಾಂಗ್ರೆಸ್) ಅಂಬೇಡ್ಕರ್ ಫೋಟೊ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನವೆಸಿದರು.


ಚಿಕ್ಕೋಡಿ (ನ.14): ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯ್ತು. ಪಂಚಮಸಾಲಿಗೆ ಮೀಸಲಾತಿ ನೀಡುವ ಬಗ್ಗೆ ಎಷ್ಟೋ ಸಲ ಅವರು ಆಶ್ವಾಸನೆ ಕೊಟ್ಟರು ಆದರೆ ಮೊದಲ‌ ಸಭೆಯಲ್ಲೇ ಮೀಸಲಾತಿ ಬಗ್ಗೆ ನಕಾರಾತ್ಮಕವಾಗಿ ಮಾತಾಡಿದ್ರು. ಪಂಚಮಸಾಲಿಗೆ ಮೀಸಲಾತಿ ನೀವಬೇಕು ಇಲ್ಲದಿದ್ರೆ ನಾವು ನಮ್ಮ ಗುರುಗಳು ಸೇರಿಕೊಂಡು ಹೋರಾಟಕ್ಕೆ ಇಳಿಯುತ್ತೇವೆ. ಬೆಳಗಾವಿ ಅಧಿವೇಶನದ ವೇಳೆ ಟ್ರ್ಯಾಕ್ಟರ್ ತಂದು ಸದನ ನಡೆಯದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಎಚ್ಚರಿಕೆ ನೀಡಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮಗೋಳಖೋಡ ಪಟ್ಟಣದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಶೀಘ್ರವಾಗಿ ಮೀಸಲಾತಿ ವಿಚಾರವಾಗಿ ಗುರುಗಳನ್ನು ಕರೆದು ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಬೇಕು. ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನು ಅನ್ನೋದನ್ನ ಸ್ಪಷ್ಟಪಡಿಸಬೇಕು. ನೋಟಿಫಿಕೇಶನ್ ಮಾಡಿದ್ರೆ ಡಿ.9ರ ಹೋರಾಟ ಸ್ಥಗಿತಗೊಳಿಸುತ್ತೇವೆ. ಇಲ್ಲವಾದ್ರೆ ದೊಡ್ಡ ಹೋರಾಟ ನಡೆಯುತ್ತೆ. ಏನೇ ಅನಾಹುತವಾದ್ರೂ ಅದಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರವೇ ಕಾರಣವಾಗುತ್ತೆ ಎಂದು ಎಚ್ಚರಿಸಿದರು.

Tap to resize

Latest Videos

undefined

ಮೋದಿ ಬಡವರನ್ನ ಬೆಳೆಸುವ ಬದಲು ಅದಾನಿಯನ್ನ ಬೆಳೆಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ವಕ್ಫ್ ವಿರುದ್ಡ ನಮ್ಮ ಹೋರಾಟದಿಂದ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಮೊನ್ನೆ ನಾವು ನಡೆಸಿದ ಹೋರಾಟದಿಂದ ವಕ್ಫ್ ನೋಟಿಸ್ ಹಿಂಪಡೆಯುತ್ತಿದ್ದಾರೆ. ಆದ್ರೇ ಅದು ಶಾಶ್ವತ ಅಲ್ಲಾ, ಗೆಜೆಟ್ ನೋಟಿಫಿಕೇಶನ್ ಮಾಡಿದ್ದು ಎಲ್ಲಾನೂ ರದ್ದು ಪಡಿಸಬೇಕು. ರೈತರ ಜಮೀನು, ಗುಡಿ ಗುಂಡಾರ, ಮಠ ಹೋಗ್ತಿವೆ. ಅವರಿಗೆ ನಮಾಜ್ ಮಾಡಲು, ಸ್ಮಶಾನ ಭೂಮಿ ನಮ್ಮ ಹಿಂದೂಗಳದು ಕೊಟ್ರೆ ಆ ಸರ್ವೇ ನಂಬರ್ ನ ಎಲ್ಲ ಭೂಮಿ ನಮ್ಮದು ಅನ್ನೋ ಸ್ಥಿತಿ ಬಂದಿದೆ. ಒಂದಿಂಚೂ ಭೂಮಿ ಮೇಲೆ ವಕ್ಫ್ ಅನ್ನೋದು ಇರಬಾರದು ಇದರ ಪರವಾಗಿ ಕರ್ನಾಟಕದ ಕಾಂಗ್ರೆಸ್ ಎಂಪಿಗಳು ವೋಟ್ ಹಾಕಬೇಕು. ಇಲ್ಲವಾದ್ರೇ ಮುಂದಿನ‌ ದಿನಗಳಲ್ಲಿ ರೈತರು ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ಕಾಂಗ್ರೆಸ್ ಸಂಸದರಿಗೆ ಎಚ್ಚರಿಕೆ ನೀಡಿದರು ಇದೇ ವೇಳೆ, ಉಪ ಚುನಾವಣೆ ಬಳಿಕ ಬಿಜೆಪಿಯಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಅವರನ್ನ ಕೇಳಿ ಎಂದ ಯತ್ನಾಳ್.

