'ಪಂಚಮಸಾಲಿಗೆ ಈ ಲಫಂಗ ಮೀಸಲಾತಿ ನೀಡೊಲ್ಲ': ಸಿಎಂ ವಿರುದ್ಡ ಮನಗೂಳಿ ಹಿರೇಮಠ ಸ್ವಾಮೀಜಿ ವಾಗ್ದಾಳಿ!

By Ravi Janekal  |  First Published Nov 14, 2024, 10:43 AM IST

ಪಂಚಮಸಾಲಿ 2ಎ ಮೀಸಲಾತಿ ಈ ಸರ್ಕಾರದಿಂದ ಸಿಗೊಲ್ಲ. ಲಫಂಗ ಸಿಎಂ ಸಿದ್ದರಾಮಯ್ಯ ಮೀಸಲಾತಿ ನೀಡೊಲ್ಲ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ವಿರುದ್ಡ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.


ವಿಜಯಪುರ (ನ.14): ಪಂಚಮಸಾಲಿ 2ಎ ಮೀಸಲಾತಿ ಈ ಸರ್ಕಾರದಿಂದ ಸಿಗೊಲ್ಲ. ಲಫಂಗ ಸಿಎಂ ಸಿದ್ದರಾಮಯ್ಯ ಮೀಸಲಾತಿ ನೀಡೊಲ್ಲ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ವಿರುದ್ಡ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಯುವಕ ಸಂಘ ಹಾಗೂ ಕೊಲ್ಹಾರ ತಾಲ್ಲೂಕು ಪಂಚಮಸಾಲಿ ಸಮಾಜವತಿಯಿಂದ ಹಮ್ಮಿಕೊಂಡಿದ ಕಿತ್ತೂರ ರಾಣಿ ಚನ್ನಮ್ಮನ 246ನೇ ಜಯಂತ್ಯೋತ್ಸವ ಹಾಗೂ 200ನೇ ವಿಜಯೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿದ ಶ್ರೀಗಳು, ಈ ಲಫಂಗ್ ಸಿಎಂ ಸಿದ್ದರಾಮಯ್ಯ ಇರೋವರೆಗೂ ಮೀಸಲಾತಿ ಸಿಗೊಲ್ಲ ಎಂದು ಶ್ರೀಗಳಿಗೆ ಹೇಳಿದ್ದೆ. ಅಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಹಾಕಿದ್ದರು. ನಾನಾಗಿದ್ರೆ ಸಿಎಂ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದೆ. ಆದ್ರೇ, ಶ್ರೀಗಳು ಸುಮ್ಮನೆ ಇದ್ರು ಎಂದು ಕಿಡಿಕಾರಿದರು.

Tap to resize

Latest Videos

undefined

ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್‌ ನಾಯಕ್‌ಗೆ ಇಡಿ ವಿಚಾರಣೆ

ಸಿದ್ದರಾಮಯ್ಯ ಸಿಎಂ ಆದಾಗೆಲ್ಲ ಗದ್ದಲ ಮಾಡ್ತಾರೆ. ಪಂಚಮಸಾಲಿ 2ಎ ಮೀಸಲಾತಿಯಲ್ಲಿ ಸಿಎಂ ಸಿದ್ದರಾಮಯ್ಯ ನಾಟಕ ಮಾಡಿಕೊಂಡು ಹೋಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮೀಸಲಾತಿ ನೀಡಲ್ಲ. ಬೇರೆಯಾದ್ರಾದೂ ಸಿಎಂ ಆದಾಗ ಪಂಚಮಸಾಲಿ 2ಎ ಮೀಸಲಾತಿ ಸಿಗಬಹುದು ಆದರೆ ಈ ಸರ್ಕಾರದಲ್ಲಿ ಸಿಗೊಲ್ಲ ಎಂದು ಪುನರುಚ್ಚರಿಸಿದರು.

click me!