ಅಜ್ಜಂಪಿರ್ ಖಾದ್ರಿ ವಿರುದ್ಡ ಯತ್ನಾಳ್ ಕಿಡಿ:

ಅಂಬೇಡ್ಕರ್ ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ರು ಎಂಬ ಕಾಂಗ್ರೆಸ್ ಮುಖಂಡ ಅಜ್ಜಂಪಿರ್ ಖಾದ್ರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಅಜ್ಜಂಪಿರ್ ಖಾದ್ರಿ ಒಬ್ಬ ನಾಲಾಯಕ್. ಅಜ್ಜಂಪಿರ್ ಖಾದ್ರಿ ಅಂಬೇಡ್ಕರ್ ಬಗ್ಗೆ ಅಧ್ಯಯನ ಮಾಡಿಲ್ಲ. ಅಂಬೇಡ್ಕರ್ ಅವರಿಗೆ ಹೈದ್ರಾಬಾದ್ ನಿಜಾಮ್ ಆಸೆ ಹಚ್ಚಿದ. ನೀವು ಇಸ್ಲಾಂ ಸೇರಿದ್ರೆ ಅರ್ಧ ಆಸ್ತಿ ಕೊಡ್ತೇನಿ ಎಂದ. ಆದರೆ ನನ್ನ ಕುಟುಂಬದ ಉದ್ಡಾರಕ್ಕಾಗಿ ಇಂಥ ಹೇಯ ಕೆಲಸ ಮಾಡೊಲ್ಲ ಅಂದವರು ಅಂಬೇಡ್ಕರ್. ಇಸ್ಲಾಂಗೆ ನಾನು ಸೇರಿದ್ರೂ ನಮ್ಮ ಮತ್ತೆ ಅಲ್ಲಿ ದಲಿತರಾಗೇ ಕಾಣ್ತಾರೆ. ಅದಕ್ಕೆ ನಾನು ಇಸ್ಲಾಂ ಸೇರೊಲ್ಲ ಎಂದು ನಿಜಾಮ್ ಕೊಟ್ಟ ಆಹ್ವಾನ ಅಂಬೇಡ್ಕರ್ ತಿರಸ್ಕರಿಸಿದರು. ಬಳಿಕ ಬೌದ್ಡ ಧರ್ಮ ಸ್ವೀಕರಿಸಿದರು.

ಭಾರತದಲ್ಲಿ ಇಸ್ಲಾಂ ಸೇರಿದ್ರೇ ಇಡೀ ದೇಶ ರಾಷ್ಟ್ರಾಂತರ ಆಗುತ್ತೆ. ಒಗ್ಗಟ್ಟು ಇರೋದಿಲ್ಲ, ಮುಸ್ಲಿಮರು ಯಾವತ್ತೂ ಇತರೆ ಧರ್ಮದವರ ಜೊತೆ ಶಾಂತಿಯಿಂದ ಇರೋದಿಲ್ಲ. ಹಿಂದೂ ಮುಸ್ಲಿಂ ಜಗಳ ಆಗುತ್ತೆ ಅದಕ್ಕೆ ನಾನು ಅವಕಾಶ ಕೊಡಲ್ಲ. ಬೌದ್ಧ ಧರ್ಮ ಭಾರತದಲ್ಲೇ ಜನ್ಮ ತಾಳಿದ ಧರ್ಮ. ಹೀಗಾಗಿ ಬೌದ್ಡ ಧರ್ಮ ಸ್ವೀಕಾರ ಮಾಡುತ್ತೇನೆ ಎಂದವರು ಅಂಬೇಡ್ಕರ್. ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ರೇ ಅಲ್ಲಿರುವ ಹಿಂದುಗಳನ್ನ ಇಲ್ಲಿಗೆ, ಇಲ್ಲಿರುವ ಮುಸ್ಲಿಂ ಅಲ್ಲಿಗೆ ಕಳುಹಿಸಿ. ಈ ಇಸ್ಲಾಂ ಅನ್ನೋ ಧರ್ಮದಲ್ಲಿ ಯಾವತ್ತೂ ಸಹೋದರತ್ವ ಇಲ್ಲ. ಭ್ರಾತೃತ್ವ ಅನ್ನೋದು ಅವರ ಧರ್ಮದವರಿಗೆ ಮಾತ್ರ ಸೀಮಿತ. ಇವರು ಎಲ್ಲಿವರೆಗೂ ಭೂಮಿ ಮೇಲೆ ಇರ್ತಾರೆ ಇಂತಹದ್ದೇ ಗದ್ದಲ ಮಾಡ್ತಾ ಇರ್ತಾರೆ. ಭಯೋತ್ಪಾದಕರನ್ನ ಹುಟ್ಟುಹಾಕ್ತಾರೆ ಅಂತಾ ಪಾರ್ಟಿಷನ್ ಆಫ್ ಪುಸ್ತಕದಲ್ಲಿ ಬರ್ದಿದ್ದಾರೆ.ಇದನ್ನ ಕಾಂಗ್ರೆಸ್ ಯಾರಾರು ಅಯೋಗ್ಯರು ಓದಿಲ್ಲ ಅಂಬೇಡ್ಕರ್ ಅವರ ಆ ಬುಕ್ ಮೊದಲು ಓದಲಿ ಎಂದು ತಿರುಗೇಟು ನೀಡಿದರು.

ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆ ವಿರುದ್ಡ ಇದ್ದಿರಬಹುದು ಆದರೆ ಅವರು ಯಾವತ್ತೂ ಹಿಂದೂ ವಿರೋಧಿಯಾಗಿರಲಿಲ್ಲ, ದೇಶದ್ರೋಹಿಯಾಗಿರಲಿಲ್ಲ. ಅಂಬೇಡ್ಕರ್ ದೇಶಕ್ಕಾಗಿ ದುಡಿದ, ದೇಶಕ್ಕಾಗಿ ಮಿಡಿದವರು. ಆದರೆ ದೇಶದ್ರೋಹಿಗಳ ಪರ ನಿಂತಿರುವ ಈ ಕಳ್ಳರು(ಕಾಂಗ್ರೆಸ್) ಅಂಬೇಡ್ಕರ್ ಫೋಟೊ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈ ಜಿಲ್ಲೆಯಲ್ಲೂ ಕೆಲವು ಕಳ್ಳರು ಅಂಬೇಡ್ಕರ್ ಹೆಸರೇಳಿಕೊಂವು ಸ್ಮಶಾನದಲ್ಲಿ ಪೂಜೆ ಮಾಡೋದು, ಊಟ ಮಾಡೋದು ರಾಜಕೀಯ ಮಾಡುತ್ತಿದ್ದಾರೆ. 1942ದಲ್ಲಿ ಅಂಬೇಡ್ಕರ್ ಬಹಳ ಕ್ಲಿಯರ್ ಬರೆದಿದ್ದಾರೆ ಇವರು ಮೊದಲು ಅಂಬೇಡ್ಕರ್ ಪುಸ್ತಕ ಓದಲಿ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿ‌ ಗೆ ತಿರುಗೇಟು ನೀಡಿದರು.

'ಪಂಚಮಸಾಲಿಗೆ ಈ ಲಫಂಗ ಮೀಸಲಾತಿ ನೀಡೊಲ್ಲ': ಸಿಎಂ ವಿರುದ್ಡ ಮನಗೂಳಿ ಹಿರೇಮಠ ಸ್ವಾಮೀಜಿ ವಾಗ್ದಾಳಿ!

ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನವರನ್ನ ಚಪ್ಲಿಲೇ ಬಡಿಬೇಕು ಎಂದು ಕನ್ನೇರಿ ಮಠದ ಸ್ವಾಮೀಜಿ ಹೇಳಿರುವ ಮಾತಿನಲ್ಲಿ ನಿಜವಿದೆ. ಖಾದ್ರಿಗೆ ಬುದ್ದಿ ಇಲ್ಲ, ಮಾನ ಮರ್ಯಾದೆನೂ ಇಲ್ಲ. ಅಂಬೇಡ್ಕರ್ ವಿಚಾರ ಓದಿಲ್ಲ ನಮ್ಮ ಜನ ಅದೇ ಈ ದೇಶದ ದುರ್ದೈವ. ಬರೀ ಗಾಂಧಿ ಬೆನ್ನು ಹತ್ತಿದ್ದಾರೆ ನಮ್ಮ ಜನರು. ಗಾಂಧಿಗಿಂತ ಶ್ರೇಷ್ಠ ಮನುಷ್ಯ ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರು ಅವಾಗಲೇ ಮಹಾತ್ಮ, ರಾಷ್ಟ್ರಪಿತ ಅನ್ನಬೇಡಿ ಅಂತಾ ಹೇಳಿದ್ರು. ರಾಷ್ಟ್ರಪಿತ ಹೇಗೆ ಆಗ್ತಾರೆ ರೀ ದೇಶಕ್ಕ ಎನೂ ಗಂಡ ಇರ್ತಾನಾ.ಇದನ್ನ ನಾನು ಹೇಳಿಲ್ಲ ಅಂಬೇಡ್ಕರ್ ಅಂಬೇಡ್ಕರ್ ಅವರು ಬರೆದಿದ್ದಾರೆ ಓದಿ ಎಂದ ಯತ್ನಾಳ್.

click me!